ಓ..ಒಲವೇ(7)

ಓ..ಒಲವೇ(7)

ತನು ನಿನ್ನ ಪಾದಗಳು ತುಂಬಾ ಸುಕೋಮಲವಾಗಿವೆ ಅಂದ,ತನುಗೆ ಆಶ್ಚರ್ಯವಾಗಿ ನಿಮಗೆ ಹೇಗೆ ಗೊತ್ತಾಯ್ತು ಅಂದಳು.ಮರೆತು ಬಿಟ್ಯಾ ?ಬಸ್ಸಲ್ಲಿ...ಅವಳು ನಾಚಿಕೆಯಿಂದ ಅಯ್ಯೋ ನಿಮಗೆ ಗೊತ್ತಾಗಿ ಬಿಡ್ತಾ?.ಹೌದು ಕಣೆ ನೀನು ನನ್ನ ಹೆಗಲ ಮೇಲೆ ಮಲಗಿದ್ದ ಆ ಕ್ಷಣ ಹೇಗೆ ಮರೆಯೋಕೆ ಸಾಧ್ಯ.ನಿನ್ನ ನಿದ್ರೆ ಕೆಡಿಸಬಾರದು ಅಂತ ನಾನು ಅಲುಗಾಡದೆ ನಿದ್ರೆ ಮಾಡುವನಂತೆ ನಟಿಸಿದ್ದೆ ಅದೂ ಅಲ್ಲದೆ ಆ ವಿಷ್ಯ ನಂಗೆ ಗೊತ್ತಾಗಿದೆ ಅಂತ ತಿಳಿದ್ರೆ ನಿಂಗೆ ಬೇಜಾರಾಗುತ್ತೆ ಅಂತ ಇಷ್ಟು ದಿನ ನಾನು ಹೇಳಲಿಲ್ಲ.ಆದ್ರೆ ಈಗ ನಾವಿಬ್ಬರು ಪ್ರೀತಿ ಮಾಡ್ತಾ ಇದ್ದೀವಲ್ವಾ ನಮ್ಮಿಬ್ಬರ ನಡುವೆ ಯಾವುದೇ ಗುಟ್ಟು ಇರಬಾರದು ಅಂತ ಹೇಳಿದ್ದು ಅಂದನು.ಹೌದು, ಈಗ ಇಬ್ಬರೂ ಒಂದು ಕ್ಷಣಾನೂ ಒಬ್ಬರಿಗೊಬ್ಬರು ಬಿಟ್ಟಿರದಷ್ಟು ಪ್ರೀತಿ ಮಾಡುತ್ತಿದ್ದರು.ತನು ಬೇಗ ಬೇಗ ತನ್ನ ಮನೆಕೆಲಸವನ್ನೆಲ್ಲಾ ಮುಗಿಸಿಕೊಂಡು ಸಂಜುಗೆ ಫೋನ್ ಕಾಲ್ ಮಾಡುತ್ತಿದ್ದಳು.ಹಾಗೆಯೆ ಸಂಜು ಸಹ ತನ್ನ ಆಫೀಸ್ ಕೆಲಸ ಬೇಗ ಮುಗಿಸಿ ತನು ಯಾವಾಗ msg ಮಾಡ್ತಾಳೋ, ಯಾವಾಗ ಫೋನ್ ಮಾಡ್ತಾಳೋ ಅಂತ ಕಾಯುತ್ತಿರುತ್ತಿದ್ದ.
ಒಂದುವೇಳೆ ಅವಳಿಂದೇನಾದರೂ ಸ್ವಲ್ಪ ತಡವಾದರೆ ಇಲ್ಲೊಬ್ಬ ಬಡಪಾಯಿ ನಿನಗಾಗಿ ಕಾಯುತ್ತಿದ್ದಾನೆ ಅನ್ನೋ ನೆನಪೇ ಇರಲ್ಲ ನಿಂಗೆ,ನಾನಂದ್ರೆ ನಿಂಗೆ ಸ್ವಲ್ಪಾನೂ ಇಷ್ಟ ಇಲ್ಲ ಅಂತ ಬೈತಿದ್ದ.ಆ ರೀತಿ ಬೈದರೂ ತನುಗೆ ಒಂದು ರೀತಿಯ ಸಂತೋಷ ಸಿಕ್ತಾ ಇತ್ತು.ಅಲ್ಲ ಸಂಜು ನೀವು ಒಂದು ವೇಳೆ ಮನೆಯಲ್ಲಿ ಇರ್ತೀರೋ ಏನೋ ಅಂತ, ನಿಮ್ಮ ಹೆಂಡತಿಗೆ ಸಂಶಯವಾದ್ರೆ...? ಸುಮ್ನೆ ನಿಮಗೆ ತೊಂದರೆಯಾಗಬಾರದಲ್ವಾ ಅಂದಳು.ನೋಡು ತನು ನೀನು ಈ ರೀತಿಯೆಲ್ಲಾ ಯೋಚಿಸಬೇಡ,ನೀನು ಯಾವಾಗ ಬೇಕಾದರೂ ನಂಗೆ msg ಮಾಡಬಹುದು ಯಾವಾಗ ಬೇಕಾದರೂ ನಂಗೆ ಫೋನ್ ಮಾಡಬಹುದು.ನಿನಗೆ ಆ ಅಧಿಕಾರವಿದೆ.ನೀನು ಏನೋ ಎತ್ತೋ ಅಂತ ಯೋಚಿಸಬೇಡ ಅಂದನು.ಸಂಜು ತನ್ನ ಜೀವನದಲ್ಲಿ ಪ್ರವೇಶ ಮಾಡಿದಾಗಿನಿಂದ ತನು ತುಂಬಾ ಸಂತೋಷವಾಗಿದ್ದಳು.
ಅವನನ್ನು ಯಾವುದೇ ಕಾರಣಕ್ಕೂ ಕಳೆದು ಕೊಳ್ಳುವುದಕ್ಕೆ ಇಷ್ಟಪಡುತ್ತಿರಲಿಲ್ಲ.ಆದರೂ ತನೂ ಳ ಮನಸ್ಸಿನ ಯಾವುದೋ ಮೂಲೆಯಲ್ಲಿ ಒಂದು ಪ್ರಶ್ನೆ ಕಾಡುತ್ತಿತ್ತು.ಆ ಒಂದು ಪ್ರಶ್ನೆ ಅವಳ ಈ ಎಲ್ಲಾ ಸಂತೋಷವನ್ನು ಹಾಳುಮಾಡಿಬಿಡುತ್ತಿತ್ತು.ಸಂಜು ಕೇಳಿದ ತನು ನಾವಿಬ್ಬರೂ ಒಟ್ಟಿಗೇ ಜೊತೇಲೆ ಇರೋಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು, ನಿನ್ನ ಬಿಟ್ಟು ಒಂದು ಕ್ಷಣಾನೂ ಇರೋಕೆ ಆಗ್ತಿಲ್ಲ ಕಣೆ ನಂಗೆ,ನಾವಿಬ್ಬರೂ ಗಂಡ ಹೆಂಡತಿ ಆಗಿದ್ರೆ ಚೆನ್ನಾಗಿರ್ತ್ತಿತ್ತು.ಇಲ್ಲ ಸಂಜು ಈ ಜನ್ಮದಲ್ಲಿ ಅದೆಲ್ಲ ಸಾಧ್ಯವಾಗದ ಸಂಗತಿ ಅಂದಳು.ಯಾಕೇ ಹಾಗೆ ಹೇಳ್ತೀಯ ತಾಳಿ ಕಟ್ಟದಿದ್ದರೆ ಏನಂತೆ, ನಾನಂತು ನನ್ನ ಮನಸ್ಸಿನಲ್ಲಿ ನಿನ್ನನ್ನು ನನ್ನ ಹೆಂಡತಿ ಅಂತಾನೇ ತಿಳ್ಕೊಂಡಿರೋದು.ಈ ಲೋಕದ ಕಣ್ಣಿಗೆ ನಾವು ಗಂಡ ಹೆಂಡತಿ ಅಲ್ಲದಿದ್ದರೂ ನಮ್ಮ ಮನಸ್ಸಿಗೆ ನಾವು ಗಂಡ ಹೆಂಡತಿನೇ ಕಣೆ ಅಂದನು.ತನುಗೆ ಇವನು ನನ್ನ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಅಂದರೆ ತನ್ನ ಮನಸ್ಸಿನಲ್ಲಿ ನನಗೆ ಹೆಂಡತಿಯ ಸ್ಥಾನ ಕೊಟ್ಟಿದ್ದಾನೆ.ದೇವರೇ ನಮ್ಮ ಪ್ರೀತಿಯ ಪಯಣ ಶಾಶ್ವತವಾಗಿ ಹೀಗೇ ಸಾಗಲಿ ಎಂದು ಕೇಳಿಕೊಳ್ಳುತ್ತಿದ್ದಳು.ಅವರಿಬ್ಬರ ಮನಸ್ಸುಗಳು ಹಾಲು ಜೇನಿನಂತೆ ಬೆರೆತುಹೋಗಿದ್ದವು.ಈಗ ತನು ಸಣ್ಣ ಸಣ್ಣ ವಿಷಯಗಳಿಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ಗಂಡ ಚಂದನ್ ನ ಆ ಬೈಗುಳ, ರೇಗಾಟ, ಕಿರುಚಾಟ ಯಾವುದೂ ಅವಳ ತಲೆ ಹತ್ತುತ್ತಿರಲಿಲ್ಲ.ಅವನು ವಿನಾ ಕಾರಣ ಎಷ್ಟೇ ಬೈದರೂ ಅದು ಅವಳ ಮನಸ್ಸಿಗೆ ನೋವು ಕೊಡುತ್ತಿರಲಿಲ್ಲ. ತನಗೂ ಅದಕ್ಕೂ ಏನೂ ಸಂಬಂಧವಿಲ್ಲದಂತೆ, ಕೇಳಿಸಿಯೂ ಕೇಳಿಸದಂತೆ ಇರುತ್ತಿದ್ದಳು. ಸಂಜು ನ ಪ್ರೀತಿ ಇವೆಲ್ಲವನ್ನು ಸಹಿಸುವಷ್ಟು ಶಕ್ತಿ ಮತ್ತು ಧೈರ್ಯ ಕೊಡುತ್ತಿತ್ತು.ಹೀಗೇ ಸಂಜು ಮತ್ತು ತನು ಪ್ರೀತಿ ಒಬ್ಬರಿಗೊಬ್ಬರು ಬಿಟ್ಟಿರದಷ್ಟು ಗಾಢವಾಗತ್ತಾ ಗುಪ್ತವಾಗಿ ಬೆಳೆಯತೊಡಗಿತು.ಇಬ್ಬರೂ ಪ್ರೇಮಪಕ್ಷಿಗಳಂತೆ ಹಾರಾಡುತ್ತಾ ಹಾರಾಡುತ್ತ 3 ತಿಂಗಳುಗಳು ಹೇಗೆ ಕಳೆದವೋ ಅಂತ ಇಬ್ಬರಿಗೂ ಗೊತ್ತಾಗಲೇ ಇಲ್ಲ.ಆದರೆ......

N....R....

ಮುಂದುವರೆಯುತ್ತದೆ......

Comments