ಓ..ಒಲವೇ(8)

ಓ..ಒಲವೇ(8)

ಎಷ್ಟೇ ಮತು ಕೊಟ್ಟಿದ್ದರೂ ಸಹ ಸಂಜುಗೆ ತನು ಜೊತೆ ಒಬ್ಬ ಗಂಡ ತನ್ನ ಹೆಂಡತಿಯೊಡನೆ ಹೇಗೆಲ್ಲಾ ಇರಲು ಸಾಧ್ಯವೋ ಹಾಗೆಲ್ಲ ಇರಲು ಬಯಸುತ್ತಿದ್ದ. ಶಾರೀರಿಕವಾಗಿಯೂ ಸಹ.ಆದರೆ ತನು ಅಂತಹುದಕ್ಕೆಲ್ಲ ಆಸ್ಪದ ಕೊಡುತ್ತಿರಲಿಲ್ಲ.ಆ ವಿಷಯವನ್ನು ಮಾತಿಗೆ ಎಳೆದರೂ ಸಹ ತನು ಮಾತ್ರ ಅವನ ಮಾತನ್ನು ಮೊಟುಕುಗೊಳಿಸಿ ಬೇರೆ ವಿಷಯದ ಬಗ್ಗೆ ಮಾತನಾಡಿ ಅವನ ಮನ ಬೇರೆ ವಿಷಯದ ಕಡೆ ಗಮನ ಬರುವಂತೆ ಮಾಡುತ್ತಿದ್ದಳು.ಹೀಗೆ ಮೂರು ತಿಂಗಳು ಕಳೆದಾಯ್ತು. ತನು ಗೆ ಏನೋ ಒಂದು ಆತ್ಮತೃಪ್ತಿ, ನಮ್ಮ ಪ್ರೀತಿ ಪವಿತ್ರವಾಗಿದೆ, ಪ್ರೀತಿಗಾಗಿ ಹಂಬಲಿಸುತ್ತಿದ್ದ ನನಗೆ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುವ ಪ್ರೀತಿ ಸಿಕ್ಕಿದೆ ಎಂದು.ಆದರೂ ಅವಳ ಮನಸ್ಸಿನಲ್ಲಿ ಕೊರೆಯುತ್ತಿ ದ್ದ ಒಂದು ವಿಷಯ ಬೆಂಬಿಡದ ಬೇತಾಳನಂತೆ ಕಾಡುತ್ತಿತ್ತು.ಇವತ್ತು ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಷ್ಯವನ್ನು ಸಂಜುಗೆ ಹೇಳಬೇಕು.ಆಗ ಸಂಜು ನನಗೆ ಸಮಾಧಾನ ಹೇಳಿ ಇದಕ್ಕೆ ಒಂದು ಉಪಾಯವನ್ನು ಹುಡುಕುತ್ತಾನೆ.ಆಗ ಎಲ್ಲರೂ ಸಂತೋಷವಾಗಿರಬಹುದು.ನನ್ನ ಮನಸ್ಸು ಸಹ ಹಗುರವಾಗುತ್ತೆ ಅಂದುಕೊಂಡು ಹೇಳಿದಳು.ಸಂಜು ನೀನು ನನ್ನ ಜೀವನದಲ್ಲಿ ಕಾಲಿಟ್ಟು ನನ್ನ ಎಲ್ಲಾ ನೋವುಗಳನ್ನು ಮರೆಯುವಂತೆ ಮಾಡಿದ್ದೀಯ.ನಾನೀಗ ತುಂಬಾ ಸಂತೋಷವಾಗಿದ್ದೀನಿ.ನಾವೇನೋ ಯಾರಿಗೂ ಗೊತ್ತಾಗದ ಹಾಗೆ ಪ್ರೀತಿ ಮಾಡ್ತಾ ಇದ್ದೀವಿ.ನಮ್ಮಿಬ್ಬರ ಕೊನೆಯುಸಿರು ಇರೋವರೆಗೂ ಈ ವಿಷ್ಯ ಯಾರಿಗೂ ಗೊತ್ತಾಗೊಲ್ಲ.ಆದರೂ ನನಗೆ ನಾನು ತಪ್ಪು ಮಾಡ್ತಾ ಇದ್ದೀನಿ ಅನಿಸ್ತಾ ಇದೆ.ನನ್ನ ಗಂಡನಿಗೂ ಮತ್ತು ನಿಮ್ಮ ಹೆಂಡತಿಗೂ ಮೋಸ ಮಾಡ್ತಾ ಇದ್ದೀನಿ, ಅವರಿಬ್ಬರಿಗೂ ನಂಬಿಕೆದ್ರೋಹ ಮಾಡ್ತಾ ಇದ್ದೀನಿ ಅನಿಸುತ್ತಾ ಇದೆ.ನಿನ್ನ ಹೆಂಡತಿಗೆ ಸಿಗಬೇಕಾದ ನಿನ್ನ ಪ್ರೀತೀನ ನಾನು ಕಸಿದುಕೊಳ್ತಾ ಇದ್ದೀನಿ ಅನ್ನೋ ಪಾಪಪ್ರಜ್ಞೆ ಕಾಡ್ತಾ ಇದೆ.ಇದರಿಂದ ನನ್ನ ನೆಮ್ಮದಿಯೇ ಹಾಳಾಗ್ತಾ ಇದೆ ಅಂದಳು.ಈ ಮಾತು ಕೇಳಿ ಸಂಜುಗೆ ಕೋಪ ಬಂದು ತನು ನ ಬೈದನು.ಓಹೋ,ಹಾಗಾದರೆ ನಾನು ನಿನ್ನ ಜೀವನದಲ್ಲಿ ಬಂದ ಮೇಲೆ ನಿನಗೆ ನೆಮ್ಮದಿ ಹಾಳಾಯ್ತು ಅನಿಸ್ತಾ ಇದ್ಯಾ ಅಂದ.ಇಲ್ಲ ಇಲ್ಲ ಸಂಜು ನಾನು ಆ ರೀತಿ ಹೇಳಿಲ್ಲ, ನೀವು ನನ್ನನ್ನು ತಪ್ಪಾಗಿ ಅರ್ಥ ಮಾಡ್ಕೋತಾ ಇದ್ದೀರ.ನೀವು ನನ್ನ ಬಾಳಲ್ಲಿ ಬಂದು ನಿಮ್ಮ ಅಗಾಧವಾದ ಪ್ರೀತಿ ಕೊಟ್ಟಿದ್ದೀರ.ನಾನೂ ತುಂಬಾ ಸಂತೋಷವಾಗಿದ್ದೀನಿ.ಯಾವುದೇ ಕಾರಣಕ್ಕೂ ನಿಮ್ಮ ಕಳೆದುಕೊಳ್ಳೋಲ್ಲ.ಅವರಿಬ್ಬರಿಗೂ ಮೋಸ ಮಾಡ್ತಾ ಇದ್ದೀನಿ ಅನ್ನೋ ಪಾಪಪ್ರಜ್ಞೆ ಕಾಡ್ತಾ ಇರೋದ್ರಿಂದ ನನಗೆ ನೆಮ್ಮದಿ ಇಲ್ಲದಂತಾಗಿದೆಯೇ ಹೊರತು ನಿಮ್ಮಿಂದ ಅಲ್ಲ.ಈ ಸಮಸ್ಯೆಗೆ ನೀವು ಏನಾದರೂ ಪರಿಹಾರ ಹುಡುಕುತ್ತೀರ,ಇದರಿಂದ ಎಲ್ಲರೂ ಸಂತೋಷವಾಗಿರಬಹುದು ಅಂತ ಹೇಳಿದೆ ಅಷ್ಟೆ ಅಂದಳು.ಮತ್ತೆ ಸಂಜು ಆ ವಿಷ್ಯದಲ್ಲಿ ಬೇರೇನು ಮಾತನಾಡಲಿಲ್ಲ.ಈಗ ತನುಗೆ ಎಲ್ಲ ವಿಷ್ಯ ಸಂಜುಗೆ ಹೇಳಿದ ಮೇಲೆ ತನ್ನ ಮನಸ್ಸಿನ ಭಾರ ಕಡಿಮೆಯಾದಂತ್ತಾಯ್ತು.ಹೀಗೇ ಕೆಲವು ದಿನಗಳು ಕಳೆದವು.ಸಂಜು ಬೆಳಿಗ್ಗೆ 6 ಗಂಟೆಗೆ msg ಮಾಡೋದಕ್ಕೆ ಆರಂಭ ಮಾಡಿದ್ರೆ ರಾತ್ರಿ 11 ಗಂಟೆಗೆ gud ngt msg ನೊಂದಿಗೆ ಕೊನೆಗೊಳ್ಳುತ್ತಿತ್ತು. ಮತ್ತು call ಸಹ ಎಷ್ಟು ಗಂಟೆ ಮಾತಾಡ್ತಿದ್ರೋ ಅವರಿಗೇ ಗೊತ್ತಿರ್ತ್ತಿಲ್ಲ. ಅಂಥಾದ್ದು ಸಂಜು msg ಮತ್ತು call ಮಾಡೋದನ್ನು ಬರಬರುತ್ತಾ ಕಡಿಮೆ ಮಾಡುತ್ತಾ ಬಂದ. ತನು ತಾನಾಗೇ msg ಮಾಡಿದರೂ ಆವನಿಗೆ ಇಷ್ಟ ಬಂದಾಗ ಯಾವಾಗ್ಲೋ ನೋಡ್ತಾ ಇದ್ದ. ಮತ್ತೆ ಯಾವಾಗ್ಲೋ reply ಮಾಡ್ತಿದ್ದ. ಯಾಕೆ ಹೀಗೆ ಮಾಡ್ತಾ ಇದ್ದಾನೆ, ಪಾಪ ತುಂಬಾ ಬ್ಯುಸಿ ಇರ್ಬೇಕು ಅನ್ಸುತ್ತೆ ಇಲ್ಲಾಂದ್ರೆ ಸಂಜು ನನಗೆ ಈ ರೀತಿಯೆಲ್ಲ ಮಾಡೋಲ್ಲ ಅಂದುಕೊಂಡಳು. ಮನಸ್ಸಿಗೆ ತೀರಾ ಹತ್ತಿರವಾಗಿದ್ದಾಳೆಂದು ಹೋಗೆ, ಬಾರೆ, ತನು, ಅಂತೆಲ್ಲ ಕರೆಯುತ್ತಿದ್ದವನು ಈಗ ಬನ್ನಿ, ಹೋಗಿ ಅಂತ ಹೇಳೋಕೆ ಶುರು ಮಾಡಿದ್ದನು.ತನು ಅಂತ ಪ್ರೀತಿಯಿಂದ ಕರೆಯುತ್ತಿದ್ದವನು ಈಗ ಆವಳ ಹೆಸರನ್ನೇ ಮರೆತವನಂತೆ ಮಾತಾಡುತ್ತಿದ್ದ.ಈ ವರ್ತನೆ ತನು ಗೆ ಸ್ವಲ್ಪ ಕಿರಿಕಿರಿ ಅನ್ನಿಸುತ್ತಿತ್ತು.ಇವನು ಯಾಕೆ ನನ್ನ ಜೊತೆ ಹೀಗೆ ವರ್ತಿಸುತ್ತಿದ್ದಾನೆ.ಈಗ ನಾನು ಅವನ ಮನಸ್ಸಿಗೆ ಹತ್ತಿರವಾಗಿಲ್ವಾ ಅಥವಾ ಮನಸ್ಸಿನಲ್ಲೇ ಇಲ್ವಾ ಅಂತ ಅನ್ನಿಸತೊಡಗಿತ್ತು.ಇವನ ಮನೆಯಲ್ಲಿ ಇವನಿಗೆ ಏನಾದ್ರು ತೊಂದರೆಯಾಗಿದ್ಯಾ? ಅಥವಾ ನನ್ನ ಮೇಲೆ ಕೋಪಾನಾ? ಛೇ ಛೇ ಅವನು ನನ್ನ ಎಷ್ಟು ಪ್ರೀತಿ ಮಾಡ್ತಾನೆ ಅಂದ್ರೆ ನನ್ನ ಮೇಲೆ ಕೋಪ ಇದ್ರೂ 2 ದಿನ ಅಷ್ಟೆ,ಆದ್ರೂ ಒಂದುವೇಳೆ ಕೋಪ ಇದ್ರೂ ಕೋಪ ಬರೋ ಹಾಗೆ ನಾನು ಯಾವ ತಪ್ಪನ್ನೂ ಮಾಡಿಲ್ಲ ಅಲ್ವಾ,ಇಷ್ಟು ದಿನ ಆದ್ರೂ ಇವನು ಹೀಗೆ ವರ್ತಿಸುತ್ತಿದ್ದಾನೆ ಅಂದ್ರೆ ಕಾರಣವೇನು ಅಂತ ಚಟಪಡಿಸತೊಡಗಿದಳು.ಸಂಜು ನ ಕೇಳಿದರೆ ಕಾರಣ ಗೊತ್ತಾಗುತ್ತೆ. ಹೌದು ನಾಳೆ ಸಂಜುಗೆ call ಮಾಡಿ ಕೇಳ್ತೀನಿ ಅಂದುಕೊಂಡಳು. ಸಂಜು ಯಾಕೆ ಈ ರೀತಿ ಮಾಡ್ತಾ ಇದ್ದೀಯ ಅಂತ ಕೇಳಿದ್ದಕ್ಕೆ ಅವನು ಹೇಳಿದ ಹೌದು ರೀ, ಇನ್ಮೇಲೆ ಹೀಗೇನೆ, ಹಿಂದೆ ನಾನು ನಿಮ್ಮ ಜೊತೆ ಇದ್ದ ಹಾಗೆ ಇನ್ಮೇಲೆ ಇರೋಕ್ಕಾಗಲ್ಲ ಅಂದನು. ಯಾಕೆ ಅಂದಳು. ಇನ್ಮೇಲೆ ಈ ಪ್ರೀತಿ ಪ್ರೇಮ ಎಲ್ಲಾ ಯಾವ್ದೂ ಬೇಡ ಅಂದನು. ತನುಗೆ ಸಿಡಿಲು ಬಡಿದಂತೆ ಆಯ್ತು. ಅವಳು ಬೇಡ ಸಂಜು ನಾನು ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೀನಿ ನನ್ನ ಜೀವಮಾನ ವೆಲ್ಲ ಜೊತೆ ಇರ್ತೀನಿ ಅಂತ ಹೇಳಿ ನಡುನೀರಲ್ಲಿ ನನ್ನ ಕೈ ಬಿಡಬೇಡಿ ಅಂತ ಪರಿ ಪರಿಯಾಗಿ ಬೇಡಿಕೊಂಡಳು ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳತೊಡಗಿದಳು.ಆದರೆ ಇದ್ಯಾವುದರಿಂದಲೂ ಸಂಜುನ ಮನಸ್ಸು ಕರಗಲಿಲ್ಲ........

N....R....

ಮುಂದುವರಿಯುತ್ತದೆ.....

Comments

Submitted by kavinagaraj Mon, 06/01/2015 - 21:20

7 ಮತ್ತು 8ರ ಕಂತುಗಳನ್ನು ಓದಿದೆ. ಮುಂದೇನು ಎಂಬ ಕುತೂಹಲಕ್ಕೆ ಮುಂದಿನ ಕಂತಿನಲ್ಲಿ ತೆರೆ ಬೀಳಬಹುದು. ಮುಂದುವರೆಸಿರಿ.