ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!
ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ... ಇದು ತಪ್ಪಾದ ಉಚ್ಚಾರಣೆ .
"ಶಿವಪೂಜೆ ನಡುವೆ ಕರಡಿಗೆ(ಲಿಂಗವೊತ್ತಿಗೆ - ಲಿಂಗವನ್ನು ಇಟ್ಟುಕೊಳ್ಳುವ ಒಂದು ಪುಟ್ಟ ಪೆಟ್ಟಿಗೆ ) ಬಿಟ್ಟ ಹಾಗೆ " - ಇದು ಸರಿಯಾದ ಉಚ್ಚಾರಣೆ
ಕರಡಿಗೆ ಅನ್ನುವುದು ಬಹಳ ಜನಕ್ಕೆ ಪರಿಚಯವಿಲ್ಲದಿರುವುದು(ವೀರಶೈವದವರನ್ನು ಹೊರತುಪಡಿಸಿ) ಮತ್ತು ಕಾಲಕ್ರಮೇಣ ಇದು ಕರಡಿಗೆಯಿಂದ ಕರಡಿ ಅಯಿತು.
ವಿವರಣೆ : ಶಿವಪೂಜೆಗೆ ಮುಖ್ಯವಾಗಿ ಬೇಕಾಗಿರುವುದು ಶಿವಲಿಂಗ, ಇದನ್ನು ಕರಡಿಗೆಯೆಂಬ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟು ಅದನ್ನು ಶಿವದಾರದಿಂದ ಪೋಣಿಸಿ ಅದನ್ನು ಸದಾಕಾಲ ಕೊರಳಲ್ಲಿ ಧರಿಸುತ್ತಾರೆ.
ಶರಣರು ಶಿವಪೂಜೆ ಮಾಡಬೇಕೆಂದಾಗಲೆಲ್ಲ, ತಮ್ಮ ಕೊರಳಲ್ಲಿಯೇಯಿರುವ ಕರಡಿಗೆಯಿಂದ ಶಿವಲಿಂಗವನ್ನು(ಇಷ್ಟಲಿಂಗ) ತೆಗೆದು ಪೂಜೆ ಮಾಡಿಕೊಳ್ಳುತ್ತಾರೆ. ಇದರಿಂದ ತಿಳಿಯುತ್ತೆ - ಶಿವಪೂಜೆ ಮಾಡಿಕೊಳ್ಳಲು ಕರಡಿಗೆ ಮುಖ್ಯ ಕರಡಿ ಅಲ್ಲಾ.
ಈ ಗಾದೆಯ ಮೂಲ ಉಚ್ಚಾರಣೆ ನನಗೆ ತಿಳಿದಿದ್ದು - ರಾಜಕುಮಾರ್ ಅವರ ಒಂದು ಹಳೆಯ ಚಿತ್ರ ನೋಡುವಾಗ, ಅಲ್ಲಿಯ ತನಕ ನಾನು ಕೂಡ ಎಲ್ಲರಂತೆ ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ಎಂದು ತಿಳಿದಿದ್ದೆ!
#ಸರಿಯಾದಅರ್ಥ
Re: ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!
ಈ ಗಾದೆಯ ಅರ್ಥ ನಿಮಗೆ ತಿಳಿದಿತ್ತೆ ?
Re: ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!
ನೀವು ಹೇಳಿದ್ದು ಸರಿ, ಕರಡಿ ಯಾಕೆ ಯಾವುದೇ ಪ್ರಾಣಿ ಬಂದರೆ ಸಾಕು ಎಲ್ಲ ಬಿಟ್ಟು ಹೋಗುತ್ತಾರೆ. ಆದರೆ ೩೦ ವರ್ಷಗಳ ಹಿಂದೆ ಸರಿಯಾಗಿದ್ದ ಗಾದೆ ಅದರ ಮೂಲ ಸ್ವರೂಪವನ್ನೇ ಈಗ ಬದಲಾಯಿಸಿ ಬಿಟ್ಟಿದ್ದೇವೆ
Re: ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!
ದರ್ಶನ್ ಅವರೆ ನಿಮ್ಮ ಅನಿಸಿಕೆ ಸರಿ, ಶಿವಪೂಜೆ ನಡುವೆ ಕರಡಿಗೆ ಬಿಟ್ಟು ಬಂದ ಹಾಗೆ. ಮದುವೆಗೆ ಹೋಗುವವರು ಮದುಮಗನನ್ನ ಬಿಟ್ಟು ಹೋದ ಹಾಗೆ ಎನ್ನುವ ಗಾದೆಗೆ ಸಮನಾದುದು ಇದು.
Re: ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!
ಶಿವಪೂಜೆ ನಡುವೆ ಇನ್ನೊಂದು ಕರಡಿ - http://rprabhu.blogspot.in/2007/07/misinterpreted-quotes.html