Splendours of Royal Mysore

Splendours of Royal Mysore

ಬರಹ

-The Untold Story of the Wodeyars" -By VIKRAM SAMPATH,
-Published by RUPA & CO.

ಚಿಕಾಗೋ ನಗರದಲ್ಲಿ ನಡೆದ ೩ ದಿನಗಳ ’ಅಕ್ಕಾ ವಿಶ್ವಕನ್ನಡ ಸಮ್ಮೇಳನ,’ ದಲ್ಲಿ ಭಾಗವಹಿಸಿದ ಕವಿ-ಗಣದಲ್ಲಿ ವಿಕ್ರಂ ಸಂಪತ್ ರವರ ಪುಸ್ತಕ, "SPLENDOURS OF ROYAL MYSORE-The Untold Story of the Wodeyars" -By VIKRAM SAMPATH," ಅತಿ-ಜನಪ್ರಿಯತೆಯನ್ನುಗಳಿಸಿ, ಜನರ ಆಸಕ್ತಿಯನ್ನು ಕೆರಳಿಸಿತು.

ಅಮೆರಿಕದ ಕವಿಗೋಷ್ಟಿಯಲ್ಲಿ ಹಾಜರಿದ್ದ, "ಕರ್ಣಾಟಕ ಭಾಗವತ", ದಂತಹ ಮಹಾಕೃತಿಯ ಸಂಪಾದಕರಾದ, ಡಾ. ಹೊಳಲ್ಕೆರೆ ಚಂದ್ರಶೇಖರ್, ಡಾ. ಎಸ್. ಎಲ್. ಬೈರಪ್ಪ, ಮತ್ತು ಡಾ. ಚಂದ್ರಶೇಕರ ಕಂಬಾರ, ಜಿ. ವಿ. ಕುಲಕರ್ಣಿಯಂತಹ ಹಿರಿಯ ಲೇಖಕರು, ವಿಕ್ರಂ ಸಂಪತ್ ರ ಪ್ರತಿಭೆಯನ್ನು ಗುರುತಿಸಿ ಅಭಿನಂದಿಸಿದರು. ಇನ್ನೂ ೨೮ ರ ಹರೆಯದಲ್ಲಿರುವ, ವಿಕ್ರಂ ಸಂಪತ್ , ಬೆಂಗಳೂರಿನ ಹುಡುಗ. ಇಂಜಿನಿಯರಿಂಗ್ ನಲ್ಲಿ ಪದವಿ, ೨೦೦೩ ರಲ್ಲಿ 'ಬಿಟ್ಸ್ ಪಿಲಾನಿ ' ಯಲ್ಲಿ ಮ್ಯಾಥೆಮ್ಯಾಟಿಕ್ಸ್ ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದ, ವಿಕ್ರಂ ಸಂಪತ್, ನಂತರ ಮುಂಬೈ ಯ ಪ್ರಖ್ಯಾತ, ’ಎಸ್. ಪಿ. ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್’, ನಿಂದ, 'ಎಮ್. ಬಿ. ಎ ,' ಪದವಿಯನ್ನೂ ಗಳಿಸಿಕೊಂಡರು. ಈಗ ಬೆಂಗಳೂರಿನ ಸುಪ್ರಸಿದ್ಧ ಬಹುರಾಷ್ಟ್ರೀಯ ಬ್ಯಾಂಕ್ ನಲ್ಲಿ, ರಿಟೈಲ್ ಬ್ಯಾಂಕಿಂಗ್ ವಿಭಾಗದಲ್ಲಿ ದುಡಿಯುತ್ತಿದ್ದಾರೆ. ತಮ್ಮ ಲೇಖನಗಳನ್ನು ಬೆಂಗಳೂರಿನ 'ಹಿಂದು', 'ಡೆಕ್ಕನ್ ಹೆರಾಲ್ಡ್,' ಹಾಗೂ 'ಜೆಟ್ ವಿಂಗ್ಸ್' ನಂತಹ ಹಲವು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕರ್ನಾಟಕ ಬಾಯಿ-ಹಾಡುಗಾರಿಕೆ-ಸಂಗೀತದಲ್ಲಿ ಅವರಿಗೆ ಆಸಕ್ತಿ. ಆದರೆ ಚರಿತ್ರ್ಯೆಯಲ್ಲಿ ವಿಶೇಷವಾದ ಒಲವು. ಕಲೆ, ಸಾಹಿತ್ಯದಲ್ಲೂ ಅಷ್ಟೆ. ಅವರಿಗೆ ಬಾಲ್ಯದಿಂದಲೂ ಮೈಸೂರಿನ ಆಳುವ-ವೊಡೆಯರ ಬಗ್ಗೆ ಅತ್ಯಂತ ಆಸಕ್ತಿ. ಬಹುಶಃ ’ಟಿಪ್ಪೂ ಸುಲ್ತಾನ್,’ ಚಲನಚಿತ್ರ ನೋಡಿದಮೇಲಂತೂ ಆ ಆಸೆ, ಒಂದು ಮೂರ್ತರೂಪುತಾಳಿ ಬರವಣಿಗೆಗೆ ಕಾರಣವಾಯಿತು.

ಮೈಸೂರಿನ ಒಡೆಯರು ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜನ-ಹಿತಕಾರ್ಯವನ್ನು ಮಾಡುತ್ತಾ ಬಂದರು. ಬಹು ಹಿಂದೆಯೇ ಮೈಸೂರು, ಭಾರತದಲ್ಲೇ ಮಂಚೂಣಿಯಲ್ಲಿದ್ದ ರಾಜ್ಯ. ವಿದ್ಯುತ್ ಚ್ಛಕ್ತಿಯ ತಯಾರಿಕೆಯಲ್ಲಿ, ಮತ್ತು ಹಲವಾರು ಉದ್ಯಮ, ವಾಣಿಜ್ಯಗಳಲ್ಲಿ ಎಲ್ಲರಾಜ್ಯಗಳಿಗಿಂತ ಮುಂದಿತ್ತು. ಇಂದಿಗೂ ಮೈಸೂರಿನ ಒಡೆಯರ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರು, ಸಂಗೀತ, ಸಾಹಿತ್ಯ, ಕಲೆಗಳಿಗೆ ಬಹಳ ಪ್ರೋತ್ಸಾಹನೀಡುತ್ತಿದ್ದದ್ದು ಸತ್ಯವಾದ ಮಾತು. ಆದರೆ ಅವರು ಎಂದೂ ಬೇರೆರಾಜ್ಯಗಳಮೇಲೆ ದಂಡೆತ್ತಿ ಹೋಗಿ, ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹೀನ-ಕಾರ್ಯವನ್ನು ಮಾಡಿರಲಿಲ್ಲ. ಇದಕ್ಕೆ ಚರಿತ್ರ್ಯೆಯೇ ಸಾಕ್ಷಿ. ಆದರೆ ಚಲನಚಿತ್ರದಲ್ಲಿ ಅವರನ್ನು ಕೆಟ್ಟದಾಗಿ ಪ್ರತಿಬಿಂಬಿಸಿರುವುದು ಖಂಡಿತ ದುರದೃಷ್ಟಕರವಾದ ಸಂಗತಿಯೆಂದು ಮಾತ್ರ ನಾನು ಹೇಳಬಲ್ಲೆ.

Other writing :

* Music is her religion: The Hindu, 4th June 2007.

* Music Matters: Deccan Herald, 17th April 2007.

* Nee kudiyuva neer Kaaveri: Sunday Herald, 11th Feb 2007.

* Road map to the future: Deccan Herald, 31st Oct 2006.

* He stuck to his dream of a united Mysore: Deccan Herald, 4th Oct 2006.

ನಿಮಗೆ ವಿಕ್ರಂ ಸಂಪತ್ ರವರ ಬಗ್ಗೆಯಾಗಲೀ, ಅಥವಾ ಅವರ ಕೃತಿಯ ಬಗ್ಗೆಯಾಗಲೀ, ಹೆಚ್ಚಿನಮಾಹಿತಿ ಬೇಕಾದರೆ, ಕೆಳಗಿನ ಕೊಂಡಿಗೆ ಅಂಟಿಕೊಳ್ಳಿ :

* www.vikramsampath.com
ಅಥವಾ
* vikram@vikramsampath.com

-ಈ ಕಾರ್ಯಕ್ರಮವನ್ನು ನಾನು ’ಅಕ್ಕಾ’ ದಲ್ಲಿ ಅವಲೋಕಿಸಿದ್ದೇನೆ.