ಕನಸಿನಾ,,,, ಒಳಗೆ

ಕನಸಿನಾ,,,, ಒಳಗೆ

ನಿದ್ದೆಗಣ್ಣಿನ ಕನಸು ಹಾಗು ಕಪ್ಪು ರಾತ್ರಿ
ಒಪ್ಪಂದ ಮಾಡಿಕೊಂಡಿವೆ.
ಬೆಳಕು ಬಿದ್ದರೆ ರಾತ್ರಿ ಮಾಯ
ರಾತ್ರಿಯ ಕನಸೂ ಮಾಯ.

ಹೀಗೇಕೆ? ಕತ್ತಲಿನ ಗರ್ಭದಲಿ, 
ಕನಸಿನ ನೆನಹಿನಲಿ ಅಡಗಿದ 
ಸತ್ಯಗಳನು ತೆರೆದಿಟ್ಟರೆ, ಅಬ್ಬಾ 
ಎನೇನು ಅನಾಹುತ ಆಗಬಹುದು ?

ಕಣ್ಣಂಚಲ್ಲೆ ಕಳೆದು ಹೋಗುವ ಆ 
ಕನಸುಗಳು ಎಷ್ಟೊಂದು ಮಧುರ 
ತಲೆದಿಂಬಿನ ಸಂದಿಯಲಿ ಮುಖ ಮುಚ್ಚಿ
ಕತ್ತಲಿನಿಂದಾ ಹೊರಬರಲು ಇಷ್ಟಪಡದ,!!
ಕನಸುಗಳ ಕೌತುಕ ಅದೇ 

ಎಲ್ಲೋ ಕಂಡ ಹೊಸ ಬೈಕಿನ ಬಣ್ಣ
ಇನ್ನೆಲ್ಲೋ ಕಂಡ ಕೆಂಪು ಚೂಡಿದಾರದ ಹುಡುಗಿ
ಕನಸಿನಲ್ಲಿ ಒಟ್ಟಿಗೆ ಬಂದು ಕನ್ನೆ ಚುಚ್ಚಿ 
ಬೆಳಗಾಗುವಷ್ಟರಲ್ಲಿ ಮಾಯವಾಗುತ್ತಾರೆ 
ವ್ಹಾ ವ್ಹಾ,,, ಎಂಥಹ ಕನಸುಗಳು

       ಅಂದೊಮ್ಮೆ  ಶಿವಮೊಗ್ಗದ ಬಸ್ ನಿಲ್ದಾಣದಲಿ ಬಸ್ ಹತ್ತಿದಾಗ, ಮಲ್ಲಿಗೆ ಮುಡಿದ ಹುಡುಗಿ ಕರೆದು, ಪಕ್ಕದ ಸೀಟು ಬಿಟ್ಟುಕೊಟ್ಟಳು, ಆಗ ಡವಗುಟ್ಟಿದ ಎದೆಗೆ ಆಕೆಯ ನಗೆಯೇ ಔಷದಿಯಾಯ್ತು. ನನ್ನದು ಬರಿ ಮುಗುಳ್ನಗು ಮಾತಿಲ್ಲ ಕಥೆ ಇಲ್ಲ ಆಕೆ ಏನೇನೋ ಹೇಳುತ್ತಿದ್ದಾಳೆ, ಮಲ್ಲಿಗೆ ಪರಿಮಳ ಬಿಟ್ಟು ಇನ್ನೇನೂ ಕಾಣದು ನನಗೆ ಮತ್ತೆ ಆಕೆಯ ಮುಂಗುರುಳು ಜಾರುತ್ತಿತ್ತು ಕೆನ್ನೆಯ ಮೇಲಿಂದ ಕಿವಿಯ ಕೆಳಗಿನ ವರೆಗೂ,,,,
     
          ನಾನೂ ಜಾರಿದ್ದೆ, ಆಕೆಯ ಮಾತಿನ ಮೋಡಿಒಳಗೆ. ಜೊತೆಗೆ ಆಗಾಗ ಮೇಲೆದ್ದು ಬೀಳುವ ಹುಬ್ಬುಗಳು, ಆಕೆ ಯಾರು? ಮನೆ ಎಲ್ಲಿ? ಏನು ತಿಳಿದಿಲ್ಲ ಆದರೆ ನನಗೆ, ಆ ಪ್ರಶ್ನೆಗಳು ಏಳಲೇ ಇಲ್ಲ, ಅವಳ ಅಂದ ಕಂಡಮೇಲೂ ಪ್ರಶ್ನೆ ಹೇಗೆ ಹುಟ್ಟುತ್ತದೆ?  ನಾನಂತೂ ವಿಸ್ಮಿತನಾಗಿದ್ದೆ, ಅದೆಷ್ಟು ಊರುಗಳು ದಾಟಿ ಹೊದವೋ, ಅದೆಷ್ಟು ಜನ ಹತ್ತಿದರೋ, ಇಳಿದರೋ, ಒಂದು ಗೊತ್ತಿಲ್ಲ ನನಗೆ, ಅವಳ ಮುಖ ಬಿಟ್ಟು ಉಳಿದದ್ದೆಲ್ಲ ಬ್ಲರ್ ಬ್ಲರ್ (ಮಬ್ಬು ಮಬ್ಬು). ಮುಗಿಬಿದ್ದ ನನ್ನ ಮನದ ಗೊಂದಲ ಹೇಳಲಿ ಹೇಗೆ ಅಕೆಗೆ ? ಮೈಮರೆತು ಹಾಗೆ ನನ್ನ ಮನೆಯವರೆಗೂ ಕರೆದೊಯ್ಯಲೇ ಅಪ್ಪನ ಎದುರಿಗೆ ದೈರ್ಯದಿಂದಾ ನಿಲ್ಲಲು!!! ತಯಾರಾಗುತ್ತಿದ್ದೆ,,,,

          ಕೈ ಹಿಡಿದು ಎಳೆದು ಕರೆದು ಹೋಗಬೇಕು ಅಷ್ಟರಲ್ಲಿಯೇ ಅಪ್ಪನ ಜೋರು ದ್ವನಿ,,,,"ಸೂರ್ಯ ನೆತ್ತಿಗೆ ಬಂದ್ರು ಇನ್ನೂ ಮಲಗಿದ್ದೀಯ ಗಡವ",,,,,, ಅಬ್ಬಾ ವಾಸ್ತವ ಎಷ್ಟು ಕಟು,,,,

ಪ್ರತಿ ಬಾರಿಯೂ ಶಿವಮೊಗ್ಗ ಹೋದಾಗ ಕನಸಿನ ಕನ್ಯೆಯದೇ ನೆನಪು,,,,

Comments