ಓ..ಒಲವೇ (1)

ಓ..ಒಲವೇ (1)

ಅಕ್ಕ, ಇಲ್ಲಿ ಕಿಟಕಿಯ ಪಕ್ಕ ಸೀಟು ಖಾಲಿ ಇದೆ ನೋಡಿ, ಇಲ್ಲಿ ಕೂತ್ಕೊಳ್ಳಿ ಎಂದ ರಾಜು. ಸರಿ ಅಂತ ಕುಳಿತು ಕೊಂಡಳು. ಊರಿಗೆ ಹೋಗಿ ತಲುಪಿದ ಕೂಡಲೆ ಫೋನ್ ಮಾಡು, ಹುಷಾರು ಅಕ್ಕ ಎಂದನು.ಸರಿ ರಾಜು ಫೋನ್ ಮಾಡ್ತೀನಿ, ನೀನಿನ್ನು ಹೊರಡು ಟೈಮ್ ಆಯ್ತು ಎಂದಳು.ರಾಜು ಹೊರಟು ಹೋದ. ರಾಜು ತನ್ನ ಗಂಡನ ಜೊತೆ ಕೆಲಸ ಮಾಡುವ ಹುಡುಗ. ರಾತ್ರಿ 10:50 ರ ಸಮಯ.11 ಗಂಟೆಗೆ ಬಸ್ಸು ಹೊರಡುವುದಿತ್ತು.ಇನ್ನು ಕೆಲವು ಸೀಟುಗಳು ಖಾಲಿ ಇದ್ದವು.ತನ್ನ ಪಕ್ಕದ ಸೀಟು ಸಹ ಖಾಲಿ ಇತ್ತು. ಹಾಗೆ ಸೀಟಿಗೆ ಒರಗಿ ಕಣ್ಣು ಮುಚ್ಚಿಕೊಂಡಳು.ಬೆಳಿಗ್ಗೆ ತನ್ನ ಗಂಡ ತನ್ನ ಮೇಲೆ ಕೂಗಾಡಿದ್ದು ನೆನಪಿಗೆ ಬಂತು.ಅವಳ ಹೆಸರು ತನ್ಮಯ.ಗಂಡನ ಹೆಸರು ಚಂದನ್. ಮದುವೆಯಾಗಿ ಹತ್ತು ವರ್ಷಗಳಾಗಿದ್ದವು. ಅವನು ಸ್ವಂತ ಉದ್ದಿಮೆ ಮಾಡುತ್ತಿದ್ದ.ಗಳಿಕೆ ಚೆನ್ನಾಗೇ ಇತ್ತು.ಹಣ, ಘನತೆ, ಸಮಾಜದಲ್ಲಿ ಗೌರವ ಎಲ್ಲಾ ಇತ್ತು. ಈ ವಿಷ್ಯದಲ್ಲಿ ತನ್ಮಯಳಿಗೂ ಯಾವುದಕ್ಕೂ ಕೊರತೆಯಿರಲಿಲ್ಲ. ಆದರೂ ಏನೋ ಒಂದು ಕೊರತೆ ಕಾಡುತ್ತಿತ್ತು.ಅದೇ ಗಂಡನ ಪ್ರೀತಿ. ಏಕೆಂದರೆ ಮದುವೆಯಾದಾಗಿನಿಂದಲೂ ಅವಳ ಗಂಡ ಒಮ್ಮೆಯೂ ಅವಳೊಂದಿಗೆ ಪ್ರೀತಿಯಿಂದ ವರ್ತಿಸಿರಲಿಲ್ಲ. ಅವಳ ಜೊತೆ ವಿನಾ ಕಾರಣ ಜಗಳವಾಡುತ್ತಿದ್ದ.ಅವಳು ಎಷ್ಟೇ ವಿನಯವಾಗಿ ನಡೆದುಕೊಂಡರೂ ಸಣ್ಣ ಸಣ್ಣ ಕಾರಣಕ್ಕೂ ಅವಳ ಮೇಲೆ ಸಿಡುಕುವುದು, ರೇಗುವುದು, ಕೂಗಾಡುವುದು ಸರ್ವೇಸಾಮಾನ್ಯವಾಗಿತ್ತು.ಇದಕ್ಕೆ ಕಾರಣ ಅವನಿಗಿದ್ದ ಅನೈತಿಕ ಸಂಬಂಧ. ಈ ವಿಷ್ಯ ತನ್ಮಯಳಿಗೂ ತಿಳಿದಿತ್ತು.ಆದರೂ ಅವಳು ಏನೂ ಮಾಡುವಂತಿರಲಿಲ್ಲ. ಏಕೆಂದರೆ ಅವಳ ತವರು ಮನೆಯವರು ಮಧ್ಯವರ್ಗದ ಕುಟುಂಬದವರು. ಅವಳ ಗಂಡನನ್ನು ಎದುರಿಸುವಷ್ಟು ಸಾಮರ್ಥ್ಯ ಅವರಲ್ಲಿ ಇರಲಿಲ್ಲ.ಹೀಗಾಗಿ ಅವನನ್ನು ಕೇಳುವವರು ಯಾರೂ ಇಲ್ಲದಂತಾಗಿ ಮೆರೆಯುತ್ತಿದ್ದ. ಹೆಂಡತಿ ಮೇಲೆ ಪ್ರೀತಿ ಇಲ್ಲದಿದ್ದದರೂ ಪರಸ್ತ್ರೀಯರ ಮೇಲೆ ಮೋಹ ಜಾಸ್ತಿ.ಇದರಿಂದ ಇವಳು ತುಂಬಾ ಬೇಸತ್ತು ಹೋಗಿದ್ದಳು.ಗಂಡನ ಪ್ರೀತಿ ಕಾಣದೆ ಒಂಟಿತನ ಕಾಡುತ್ತಿತ್ತು. ಒಂದಲ್ಲ ಒಂದು ದಿನ ನನಗೂ ಪ್ರೀತಿ ಸಿಗುತ್ತೆ ಎಂದು ಪ್ರೀತಿಗಾಗಿ ಹಂಬಲಿಸುತ್ತಿದ್ದಳು.ಆದರೆ ಚಂದನ್ ಗೆ ಮಾತ್ರ ಹೆಂಡತಿ ಎಂದರೆ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಬಿದ್ದಿರುವ ಒಂದು ಜೀವವಿರುವ ವಸ್ತು. ತನಗೆ ಬೇಕಾದಾಗ ಉಪಯೋಗಿಸಿ ಕೊಳ್ಳುವ ಒಂದು ಭೋಗದವಸ್ತು.ಇದಕ್ಕೆ ಪರಿಣಾಮವಾಗಿ ಹುಟ್ಟಿದ ಹೆಣ್ಣುಮಗು ಮಧು.ಅವಳಿಗೀಗ 7 ವರ್ಷ ವಯಸ್ಸು. ಒಂದನೇ ತರಗತಿಯಲ್ಲಿ ಓದುತ್ತಿದ್ದಳು.ಹೀಗಿರುವಾಗ ಇಂದು ಬೆಳಿಗ್ಗೆ ತನ್ನ ತವರುಮನೆಯಿಂದ ಫೋನ್ ಕಾಲ್ ಬಂದಿತ್ತು. ತನ್ನ ತಾಯಿಗೆ ತುಂಬಾ ಹುಷಾರಿಲ್ಲ ಅಂತ.ತುಂಬಾ ಬೇಸರವಾಗಿ ಗಂಡನಿಗೆ ಹೇಳಿದಳು ರೀ ಅಮ್ಮನಿಗೆ ಹುಷಾರಿಲ್ಲವಂತೆ, ಬನ್ನಿ ಹೋಗಿ ನೋಡಿಕೊಂಡು ಬರೋಣ. ಅಷ್ಟಕ್ಕೇ ಅವನು ಅವಳ ಮೇಲೆ ಕಿರುಚಾಡಲು ಶುರು ಮಾಡಿದ. ನಂಗೆ ಬೇರೆ ಏನೂ ಕೆಲ್ಸ ಇಲ್ಲ ಅನ್ಕೊಂಡ್ಯ‌ಾ ನಿನ್ನ ಜೊತೆ ಸುತ್ತೋಕೆ. ನಂಗೆ ಬರೋಕಾಗಲ್ಲ.ನಿಂಗೆ ಇಷ್ಟ ಇದ್ರೆ ಹೋಗು, ಇಲ್ಲವಾದರೆ ಬಿಡು. ನಾನು ಬರೋದಿಲ್ಲ ಎಂದ. ಹೀಗಾಗಿ ಅವಳು ಅಂದು ರಾತ್ರಿ ತನ್ನ ತಾಯಿಯನ್ನು ನೋಡಲು ತವರೂರಾದ ಚಿಕ್ಕಮಗಳೂರಿಗೆ ಒಂಟಿಯಾಗೇ ಬಸ್ಸಿನಲ್ಲಿ ಹೊರಟಿದ್ದಳು.....

N....R....

ಮುಂದುವರಿಯುತ್ತದೆ.....

Comments

Submitted by NishaRoopa Mon, 05/25/2015 - 00:04

ಓದುಗರೇ....ಈ ಕಥೆ ಕೇವಲ ನನ್ನ ಕಾಲ್ಪಾನಿಕ....