POK - ಕಾಣದ ರೇಖೆಯ ಕಥನ

POK - ಕಾಣದ ರೇಖೆಯ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಕುಂಟಿನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ
ಪುಸ್ತಕದ ಬೆಲೆ
120

ಜಗತ್ತೇ ಪಹಲ್ಗಾಮ್‌ ಕುರಿತು ಮಾತನಾಡುತ್ತಿದ್ದ ಹೊತ್ತಲ್ಲಿ ಇಷ್ಟೇ ಅಲ್ಲ, ಇದರ ಹಿಂದೆ ವರ್ಷಾನುಗಟ್ಟಲೆ ನಡೆದ ಕೃತ್ಯಗಳಿವೆ ಎಂಬ ಸತ್ಯವನ್ನು ಬಿಚ್ಚಿಟ್ಟ ಕೃತಿಯಿದು. ನಾವು ಶಾಲೆಯಲ್ಲಿ ಇತಿಹಾಸ ಓದುತ್ತೇವೆ. ಅದರಲ್ಲಿ ಯಾವುದು ಸತ್ಯ ಗೊತ್ತಿಲ್ಲ. ಅಥವಾ ಅದರಲ್ಲಿ ಎಲ್ಲ ಸತ್ಯವನ್ನು ಹೇಳಲಾಗಿದೆಯೆ ಎಂದರೆ ಇಲ್ಲ ಎನ್ನಬೇಕಿದೆ.

ಭಾರತ ಪಾಕ್ ಕುರಿತಾಗಿ ಇಲ್ಲಿರುವ ಎಷ್ಟೋ ವಿಷಯಗಳು ನಮ್ಮ ಪಠ್ಯದಲ್ಲಾಗಲಿ ಅಥವಾ ಪಾಠ ಮಾಡುವಾಗಾಗಲಿ ನಮಗ್ಯಾರಿಗೂ ಹೇಳೇ ಇಲ್ಲ. ಪಠ್ಯ ಪುಸ್ತಕದಲ್ಲಿ ಹೇಳಿರುವುದರ ಜಾಡು ಹಿಡಿದು ಇನ್ನೇನಾಗಿದೆ ಎಂದು ತಿಳಿಯುವ ಪ್ರಯತ್ನವನ್ನು ನಾವೂ ಮಾಡಿಲ್ಲ.‌ ಹಾಗಾಗಿ ಈ ವಿಷಯಗಳು ಬೂದಿ ಮುಚ್ಚಿದ ಕೆಂಡದಂತಾಗಿದೆ. ಬೂದಿಯನ್ನು ಬದಿ ಸರಿಸುವ ಕೆಲಸವನ್ನು ಕುಂಟಿನಿಯವರು ಮಾಡಿದ್ದಾರೆ.

ಇದು ಈಗಿನ ಸಮಯಕ್ಕೆ ಅತ್ಯಂತ ಅವಶ್ಯವಿರುವ ಪುಸ್ತಕ. ಪಾಕಿಸ್ತಾನದ ಹುನ್ನಾರಗಳು, ಈಗಿನ ಪರಿಸ್ಥಿತಿ, ಅಲ್ಲಿನ ಜಿಯೋಪಾಲಿಟಿಕ್ಸ್, ನಮ್ಮ ರಾಜಕೀಯದ ಬ್ಲಂಡರ್ ಎಲ್ಲವನ್ನು ಪುಸ್ತಕ ಹೇಳುತ್ತದೆ. ಸಾಮಾನ್ಯವಾಗಿ ಇಂತಹ ಪುಸ್ತಕಗಳಲ್ಲಿ ಒಂದು ರಾಜಕೀಯದ ಬಣ್ಣ ಹತ್ತಿರುತ್ತದೆ. ಆದರೆ ಈ ಪುಸ್ತಕ ಯಾವುದೋ ಒಂದು ಪಕ್ಷದ ಪರ ನಿಲ್ಲದೆ ವಸ್ತುನಿಷ್ಠವಾಗಿ ವಿಷಯ ಪ್ರತಿಪಾದನೆ ಮಾಡಿದೆ.

ಕುಂಟಿನಿಯವರ ಮಾತು, ಬರಹದ ಶೈಲಿಯೆ ಚಂದ. ಖಡಕ್ ಮತ್ತು ನೇರ. ಈ ಪುಸ್ತಕಕ್ಕಾಗಿ ಅವರು ಮಾಡಿದ ಅಧ್ಯಯನಕ್ಕೊಂದು ಸಲಾಂ. ಪುಸ್ತಕದ ಮುಖಪುಟ ವಿಷಯಕ್ಕೆ ತಕ್ಕಂತೆ ಅದ್ಭುತವಾಗಿ ಮೂಡಿಬಂದಿದೆ. ಕಾಣದ ರೇಖೆಯ ಹಿಂದಿರುವ ಕಾಣದ ಕಥೆಗಳನ್ನು ನೀವು ಕಾಣಿಸಿದ್ದೀರಿ!