ಒಂದ್ ಒಳ್ಳೆ ಚಿತ್ರ ನೋಡ್ದೆ....!

ಒಂದ್ ಒಳ್ಳೆ ಚಿತ್ರ ನೋಡ್ದೆ....!

ಒಂದ್ ಒಳ್ಳೆ ಚಿತ್ರ ನೋಡ್ದೆ....!
 ಕಥೆ ಚೆನ್ನಾಗಿದೆ. ನಿರೂಪಣೆ ಹಿಡಿದಿಡುತ್ತದೆ. ಕಾರೆಕ್ಟರ್​ ಕಾಡುತ್ತವೆ. ಮಾತು ಎದೆ ಮುಟ್ಟುತ್ತವೆ. ನಾಯಕ ನಟ ಇಲ್ಲಿದ್ದಾರೆ. ಸರಳವಾಗಿ ಬಂದು ಹೋಗ್ತಾರೆ. ಕಳೆ ವರ್ಗದ ಕಥೆಗೆ ಇಲ್ಲಿ ಮೇಲ್ಗವರ್ಗದ ದರ್ಜೆ ಬಂದಿದೆ. ಜನ ಮೆಚ್ಚಿದ್ದಾರೆ. ವಿಮರ್ಶಕರು ಟೀಕೆ ಮಾಡೋಕೆ ಹೋಗಿಲ್ಲ. ನ್ಯೂನತೆಗಳು ಇಲ್ಲವೇ ಇಲ್ಲ. ಏನೂ ಅತಿರೇಕ ಅನಿಸದು. ಆ ಚಿತ್ರದ ಹೆಸ್ರು ಮೈತ್ರಿ....
ಪುನೀತ್ ಒಬ್ಬ ತಾರೆ ಅಷ್ಟೆ. ಸಿನಿಮಾ ತಾರೆಯ, ತೆರೆ ಹಿಂದಿನ ಬದುಕು ಕಟ್ಟಿಕೊಡಲಾಗಿದೆ. ಇದು ಮೈತ್ರಿಯ ಒಂದು ಟ್ರ್ಯಾಕ್. ಮೂಲ ಕಥೆನೇ ಬೇರೆ. ಅದರ ಹಾದಿ ಬಂದು ಸೇರೋದು ಬಾಲಾಪರಾಧಿಗಳ ಅಂತರಾಳಕ್ಕೆ. ಅಲ್ಲಿಂದ ತೆರೆದು ಕೊಳ್ಳೋದೇ ಕನ್ನಡದ ಕೋಟ್ಯಾಧಿಪತಿ ಎಪಿಸೋಡ್..
ಕನ್ನಡದ ಕೋಟ್ಯಾಧಿಪತಿ ಪುನೀತ್ ನಡೆಸಿಕೊಟ್ಟ ಶೋ. ಇದರಲ್ಲಿ ಅನೇಕರು ಬಂದು ಹೋಗಿದ್ದಾರೆ.ಸಿನಿಮಾದಲ್ಲೂ ಹಲವರು ಬರ್ತಾರೆ. ಬಾಲಾಪರಾಧಿ ಬರೋದೇ ‘ಮೈತ್ರಿ’ ಚಿತ್ರ ಶಕ್ತಿ.
ಬಾಲಾಪರಾಧಿ ಹೆಸ್ರು ಸಿದ್ಧರಾಮ. ಸ್ಲಂ ನಲ್ಲಿ ಬೆಳೆದ ಹುಡುಗ. ತುಂಟ. ಚೇಷ್ಠೆ ಮಾಡೋದು ಹೆಚ್ಚು. ಓದಿನಲ್ಲಿ ಜಾಣ. ಈ ಜಾಣ ತನ್ನ ತಪ್ಪಿಲ್ಲದೇ ಜೈಲು ಪಾಲಾಗ್ತಾನೆ. ಪುಟ್ಟ ಹುಡುಗ ಆಗಿರೋದ್ರಿಂದ, ರಿಮ್ಯಾಂಡ್ ಹೋಮ್ ಸೇರ್ತಾನೆ. ಅಲ್ಲಿಂದಲೇ ಕನ್ನಡದ ಕೋಟ್ಯಾಧಿಪತಿ ಶೋಗೆ ಸಿದ್ಧರಾಮ ಬರೋದು.ಹೇಗೆ ಬರ್ತಾನೆಂಬೋದು ಕಥನ ಕುತೂಹಲ..
ಪುನೀತ್ ನಮ್ಗೆ ನಾಯಕ ಅನಿಸೋದೇಯಿಲ್ಲ. ಚಿತ್ರದ ಪ್ರಥಮ ಫ್ರೇಮ್ ನಿಂದ ಹಿಡಿದು, ಕೊನೆವರೆಗೂ ಪುನೀತ್​ ಒಬ್ಬ ಸಿನಿಮಾ ತಾರೆಯಾಗಿಯೇ ಕಾಣಿಸಿಕೊಳ್ತಾರೆ. ಆದರೆ, ಹೀರೋ ಆಗಿ ಇಲ್ಲಿ ಯಾರೂ, ನಮ್ಮನ ಮೆಚ್ಚಿಸೋಕೆ ಬರೋದಿಲ್ಲ. ಮೋಹನ್ ಲಾಲ್ ರಂತಹ ಮಾಲಿವುಡ್​ ನ ಸೂಪರ್ ಸ್ಟಾರ್ ಕೂಡ ಡಿಆರ್​ಡಿಓ ದಲ್ಲಿ ಕೆಲಸ ಮಾಡೊ ಒಬ್ಬ ಸಾಮಾನ್ಯ ಸೈಂಟಿಸ್ಟ್ ಥರವೇ ಕಾಣಿಸುತ್ತಾರೆ. ಪುತ್ರನ ಕಳೆದು ಕೊಂಡಿರೋ, ಅಮಾಯಕ ಅಪ್ಪನಾಗಿ ನಮ್ಮ ಮುಂದೆ ನಿಲ್ಲುತ್ತಾರೆ.
ಕಥೆಯ ಕೊನೆ ಹ್ಯಾಪಿಯಾಗಿದೆ. ಸ್ಲಂ ನಲ್ಲಿ ಬೆಳೆದ ಸಿದ್ಧರಾಮ ಹೆಸರುವಾಸಿಯಾಗ್ತಾನೆ. ಖಳನಾಯಕ ಗೂಳಿ ಪ್ರತಾಪ್ ಸತ್ತು ಹೋಗ್ತಾನೆ. ಪುತ್ರನನ್ನ ಕಳೆದುಕೊಂಡ ಮೋಹನ್ ಲಾಲ್, ಅದೇ ಹುಡುಗನನ್ನ ದತ್ತು ತೆಗೆದುಕೊಳ್ತಾರೆ...
ಕೊನೆಯಲ್ಲಿ ಒಂದು ಮಾತು ಬರುತ್ತದೆ. ಪುನೀತ್ ಹೇಳ್ತಾರೆ; ನಿಮ್ಮ ಮಗ ಬದುಕಿದ್ದರೇ, ನಿಮ್ಮ ಈ ನಿರ್ಧಾರಕ್ಕೆ ಖುಷಿ ಪಡ್ತಿದ್ದರು ಅಂತ. ಆಗ ಅದಕ್ಕೆ ಪ್ರತಿಯಾಗಿ, ಮೋಹನ್ ಲಾಲ್ ಹೇಳ್ತಾರೆ. ನಿಮ್ಮ ತಂದೆ (ಡಾಕ್ಟರ್ ರಾಜಕುಮಾರ್) ಬದುಕಿದ್ದರೇ, ನಿಮ್ಮ ಕೆಲಸಕ್ಕೆ ತುಂಬಾ ಸಂತೋಷ ಪಡ್ತಿದ್ದರು ಅಂತ ಹೇಳ್ತಾರೆ. ಅಲ್ಲಿಗೆ ಪುನೀತ್ ಮುಗುಳ್ನಗ್ತಾರೆ. ಇವರಿಬ್ಬರ ಸಂಭಾಷಣೆಯಲ್ಲಿರೋ ಒಳಾರ್ಥ ಇಡೀ ಸಿನಿಮಾ ನೋಡಿದಾಗ ಕಂಡಿತ ಅರ್ಥ ಆಗುತ್ತದೆ. ಒಮ್ಮೆ ಎಲ್ಲ ಕನ್ನಡಿಗರು ಈ ಸಿನಿಮಾ ನೋಡುವಂತನೇ ಇದೆ. ಮಲೆಯಾಳಂ ನಲ್ಲೂ ನಿರ್ಮಾಣವಾಗಿದೆ. ಅಲ್ಲಿಯ  ಪ್ರೇಕ್ಷಕರು ಮೈತ್ರಿ ಕತೆಗೆ ಕಳೆದು ಹೋಗ್ತಾರೆ. ಅದು ಮೈತ್ರಿ ಮಾಡೋ ನೈಜ ಮೋಡಿ.
ಕತೆ-ಚಿತ್ರ ಕಥೆ-ನಿರ್ದೇಶನ ಮಾಡಿದವ್ರು ಗಿರಿರಾಜ್. ಜಟ್ಟಾ ಚಿತ್ರ ನಿರ್ದೇಶಿಸಿದ ಹೊಸ ಚಿಂತನೆಗಳೀರೋ ನಿರ್ದೇಶಕ. ನವಿಲಾದವರೂ ಮೊದಲ ಸಿನಿಮಾ.ಇದು ಥಿಯೇಟರ್​ ಗೆ ಬರಲಿಲ್ಲ. ಆದರೆ,ಅದೇ ಸಿನಿಮಾ ನೋಡಿದ ನಿರ್ಮಾಪಕ ಎಂ.ಎನ್.ಸುರೇಶ್, ಅದ್ವೈತ ಚಿತ್ರಕೊಟ್ಟರು. ಅದ್ಯಾಕೋ ಅದ್ವೈತ ಬಂತು.ಹೋಯ್ತು. ಮೈತ್ರಿ ಹಾಗಲ್ಲ. ಎಲ್ಲ ವರ್ಗದ ಪ್ರೇಕ್ಷಕರ ಸಿನಿಮಾ. ಜನ ಚಿತ್ರ ಒಪ್ಪಿಕೊಳ್ಳಲೇಬೇಕು ಅನ್ನೋ ಒತ್ತಾಯ ಸಿನಿಮಾ ನಿರ್ಮಾಪಕರಿಗೂ ಇಲ್ಲ. ನಿರ್ದೇಶಕರಿಗೂ ಇಲ್ಲ. ಕಥೆಗೆ ಆ ತಾಕತ್ತು ಇದೆ. ಜನ ಸುಮ್ನೆ ಕುಳಿತರೂ ಸಾಕು. ಜೀವಂತಿಕೆ ಇರೋ ಪ್ರತಿ ಪಾತ್ರಗಳು ಮನಸ್ಸಿಗೆ ಇಳಿಯುತ್ತವೆ. ಮನಸ್ಸಿನೊಂದಿಗೆ ತಕ್ಷಣವೇ ಮೈತ್ರಿ ಮಾಡಿಕೊಂಡು ಬಿಡ್ತವೆ. ಒಮ್ಮೆ ಟ್ರೈ ಮಾಡಿನೋಡಿ...

-ರೇವನ್ ಪಿ.ಜೇವೂರ್​

Comments