UMC - ಸಂವಿಧಾನದ-ಕರಡು-ಪ್ರತಿ ತಯಾರಕ, ಮಾಜೀ ಅಮೆರಿಕದ ಅಧ್ಯಕ್ಷ, ಥಾಮಸ್ ಜೆಫರ್ಸನ್ ರವರ ಕನಸಿನ ಕೂಸು !
ಅಮೆರಿಕದ ’ಯು. ಎಮ್. ಸಿ ವಿಶ್ವವಿದ್ಯಾಲಯ (ಯೂನಿವರ್ಸಿಟಿ ಆಫ್ ಮಿಸ್ಸೂರಿ, ಕೊಲಂಬಿಯ) ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳಲ್ಲೊಂದು. ಅಮೆರಿಕದ ಮೂರನೆಯ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್, ರು ತಮ್ಮ ಕಾರ್ಯಕ್ರಮದಲ್ಲಿ ಗಮನವಿಟ್ಟುಹಾಕಿಕೊಂಡಿದ್ದ ಪ್ರಮುಖ-ಕಾರ್ಯಕ್ರಮಗಳ ರೂಪುರೇಖೆಯಲ್ಲಿ ಯು .ಎಮ್. ಸಿ ಯೂ ಒಂದು ! ( ವರ್ಜೀನಿಯ ವಿಶ್ವವಿದ್ಯಾಲಯ ಸ್ಥಾಪನೆಗೆ ಅವರು ಬಹಳಷ್ಟು ದುಡಿದರು) ಯೂ. ಎಮ್. ಸಿ, ಮಿಸ್ಸೂರಿರಾಜ್ಯದ ಸಂಪದ್ಭರಿತ ನದಿಯ ದಿವ್ಯ ರಕ್ಷಣೆಯಲ್ಲಿ ಫಲಿತು ೧೮೩೯ ರಲ್ಲಿ ಸ್ಥಾಪನೆಯಾಗಿ, ಸಮೃದ್ಧವಾಗಿ ಬೆಳೆದ ಈ ವಿದ್ಯಾಸಂಸ್ಥೆ, ಜರ್ನಲಿಸಂ, ಮ್ಯಾನೇಜ್ಮೆಂಟ್, ಬಯೋಟೆಕ್ನಾಲಜಿ, ಹಾಗೂ ಮೆಡಿಸನ್ ಕ್ಷೇತ್ರಗಳಲ್ಲಿ ಬಹಳಮುಂದಿದೆ. ಇಂಜಿನಿಯರಿಂಗ್, ಲಾ ಮುಂತಾದ ಹಲವು ಶಾಖೆಗಳಲ್ಲೂ ಪ್ರಸಿದ್ಧಿಯಾಗಿದೆ. ’ಸಾರ್ವಜನಿಕ, ಲ್ಯಾಂಡ್ ಗ್ರಾಂಟ್ ,’ ಕಾರ್ಯಕ್ರಮದ ಅಡಿಯಲ್ಲಿ ಮಿಸಿಸಿಪ್ಪಿ ನದಿಯ ಪಶ್ಚಿಮ ಭಾಗದಲ್ಲಿ ಸ್ಥಾಪಿಸಿದ ಪ್ರಪ್ರಥಮ ವಿಶ್ವವಿದ್ಯಾಲಯವಿದು. ಪಶ್ಚಿಮ ದಿಶೆಯ ಬೆಳವಣಿಗೆಯ ಸಮಯದಲ್ಲಿ ಇದಕ್ಕೆ ಬಹಳ ಪ್ರಾಶಸ್ತ್ಯವಿತ್ತು. ಮೆಕ್ಕೇಜೋಳದಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಪ್ರಪ್ರಥಮಬಾರಿ ಪ್ರಯೋಗಮಾಡಿ ಸಿದ್ಧಿಪಡೆದದ್ದು ಇಲ್ಲಿಯೇ ! ಆ ’ಪ್ರಾಯೋಗಿಕ-ಹೊಲ ’ ವನ್ನು ಹಾಗೆಯೇ ಸಾರ್ವಜನಿಕರ ಅವಗಾಹನೆಗೆ ಮೀಸಲಾಗಿಟ್ಟಿದ್ದಾರೆ.
ಇಲ್ಲಿಯೇ ವಿಶ್ವವಿಖ್ಯಾತ ’ಮೋನ್ಸೆಂಟೋ’ ಎಂಬ ಕೃಷಿಕ್ಷೇತ್ರದಲ್ಲಿ ವಿಕ್ರಮಸ್ಥಾಪಿಸಿದ ಖಾಸಗಿ ಕಂಪೆನಿಯಿರುವುದು. ಹೆಲಿಕಾಪ್ಟರ್ ಸೇವೆ, ಮೆಡಿಕಲ್ ಕಾಲೇಜ್ ನಲ್ಲಿ ಲಭ್ಯವಿದೆ. ಎಮರ್ಜೆನ್ಸಿ ಸಮಯದಲ್ಲಿ ಅದರ ಉಪಯೋಗ ಪಡೆಯುತ್ತಿದ್ದಾರೆ.
ಭಾರತದ ಔರಂಗಾಬಾದ್ ನಲ್ಲಿ " ಮಹಾರಾಷ್ಟ್ರ ಹೈಬ್ರಿಡ್ ಸೀಡ್ಸ್ ಎಂಬ ಖಾಸಗೀ ಕಂಪೆನಿ, ’ ಮೊನ್ಸ್ಯಾಂಟೋ ಕಂ, ” ಜೊತೆಸೇರಿ, ಬೋಲ್ಗಾರ್ಡ್-೨ ಎಂಬ " ಹತ್ತಿ ಬೀಜಭಕ್ಷಕ- ಹುಳುವಿನ ಪಿಡುಗನ್ನು" ಕಿತ್ತೆಸೆಗೆಯುವ ಅಭಿಯಾನದಲ್ಲಿ ಸಮರ್ಥವಾಗಿ ಹೆಣಗಾಡುತ್ತಿವೆ. ಮೊದಲು ಮಹಾರಾಷ್ಟ್ರದ ರೈತರು, ಪರಿಸರವಾದಿಗಳಮಾತನ್ನು ಕಟ್ಟಿಕೊಂಡು, ಈ ಅಭಿಯಾನಕ್ಕೆ ಬೆನ್ನುತೋರಿಸಿದ್ದರು. ಈಗ ಹತ್ತಿ-ಬೆಳೆಯಲ್ಲಿ ಗಮನಾರ್ಹ ’ಫಾಯಿದೆ,’ ಬಂದಮೇಲೆ ಸುಮ್ಮನಾಗಿದ್ದಾರೆ. ನಮ್ಮದೇಶದ ಹತ್ತಿಬೆಳೆಯಲ್ಲಿ ಮಂಚೂಣಿಯಲ್ಲಿರುವ ಎರಡು ಪ್ರಮುಖರಾಜ್ಯಗಳೆಂದರೆ, ಮಹಾರಾಷ್ಟ್ರ, ಮತ್ತು ಗುಜರಾತ್. ಆಮೇಲೆ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ರಾಜಾಸ್ಥಾನ, ಉತ್ತರ ಪ್ರದೇಶಗಳು ಸರದಿಯಲ್ಲಿ ಬರುತ್ತವೆ.
-ಚಿತ್ರ-ವೆಂ.