ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!

Submitted by Darshan Kumar on Tue, 07/08/2014 - 01:35

ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ... ಇದು ತಪ್ಪಾದ ಉಚ್ಚಾರಣೆ .

"ಶಿವಪೂಜೆ ನಡುವೆ ಕರಡಿಗೆ(ಲಿಂಗವೊತ್ತಿಗೆ - ಲಿಂಗವನ್ನು ಇಟ್ಟುಕೊಳ್ಳುವ ಒಂದು ಪುಟ್ಟ ಪೆಟ್ಟಿಗೆ ) ಬಿಟ್ಟ ಹಾಗೆ " - ಇದು ಸರಿಯಾದ ಉಚ್ಚಾರಣೆ

ಕರಡಿಗೆ ಅನ್ನುವುದು ಬಹಳ ಜನಕ್ಕೆ ಪರಿಚಯವಿಲ್ಲದಿರುವುದು(ವೀರಶೈವದವರನ್ನು ಹೊರತುಪಡಿಸಿ) ಮತ್ತು ಕಾಲಕ್ರಮೇಣ ಇದು ಕರಡಿಗೆಯಿಂದ ಕರಡಿ ಅಯಿತು.

ವಿವರಣೆ : ಶಿವಪೂಜೆಗೆ ಮುಖ್ಯವಾಗಿ ಬೇಕಾಗಿರುವುದು ಶಿವಲಿಂಗ, ಇದನ್ನು ಕರಡಿಗೆಯೆಂಬ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟು ಅದನ್ನು ಶಿವದಾರದಿಂದ ಪೋಣಿಸಿ ಅದನ್ನು ಸದಾಕಾಲ ಕೊರಳಲ್ಲಿ ಧರಿಸುತ್ತಾರೆ.

ಶರಣರು ಶಿವಪೂಜೆ ಮಾಡಬೇಕೆಂದಾಗಲೆಲ್ಲ, ತಮ್ಮ ಕೊರಳಲ್ಲಿಯೇಯಿರುವ ಕರಡಿಗೆಯಿಂದ ಶಿವಲಿಂಗವನ್ನು(ಇಷ್ಟಲಿಂಗ) ತೆಗೆದು ಪೂಜೆ ಮಾಡಿಕೊಳ್ಳುತ್ತಾರೆ. ಇದರಿಂದ ತಿಳಿಯುತ್ತೆ - ಶಿವಪೂಜೆ ಮಾಡಿಕೊಳ್ಳಲು ಕರಡಿಗೆ ಮುಖ್ಯ ಕರಡಿ ಅಲ್ಲಾ.

ಈ ಗಾದೆಯ ಮೂಲ ಉಚ್ಚಾರಣೆ ನನಗೆ ತಿಳಿದಿದ್ದು - ರಾಜಕುಮಾರ್ ಅವರ ಒಂದು ಹಳೆಯ ಚಿತ್ರ ನೋಡುವಾಗ, ಅಲ್ಲಿಯ ತನಕ ನಾನು ಕೂಡ ಎಲ್ಲರಂತೆ ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ಎಂದು ತಿಳಿದಿದ್ದೆ!

‪#‎ಸರಿಯಾದಅರ್ಥ‬

Darshan Kumar

Thu, 07/10/2014 - 04:46

ನೀವು ಹೇಳಿದ್ದು ಸರಿ, ಕರಡಿ ಯಾಕೆ ಯಾವುದೇ ಪ್ರಾಣಿ ಬಂದರೆ ಸಾಕು ಎಲ್ಲ ಬಿಟ್ಟು ಹೋಗುತ್ತಾರೆ.  ಆದರೆ ೩೦ ವರ್ಷಗಳ ಹಿಂದೆ ಸರಿಯಾಗಿದ್ದ ಗಾದೆ  ಅದರ ಮೂಲ ಸ್ವರೂಪವನ್ನೇ ಈಗ ಬದಲಾಯಿಸಿ ಬಿಟ್ಟಿದ್ದೇವೆ 

ದರ್ಶನ್ ಅವರೆ ನಿಮ್ಮ ಅನಿಸಿಕೆ ಸರಿ, ಶಿವಪೂಜೆ ನಡುವೆ ಕರಡಿಗೆ ಬಿಟ್ಟು ಬಂದ ಹಾಗೆ. ಮದುವೆಗೆ ಹೋಗುವವರು ಮದುಮಗನನ್ನ ಬಿಟ್ಟು ಹೋದ ಹಾಗೆ ಎನ್ನುವ ಗಾದೆಗೆ ಸಮನಾದುದು ಇದು.