ಸರದಾರ್ ಪಟೇಲರ ಅತಿ ದೊಡ್ಡ ಪ್ರತಿಮೆ ರೆಡಿಯಾಗಲಿದೆಯಂತೆ. ಈ ಪ್ರತಿಮೆಯ ಉದ್ದೇಶ

ಸರದಾರ್ ಪಟೇಲರ ಅತಿ ದೊಡ್ಡ ಪ್ರತಿಮೆ ರೆಡಿಯಾಗಲಿದೆಯಂತೆ. ಈ ಪ್ರತಿಮೆಯ ಉದ್ದೇಶ

Submitted by H A Patil Thu, 10/31/2013 - 20:26

ಮಾನ್ಯರೆ ವಂದನೆಗಳು
ಸರ್ದಾರ ಪಟೇಲರ ಅತಿ ದೊಡ್ಡ ಪ್ರತಿಮೆ ತಯಾರಿಸುವ ಉದ್ದೇಶ ರಾಜಕೀಯ ಲಾಬ ಪಡೆಯುವ ಸ್ಪಷ್ಟ ಹುನ್ನಾರ, ಇದು ನರೇಂದ್ರ ಮೋದಿಯ ಜನ ಸಾಮಾನ್ಯರ ಅಮಾಯಕ ಲಾಭ ಪಡೆಯುವ ದೂರಾಲೋಚನೆ ಎನ್ನ ಬಹುದು.

Submitted by ಗಣೇಶ Thu, 10/31/2013 - 23:53

ಅಮೆರಿಕ ಮೋದಿಗೆ ವೀಸಾ ನಿರಾಕರಿಸಿದಾಗ, ಅಮೆರಿಕಾದ "Statue of liberty"ಗೆ ಸವಾಲು ಹಾಕುವಂತೆ ಅದಕ್ಕಿಂತ ದೊಡ್ಡದಾದ "Statue of unity"ಮಾಡಲು ಮೋದಿ ಮತ್ತು ಅವರ ಬಳಗ ಹೊರಟಿರುವುದು. ಸರ್ದಾರ್ ಪಟೇಲರ ನೆನಪಿಗಾಗಿ ೨೦೦೦ಕೋಟಿಯ ಪ್ರತಿಮೆಯೇ ಬೇಕಾಗಿರಲಿಲ್ಲ. "ಪಟೇಲರು ಕಾಂಗ್ರೆಸ್ಸಿಗರು" ಎಂದು ರಾಜಕೀಯ ಮಾಡುತ್ತಿರುವುದು ಕಾಂಗೈಗಳು.
ವೈಯಕ್ತಿಕ ಪ್ರತಿಷ್ಠೆಗಾಗಿ( ಪ್ರವಾಸೋದ್ಯಮ ಅಭಿವೃದ್ಧಿ ಎಂದೆಲ್ಲಾ ಹೇಳಿದರೂ) ಈ ಹುಚ್ಚು ಸಾಹಸ. ಇದನ್ನೇ ಸವಾಲಾಗಿ ಸ್ವೀಕರಿಸಿ ಕನ್ನಂಬಾಡಿ ಕಟ್ಟೆ ಎದುರು ಸರ್ದಾರ್ ಪ್ರತಿಮೆಗಿಂತಲೂ ದೊಡ್ಡ "ಇಂದಿರಾ ಪ್ರತಿಮೆ"(Statue of shakti) ಸ್ಥಾಪಿಸಲು ಇಲ್ಲಿನ ಕಾಂಗೈಗಳು ಹೊರಟರೆ..? :(

Submitted by anand33 Fri, 11/01/2013 - 18:07

ಸರ್ದಾರ್ ಪಟೇಲರು ಗಾಂಧಿ ಅನುಯಾಯಿ. ಆದರೆ ಮೋದಿ ಆರೆಸ್ಸೆಸ್ ಅನುಯಾಯಿ. ಸ್ವತಃ ಪಟೇಲರೇ ಗಾಂಧಿ ಹತ್ಯೆಗೆ ಅರೆಸ್ಸೆಸ್ ಸಿದ್ಧಾಂತಗಳು ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಮೋದಿ 2070 ಕೋಟಿ ರೂಪಾಯಿ ಮೊತ್ತದ ಅಪಾರ ಹಣ ಕೇವಲ ಪ್ರತಿಮೆಗೆ ವಿನಿಯೋಗಿಸುವುದು ಈ ದೇಶದ ಬಡಬಗ್ಗರಿಗೆ ಎಸಗುವ ಘೋರ ಅಪಚಾರ ಅದೂ ಸರಳ ಜೀವನವನ್ನು ಪಾಲಿಸಿದ ಪಟೇಲರ ಹೆಸರಿನಲ್ಲಿ. ಪಟೇಲರ ಹೆಸರಿನಲ್ಲಿ ಮೋದಿ ರಾಷ್ಟ್ರ ನಾಯಕನಾಗಲು ಹವಣಿಸುತ್ತಿರುವುದು ಸ್ಪಷ್ಟ.

Submitted by venkatb83 Thu, 11/07/2013 - 18:40

ಮೇಲ್ನೋಟಕ್ಕೆ ಇದು ಅಮೇರಿಕ ವೀಸ ನಿರಾಕರಿಸಿದ್ದಕ್ಕೆ -ಅಲ್ಲಿನ ದೈತ್ಯ ಪ್ರತಿಮೆಗೆ ಸೆಡ್ಡು ಹೊಡೆಯುವ ಹಾಗೆ ಹಾಗೂ ಇಲ್ಲಿನ ಎದುರಾಳಿ ರಾಜಕೀಯ ಪಕ್ಷಕ್ಕೆ ಮೈ ಚಿವುಟಿ ಎಚ್ಚರ ಆಗುವ ಹಾಗೆ ಮಾಡಿತು . ಈಗ ಎಲ್ಲೆಡೆ ಬಹು ದಿನಗಳ ನಂತರ ಪಟೇಲರ ಬಗ್ಗೆ ಅವರು ನಮ್ಮವರು ಎಂದು ಸ್ಪರ್ಧೆಗೆ ಬಿದ್ದ ರಾಜಕೀಯ ಪಕ್ಷಗಳು ..!!

ಆ ಮೊತ್ತದ ಈ ಯೋಜನೆಗೆ ರೈತರ ಅನುಪಯೋಗಿ ಕಬ್ಬಿಣ ಹಳ್ಳಿ ಹಳ್ಳಿಯಿಂದ ತರಿಸಿ ಕಾಯಿಸಿ ಬೇಯಿಸಿ ಕರಗಿಸಿ ಪ್ರತಿಮೆ ನಿರ್ಮಾಣ ಎಂದರು .
ಅದ್ಯಾಗ್ಗೂ ಈಗಾಗ್ಲೇ ಇರುವ ಪ್ರತಿಮೆಗಳು ಮೂರ್ತಿಗಳು ನೀರು(ಮಳೆ )ಚಳಿ ಬಿಸಿಲು ಮತ್ತು ಕಾಗೆ ಪಾಗೆಗಳ ಹಿಕ್ಕೆ ಕಾರಣ ವಿಕಾರವಾಗಿ -ವರ್ಷಕ್ಕೊಮ್ಮೆ ಮಾತ್ರ ನೀರ್ ಸ್ನಾನ ಮಾಡುವ ಯೋಗ ಕಾಣುತ್ತಿವೆ ,ಹೀಗಿರುವಾಗ ಪಟೇಲರ ಹೆಸರು ಅಜರಾಮರ ಮಾಡಲು ಈ ತರಹದ ದೈತ್ಯ ಕಸರತ್ತು ಅವಶ್ಯಕತೆ ಇರಲಿಲ್ಲ .
ಅದರ ಬದಲಿಗೆ ರಸ್ತೆ -ಉದ್ಯಾನ -ನದಿ -ಸರೋವರ (ಆಗಲೇ ಒಂದು ಆಣೆಕಟ್ಟೆ ಗೆ ಹೆಸರಿದೆ )ಗಳಿಗೆ ಹೆಸರು ಇಕ್ಕಿದರೆ ಅವರ ಹೆಸರೂ ಸಾರ್ಥಕ ..
ಸಧ್ಯ ಎದುರಾಳಿ ಪಕ್ಷದವರು ನಾವ್ ಪಟೇಲರ ಪ್ರತಿಮೆ ಮೀರಿಸುವ ಪ್ರತಿಮೆ ನಿರ್ಮಿಸುವೆವು ಎಂದು ಎಲ್ಲೋ ಹೇಳಿದ ಹಾಗಿಲ್ಲ .. !!

ಸದ್ಯಕ್ಕೆ ಇದು ರಾಜಕೀಯ ಲೇಪಿತ ವಿಷ್ಯ ಅನಿಸುತ್ತಿದೆ ..
ನಮ್ ಜನ ನಮ್ ಹಿರಿಯರು ಬೇಡ ಅಂದಿದ್ದೆ ಮಾಡೋದು .. ನಮ್ಮ ಹಿರಿಯರಿ ಗ್ ಯಾರಿಗೂ ತಾವ್ ಈ ಪ್ರತಿಮೆ ಮೂರ್ತಿಗಳಾಗಿ ಇಲ್ ನಡೆಯೋ ಘೋರ ಅವಮಾನ ಅಪರಾಧ ನೋಡುತ ಮೂಕ ಸಾಕ್ಷಿ ಆಗುವ ಅನಿಸಿರಲಿಲ್ಲ ..

ಶುಭವಾಗಲಿ
\।

Submitted by NAVEEN KUMAR K.R Fri, 12/20/2013 - 13:51

ಪಟೇಲರು ಕಾಂಗ್ರೇಸಿನವರೇ ಆದರೂ,ಕಾಂಗ್ರೆಸಿಗರು ಮಾಡದಂತಹ‌ ಸುಕಾರ್ಯವನ್ನು ಮೋದಿಯವರು ಮಾಡುತ್ತಿದ್ದಾರೆ.ಇದನ್ನೇಕೆ ರಾಜಕೀಯದ‌ ಮತ್ತೊಂದು ಮುಖ‌ ಎಂದು ಹೇಳುತ್ತಿದ್ದಾರೋ.ನನಗೆ ತಿಳಿಯುತ್ತಿಲ್ಲ‌.