ಕನಸು

ಕನಸು

ಕವನ

                                  ಕನಸು

           ಮಧುಮಗಳಾದೆನೆಂಬ ಸಂತಸಹೊತ್ತು..

           ರಂಗು ರಂಗಿನ ಉಡುಗೆ ತೊಟ್ಟು..

          ಬಂದೆ....

          ಮಿಂಚು ಮಿಣುಕುಗಳಿಂದಲಂಕರಿಸಿದ  

          ಚಪ್ಪರದರಮನೆಗೆ.

          ನವವಿಧದ ಶಾಸ್ತ್ರ ಮಾಡಿಸಿ,

          ಕೈಗೆ ಕೈ ಕೂಡಿಸಿ,

          ಮಾಂಗಲ್ಯಧಾರಣೆ ಮಾಡಿಸಿ,

          ಸಪ್ತಪದಿ ತುಳಿಸಿ,

          ಆರತಿ ಎತ್ತಿ, ಅಕ್ಷತೆ ಹಾಕಿ,

          ನೂರ್ಕಾಲ ಬಾಳಿರೆಂದು

          ಹಾರೈಸಿದರು ಹಿರಿಯರು.

          ಮಧುರ ಭಾವಗಳೊಡನೆ

          ಆಸೆ ಪಲ್ಲಕ್ಕಿ ಮೇಲೆ

          ನನ್ನವನ ಜೊತೆಗೂಡಿ

          ನಡೆದೆ ನಾ ಅವನರಮನೆಗೆ.

          ಮೊದಲ ರಾತ್ರಿಗೆಂದು

          ಸಿದ್ದಗೊಳಿಸಿದರೆನ್ನ, ಆ....

          ಸವಿನೆನಪಿನಲ್ಲಿ  ಮೈ ಪುಳಕಗೊಂಡು,

          ರೋಮಾಂಚನವಾಗಿ............

          ಅಮ್ಮಾ............ಎಂದು ಚೀರಿ

          ಕುಸಿದೆ.

          ದಡಬಡಿಸಿ ಎದ್ದು ಕುಳಿತವಳಿಗನ್ನಿಸಿತ್ತು

          ನಾ ಕಂಡದ್ದೆಲ್ಲವೂ..............

          ಬರೀ  ಕನಸೆಂದು.

 

   

Comments