ಎದೆಯ ಆಳದಲ್ಲೊಂದು ಹಳ್ಳ ತೋಡಿ

ಎದೆಯ ಆಳದಲ್ಲೊಂದು ಹಳ್ಳ ತೋಡಿ

ಎದೆಯ ಆಳದಲ್ಲೊಂದು
ಹಳ್ಳ ತೋಡಿ,,,,,
ಕಾಯುತ್ತಿದ್ದೇನೆ ಮುಪ್ಪಿಗಾಗಿ,,,,
ಆ ಹಳ್ಳದಲಿ,,,,,,,
ಅನಿಯಮಿತ ವಿಶ್ರಮಿಸಲು

ಬೆಂಕಿ ಬಿದ್ದು, ಅರೆಬೆಂದ 
ಆಸೆಗಳನ್ನೆಲ್ಲ,,,,
ಅದೇ ಹಳ್ಳದ ಬದಿಯಲ್ಲಿ 
ಕೂಡಿಟ್ಟಿಹೆನು,,,,,,
ಬಗೆದವರು ಹೆಕ್ಕಿಕೊಳ್ಳಲೆಂದು. 

ಹೆತ್ತ ಪಕ್ಷಿಗಳೆಲ್ಲ,
ಹೊಟ್ಟೆ ಹೊರೆಯುವ ನೆಪದಲಿ 
ಎತ್ತಲೋ ಹಾರಿ,,,,,
ಒಂಟಿಯಾದ ಮುಪ್ಪು ಮನಕ್ಕಿನ್ನು 
ಮೋಕ್ಷ ದೊರೆವುದು,,,,,,
ಹಳ್ಳದಲಿ ಮಲಗಿದಾಗಲೇ,

ಪ್ರತಿ ದಿನದ ಹೊಸ ಆಕಾಶ 
ಬಿಕ್ಕುತ್ತಿದೆ 
ನನ್ನ ಒಲವ ಸೋಲನು ಕಂಡು,
ಬಿಕ್ಕುವವರು ನಕ್ಕು 
ಹಗುರಾಗಿ, ಹಾಯಾಗಿರುವಾಗ 

ಬೆಂಬಿಡದ ಒಂಟಿತನಕ್ಕೆ ಹೆದರಿ,
ಎದೆಯ ಆಳದಲ್ಲೊಂದು
ಹಳ್ಳ ತೋಡಿ,,,,,
ಕಾಯುತ್ತಿದ್ದೇನೆ ಮುಪ್ಪಿಗಾಗಿ,,,,
ಆ ಹಳ್ಳದಲಿ,,,,,,,
ಅನಿಯಮಿತ ವಿಶ್ರಮಿಸಲು,

-ಜೀ ಕೇ ನ 
 

Comments