ಓ..ಒಲವೇ(6)

ಓ..ಒಲವೇ(6)

ದಿನಗಳು ಹೀಗೇ ಉರುಳುತ್ತಿದ್ದವು.ಸಂಜು ತನ್ನ ಪ್ರೀತಿಯನ್ನು ಎಷ್ಟೇ ತೋರಿಸಿಕೊಂಡರೂ ಸಹ ತನು ಅವನಲ್ಲಿ ಒಬ್ಬ ಗೆಳೆಯನನ್ನು ಮಾತ್ರ ಕಾಣುತ್ತಿದ್ದಳು.ಹಾಗಂತ ಅವಳಿಗೆ ಅವನ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ಹೌದು ನನಗೂ ಅವನ ಮೇಲೆ ಪ್ರೀತಿ ಇದೆ. ಅದನ್ನು ನಾನು ತೋರಿಸಿಕೊಂಡ್ರೆ ಆಗ ಸಂಜು ಇನ್ನೂ ಹೆಚ್ಚು ಹೆಚ್ಚು ಪ್ರೀತಿ ಮಾಡ್ತಾನೆ.ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿ ಗಾಢವಾಗುತ್ತೆ.ಮುಂದೊಂದು ದಿನ ನಮ್ಮಿಬ್ಬರ ವಿಷ್ಯ ನನ್ನ ಗಂಡನಿಗೆ ಗೊತ್ತಾದರೆ ಆಗ ಪರಸ್ಪರ ನಾವಿಬ್ಬರೂ ಶಾಶ್ವತವಾಗಿ ದೂರವಾಗೋ ಪ್ರಸಂಗ ಬರುತ್ತೆ.ಆಗ ಸಂಜು ಗತಿ ಏನು..? ಇವನು ನನ್ನ ಎಷ್ಟು ಪ್ರೀತಿ ಮಾಡ್ತಾನೆ ಅಂದ್ರೆ ಒಂದುವೇಳೆ ನಾವೇನಾದರೂ ದೂರವಾಗಿಬಿಟ್ರೆ ಸಂಜು ಹುಚ್ಜನಾಗಿ ಬಿಡ್ತಾನೇನೋ..ಬೇಡ ಬೇಡ ಪ್ರೀತಿ ಮಾಡಿ ಅದೆಲ್ಲರಿಗೂ ಗೊತ್ತಾಗಿ ನಾವು ದೂರವಾಗುವ ಬದಲು ಶಾಶ್ವತವಾಗಿ ಗೆಳೆಯರಾಗಿರೋದೆ ಒಳ್ಳೆಯದು, ಯಾವ ಕಾರಣಕ್ಕೂ ನಾನು ಸಂಜೂನ ಕಳೆದುಕೊಳ್ಳೋಕೆ ಇಷ್ಟ ಪಡಲ್ಲ ಅಂತ ತೀರ್ಮಾನಿಸಿದಳು.ಆದರೆ ವಿಧಿ ಬಿಡಬೇಕಲ್ಲ.ಒಂದು ದಿನ ಸಂಜು ತನುಗೆ ಫೋನ್ ಮಾಡಿದ. ತನು ಇವತ್ತು ನೀನು ನಿನ್ನ ಮನಸ್ಸಿನಲ್ಲಿರೋದನ್ನು ಹೇಳಲೇಬೇಕು ಎಂದು ಒತ್ತಾಯ ಮಾಡಿದನು.ನಿಮಗೆ ಎಷ್ಟು ಸಲ ಹೇಳೋದು ಸಂಜು ನಿಮ್ಮ ಮೇಲೆ ನನಗೆ ಅಂತಹ ಯಾವ ಅಭಿಪ್ರಾಯವೂ ಇಲ್ಲ. ನೋಡೆ ತನು ನನ್ನ ಸುಮ್ಮನೆ ಆಟವಾಡಿಸಬೇಡ, ನಾನೀಗ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗ್ತಾ ಇದ್ದೀನಿ, ಅರ್ಧ ದಾರೀಲೇ ಬೈಕ್ ನಿಲ್ಲಿಸಿ ಕೇಳ್ತಾ ಇದ್ದೀನಿ, ಇವತ್ತು ನನ್ನ ಪ್ರೀತೀನ ಒಪ್ಪಿಕೊಳ್ಳೋವರೆಗೂ ನಾನು ಇವತ್ತು ಮನೆಗೆ ಹೋಗಲ್ಲ, ಇಲ್ಲೇ ದಾರೀಲೇ ನಿಂತಿರ್ತೀನಿ ಅಂದ. ಇದನ್ನು ಕೇಳಿ ತನುಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ.ನೋಡಿ ಸಂಜು ಈ ವಿಷ್ಯದಲ್ಲಿ ಹೀಗೆಲ್ಲಾ ಆಟವಾಡ್ಬೇಡಿ.ನೀವಿನ್ನೂ ಮದುವೆಯಾಗದ ಗಂಡೂ ಅಲ್ಲ, ನಾನಿನ್ನೂ ಮದುವೆಯಾಗದ ಕಾಲೇಜಿಗೆ ಹೋಗುವ ಹೆಣ್ಣೂ ಅಲ್ಲ, ನೀವೀರೀತಿ ಕೇಳಿದ ತಕ್ಷಣ ಒಪ್ಪಿಕೊಳ್ಳೋಕೆ, ನಮಗಿಬ್ಬರಿಗೂ ನಮ್ಮದೇ ಆದ ಕುಟುಂಬ,ಸಂಸಾರಗಳಿವೆ, ಜವಾಬ್ದಾರಿಗಳಿವೆ.ಅದನ್ನೆಲ್ಲ ಮರೆತು ಹೀಗೆ ಮಾಡೋದು ಸರಿಯಲ್ಲ. ನಿಮ್ಮ ಮನೆಯಲ್ಲಿ ನಿಮಗಾಗಿ ನಿಮ್ಮ ಹೆಂಡತಿ ಮಕ್ಕಳು ಕಾಯ್ತಾ ಇರ್ತಾರೆ, ಹೋಗಿ ಮನೆ ಸೇರ್ಕೊಳ್ಳಿ.ಅದೆಲ್ಲ ನಂಗೂ ಗೊತ್ತು ಕಣೆ, ನೀನೀವತ್ತು ನನ್ನ ಪ್ರೀತೀನ ಒಪ್ಕೊಳ್ಳಲೇ ಬೇಕು ಇಲ್ಲಾಂದ್ರೆ ಅದು ಏನೇ ಆಗಲಿ ನಾನು ಮನೆಗೆ ಹೋಗಲ್ಲ ಅಂದನು.ಇದರಿಂದ ಮುಂದೆ ಆಗೋ ಅನಾಹುತಗಳ ಬಗ್ಗೆ ಹೇಳಿದಳು, ವಿಧ ವಿಧವಾಗಿ ಅವನ ಮನವೊಲಿಸಲು ಪ್ರಯತ್ನಿಸಿದಳು, ಏನೂ ಪ್ರಯೋಜನವಾಗಲಿಲ್ಲ, ಕೊನೆಗೂ ಅವನ ಪ್ರೀತಿಗೆ ಸೋಲಲೇಬೇಕಾಯಿತು.ಸರಿ ಸಂಜು ನಾನು ನಿಮ್ಮ ಪ್ರೀತೀನ ಒಪ್ಕೋತೀನಿ,ನಿಮ್ಮನ್ನ ಇಷ್ಟ ಪಡ್ತೀನಿ, ಆದ್ರೆ....... ಇಷ್ಟ ಅಂತೀಯ, ಮತ್ತೆ ಆದ್ರೆ ಅಂತೀಯ, ಏನು ನಿನ್ನ ಸಂದೇಹ ಹೇಳು ಅಂದ.ಓಕೆ ನಾವೇನೋ ಪ್ರೀತಿ ಮಾಡ್ತೇವೆ ಸರಿ, ಆದ್ರೆ ಅದು ಎಲ್ಲಿಯವರೆಗೆ...? ನನಗೇನೋ ನೀವು ದಿನಾ ಪ್ರೀತಿಯಿಂದ ನಾಲ್ಕು ಮಾತುಗಳನ್ನ‌ಾಡಿದರೆ ಸಾಕು, ಅಷ್ಟರಲ್ಲೇ ಸಂತೋಷವಾಗಿ ನಾನು ಜೀವನ ಸಾಗಿಸ್ತೀನಿ, ಆದ್ರೆ ಗಂಡಸರು ಹಾಗಲ್ಲ, ಅವರು ಪ್ರೀತಿ ಹೆಚ್ಚಾಗ್ತಾ ಹೆಚ್ಚಾಗ್ತಾ ಇನ್ನು ಮುಂದುವರಿಯಬೇಕು ಅಂದುಕೊಳ್ತಾರೆ, ಆದ್ರೆ ಅದೆಲ್ಲ ನಂಗೆ ಇಷ್ಟ ಅಗಲ್ಲ ಎಂದಳು. ಓಹ್..ನಂಗೆ ಈಗ ಅರ್ಥವಾಯ್ತು ಬಿಡೆ, ನೀನು ಹೇಳ್ತಿರೋದು ಸೆಕ್ಸ್ ಬಗ್ಗೆ ಅಲ್ವಾ ಅಂದನು. ಹೌದು ಸಂಜು ನಮ್ಮ ಪ್ರೀತಿ ಮನಸ್ಸಿಗೆ ಸೀಮಿತವಾಗಿರಬೇಕೇ ಹೊರತು, ನಮ್ಮ ದೇಹಕಲ್ಲ.ನಮ್ಮ ಪ್ರೀತಿ ಪವಿತ್ರವಾಗಿರಬೇಕು. ಆಯ್ತು ತನು ನಂಗೆ ನೀನು ಮುಖ್ಯ, ನಿನ್ನ ಪ್ರೀತಿ ಮುಖ್ಯವೇ ಹೊರತು ನಿನ್ನ ದೇಹವಲ್ಲ, ಈಗ ನಿನಗೆ ನಾನು ಮಾತು ಕೊಡ್ತೀನಿ, ನಾನು ಎಂದೂ ನಿನ್ನ ದೇಹ ಬಯಸೋಲ್ಲ, ಒಂದು ವೇಳೆ ನೀನು ಸಂಪೂರ್ಣ ಬೆತ್ತಲೆಯಾಗಿ ಒಂದೇ ಹಾಸಿಗೆಯಲ್ಲಿ ನನ್ನ ಪಕ್ಕದಲ್ಲಿ ಮಲಗಿದ್ದರೂ ಸಹ ನಾನು ನಿನ್ನ ಮುಟ್ಟಲ್ಲ. ಇದೇ ನನ್ನ ಮಾತು, ಈಗಲಾದರೂ ನನ್ನ ನಂಬು ಎಂದನು.ತನುಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಯ್ತು,ನೀವು ನಿಜ ಹೇಳ್ತಿದ್ದೀರ ಸಂಜು. ಹೌದು ಕಣೆ ನಾನು ನಿಜಾನೆ ಹೇಳ್ತಿರೋದು, ಯಾವ ಕಾರಣಕ್ಕೂ ನಾನು ನಿನ್ನನ್ನು ಕಳೆದುಕೊಳ್ಳಲು ಬಯಸಲ್ಲ.ನಿನ್ನಿಸ್ಟಾನೇ ನನ್ನಿಸ್ಟ, ನೀನು ಹೇಗೆ ಹೇಳ್ತೀಯೋ ಹಾಗೆ ಇರ್ತೀನಿ, ಈಗಲಾದರೂ ನಿನ್ನ ಮನಸ್ಸಿನಲ್ಲಿರೋದನ್ನ ಹೇಳು, I LOVE YOU ಅಂತ ಹೇಳು ಅಂದ. ತನು ಸ್ವಲ್ಪ ನಾಚಿಕೆಯಿಂದ ಇಲ್ಲ ಸಂಜು ಅದೆಲ್ಲ ಆಗಲ್ಲ ಎಂದಳು, ಯಾಕೆ ಪ್ರೀತಿ ಮಾಡ್ತೀಯಂತೆ ಅದನ್ನು ಬಾಯ್ಬಿಟ್ಟು ಹೇಳೋಕೆ ಕಷ್ಟನಾ ...? ಹೌದು ಸಂಜು ಮದುವೆಯಾಗಿ 10 ವರ್ಷಗಳಾದ್ರೂ ಇನ್ನೂ ಒಮ್ಮೆಯೂ ನಾನು ನನ್ನ ಗಂಡನಿಗೇ I LOVE YOU ಅಂತ ಹೇಳಿಲ್ಲ, ಅಂತಾದ್ರಲ್ಲಿ ನಿಮಗೆ.......? ಏನು ನಿಜಾನಾ, ನಿನ್ನ ಗಂಡನಿಗೇ ಯಾವತ್ತೂ ಹೇಳ್ಲಿಲ್ವಾ, ಮೊದಲ ಸಲ ಹೇಳ್ತಾ ಇದ್ದೀಯ, ಅದೂ ನನಗೆ, I am so lucky dear, ಬೇಗ ಹೇಳು ಬೇಗ ಹೇಳು ಅಂತ ತುಂಬಾ ಕಾತುರದಿಂದ ಕಾಯತೊಡಗಿದ. ಅವಳು ತುಂಬಾ ನಾಚಿಕೆಯಿಂದ ಸಂಜು..I..LOVE..YOU ಕಣೋ ಅಂದಳು.ಅವನ ಆನಂದಕ್ಕೆ ಪಾರವೇ ಇಲ್ಲದಂತಾಯ್ತು.ಕುಣಿದಾಡುವಷ್ಟು ಸಂತೋಷವಾಗಿ Thank you so much ತನೂ I LOVE YOU TOOOOOO ಎಂದು ಕೂಗಿದನು...

N....R....

ಮುಂದುವರೆಯುತ್ತದೆ.....