ಅನುಭವ ಮತ್ತು ಪರಿಪಕ್ವತೆ

ಅನುಭವ ಮತ್ತು ಪರಿಪಕ್ವತೆ

ವಾಕಿಂಗ್ ಮುಗಿಸಿ ಬರುವಾಗ ದಾರಿಯಲ್ಲಿ, ಅವರೇಕಾಯಿ ಮಾರುತ್ತಿದ್ದರು. ಗಮಗಮ ವಾಸನೆ.ಜೊತೆಯಲ್ಲಿ ಇದ್ದ ಶಿವಕುಮಾರ್ ತಡೆದು ನಿಂತರು.

ಅವರೆಕಾಯಿ ಫ್ರೆಶ್ ಆಗಿದೆ ಅಲ್ವೆ ?

ಅವರ ಪ್ರಶ್ನೆ.

ಹೌದಲ್ಲ ತೆಗೆದುಕೊಳ್ಳಿ ಮನೆಗೆ

ಅಂದೆ ನಾನು ,

ಸರಿ ಎನ್ನುತ್ತ ಹೋಗಿ ಮುಂದೆ ನಿಂತವರು , ಎರಡು ಸೆಕೆಂಡ್ ಚಿಂತಿಸಿ ಹಿಂದೆ ಬಂದರು.

ಏಕೆ ಏನಾಯಿತು?

ಕೇಳಿದೆ.

ಏನಿಲ್ಲ, ಆಸೆಗೆ ಇದನ್ನು ತೆಗೆದುಕೊಂಡು ಹೋದರೆ ನನ್ನ ಮುಂದೆ ತಂದು ಸುರಿದು ಬಿಡಿಸಿಕೊಡಿ ಅನ್ನುತ್ತಾಳೆ , ಯಾರ ಕೈಲಾಗುತ್ತದೆ

ನಕ್ಕರು.

Experience makes man perfect

ಎಂದು ನಕ್ಕೆ.

ಹೌದು ಹೌದು

ಅವರ ನಗು.