Real...

Real...

ಬರಹ

ಅಲ್ಲಿ ಸಂಭ್ರಮ. ಸಡಗರ. ನಾಗರ ಪಂಚಮಿ ಹಬ್ಬದ ಖುಷಿ. ಎಲ್ಲ ಕಡೆಗಳಿಗಿಂತ ಸ್ವಲ್ಪ ಬಿನ್ನ. ಕಲ್ಲಿನ ಹಾವಿಗೆ ಹಾಲೆರೆಯುವುದು ಸಾಮಾನ್ಯ, ಆದರೆ ಶಿವಮೊಗ್ಗ ಗೋಪಾಳದಲ್ಲಿ ನಿಜವಾದ ನಾಗರಹಾವಿಗೆ ಜನರು ಹಾಲೆರೆದು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು. ವಿಶಿಷ್ಟ ರೀತಿಯಲ್ಲಿ.
ಇಲ್ಲಿನ ರಂಗನಾಥ ದೇವಾಲಯದ ಆಲದ ಮರದ ಕೆಳಗಿನ ನಾಗರ ಕಟ್ಟೆಯ ಮೇಲೆ ಒಂದೆಡೆ ಕಲ್ಲಿನ ಹಾವಿಗೆ ಹಾಲೆರೆಯುತ್ತಿದ್ದರೆ. ಮತ್ತೊಂದೆಡೆ ನಿಜವಾದ ಹಾವಿಗೆ ಕುಂಕುಮ ಹಚ್ಚಿ, ಹೂವನ್ನು ಇಟ್ಟು ಪೂಜೆ ಸಲ್ಲಿಸಿ, ಹಾಲೆರೆಯಲಾಯಿತು.
ಖ್ಯಾತ ಉರಗ ಪ್ರೇಮಿ ಸ್ನೇಕ್ ಕಿರಣ್ ತಾವು ಹಿಡಿದು ತಂದಿದ್ದ ವಿಷಪೂರಿತವಾದ ನಾಗರಹಾವನ್ನು ಬೆಳಿಗ್ಗೆ ೯ ರಿಂದ ೧೦ ಗಂಟೆ ವರೆಗೆ ಸಾರ್ವಜನಿಕರ ಪೂಜೆಗೆಂದು ಬಿಟ್ಟಿದ್ದರು.
ಮಕ್ಕಳು, ಮಹಿಳೆಯರು ನಿಜವಾದ ನಾಗರಹಾವಿಗೆ ಹಾರೆದು ಸಂತೋಷಪಟ್ಟರು. ಧೈರ್ಯವಿಲ್ಲದ ಅನೇಕರು ಸ್ನೇಕ್ ಕಿರಣ್ ಅವರ ಸಹಾಯದಿಂದ ಕಷ್ಟಪಟ್ಟು ಹಾವಿನ ಸಮೀಪಕ್ಕೆ ಹೋಗಿ ಹಾಲೆರದರು, ಇನ್ನು ಕೆಲವರು ಪಾಯಸ, ಒಬ್ಬಟ್ಟಿನ ಸೇವೆಯೂ ನಡೆಯಿತು.
ನಿಜವಾದ ಹಾವಿಗೆ ಹಾಲೆರೆಯಲು ಅವಕಾಶ ಕಲ್ಪಿಸುವ ಮೂಲಕ ಹಾವುಗಳೊಂದಿಗೆ ಆತ್ಮೀಯ ಸಂಬಂಧ ಬೆಳೆಸುವ ಪ್ರಯತ್ನವನ್ನು ಸ್ನೇಕ್ ಕಿರಣ್ ಮಾಡಿದರು. ಚಿತ್ರಗಳು: ನಂದನ್.