Tension ಅಂದ್ರೆ?

Tension ಅಂದ್ರೆ?

ಬರಹ

ಶಿಲ್ಪಿಯಾದ ನನ್ನ ಕೊಂದು ಶಿಲ್ಪಮಾಡಿ ಹೋದ ಹೆಣ್ಣೆ
ಮುಟ್ಟಿ ಇಂದು ಮರೆಯಾಗೋ ಪಶ್ಚಿಮದಾರಿ ಹುಡುಕೋ ಹೆಣ್ಣೆ
ಮನದಲ್ಲೂ, ಹೃದಯದಲ್ಲೂ ನಿನಗೊಂದು ಭದ್ರ ಸ್ಥಾನ
ಸ್ಪಷ್ಟಪಡಿಸಿದ ಪ್ರೀತಿಗೆ ಭಾವನೆಗಳ ಬಾನೆತ್ತರದ ಮೌನ
ಇದು ನ್ಯಾಯವೇ ಹೇಳು ಬಾರೆ
ನಿನ್ನಹಾಗೆ ಮನಸ್ಸು ನನ್ನಲಿಲ್ಲ ಮುಳ್ಳಿನ ತೇರೆ

ನೀ ಮಳೆಯೆಂದಾಗ ನಾ ಕೊಡೆಯಾದೆ
ನೀ ಬಿಸಿಲೆಂದೆ, ನಾ ನಂಬಿ ನೆರೆಲಾದೆ
ಇಂದು ಚುಕ್ಕಿಯಿಟ್ಟು ಪುಟವ ಮುಗಿಸಿ
ಹರಿದು ಹಾಕಿದೆ ಕಾಗದವೆನಿಸಿ
ಬಳ್ಳಿ ಜಾರೋ ಚಿಟ್ಟೆ ಮರಿಯೆ
ಹೇಳು ಬಾ ಇದು ಸರಿಯೇ

ನಿನ್ನ ಹೆಸರ ಬರೆದ ಬೆರಳ ಮೇಲೆ, ಸಿಹಿ ತುಂಬಿ ದುಮುಕಿದೆ
ರುಚಿಗೆ ಬಂದ ಇರುವೆ ಕೂಡ ನೋವ ಬಾಚಿ ಕೊಡುತಿದೆ
ಖುಷಿಯ ಇಮ್ಮಡಿ ಜಾರಿಹೋಗಿ, ಉಳಿಸಿಕೊಳ್ಳದೆ ಸಾಕಾಗಿದೆ
ಕಾಲಗತಿಯ ನಿಲ್ಲಿಸಲಾಗದ ನಾನು... ಶಾಪದ ಗ್ರಹನವೇ
ಅಂದೊಮ್ಮೆ ಕರೆಗಳ ಮಹಾಪೂರವೆ ಹರಿದಿತ್ತು
ಪ್ರೀತಿ ಪ್ರಕಟವಾದ ನಂತರ ಏನು ಚರ್ಚಿಸದೆ ಮುರಿದೊಯಿತು
ನನ್ನ ಮುದ್ದು ಝರಿಯೇ ನನ್ನಲ್ಲೂ ಸ್ವಲ್ಪ ಸುರಿಯೆ
ಜೂಟ್ ಹೇಳುವೆ ಜಾನೆ, ಹಾಗೆ ಒಮ್ಮೆ ಕೊಲ್ಲೆ

- ಇಂತಿ ನಿನ್ನ ಪ್ರೀತಿಯ ಸುಬ್ಬಿ