ಅಲಸಂದೆ ಉಸ್ಲಿ

ಅಲಸಂದೆ ಉಸ್ಲಿ

ತಯಾರಿಸುವ ವಿಧಾನ

ಅಲಸಂದೆ ಕಾಳನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೀರು ಬಸಿದು ಚೆನ್ನಾಗಿ ಕುಕ್ಕರ್ ನಲ್ಲಿ ಬೇಯಿಸಿ.

ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಸಾಸುವೆ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಬಾಡಿಸಿಕೊಳ್ಳಿ.

ಬೇಯಿಸಿದ ಅಲಸಂದೆ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ೮-೧೦ ನಿಮಿಷ ಬಿಡಿ.

ತೆಂಗಿನ ತುರಿಯಿಂದ ಅಲಂಕಾರ ಮಾಡಿ ಬಡಿಸಿ.

http://groups.yahoo.com/group/konkani_buddies

15

ಅಲಸಂದೆ ಕಾಳು - ೨೦೦ ಗ್ರಾಮ್

ಎಣ್ಣೆ - ಎರಡು ಸ್ಪೂನ್

ಸಾಸಿವೆ - ಅರ್ಧ ಸ್ಪೂನ್

ಹಸಿರು ಮೆಣಸಿನ ಕಾಯಿ - ಐದು

ಕರಿಬೇವು ,ರುಚಿಗೆ ತಕ್ಕ ಉಪ್ಪು

ಅಲಂಕಾರಕ್ಕೆ: ತೆಂಗಿನ ತುರಿ.

Comments