ಕಲ್ಲಾದ ಅಹಲ್ಯಾ ಸಿನಿಮಾ ಆದಳು...!

ಕಲ್ಲಾದ ಅಹಲ್ಯಾ ಸಿನಿಮಾ ಆದಳು...!

ಅಹಲ್ಯಾಳ ಹೊಸ ಸಂಚಲನ..! ರಾಮಾಯಣದ ಅಹಲ್ಯಾ ಕಥೆ..!ಈ ಯುಗದ ಚಿತ್ರವಾಗಿ ಹೊರ ಬಂದಿದೆ.ಪೌರಾಣಿಕ ಕಥೆಗೆ ಹೊಸದೊಂದು ಸ್ಪರ್ಶ.ಸೌಮಿತ್ರ ಚಟರ್ಜಿಗಾಗಿ ನಿರ್ಮಾಣವಾದ ಚಿತ್ರ.ಸುಜೊಯ್ ಘೋಷ್ ನಿರ್ದೇಶನದ ಸಿನಿಮಾ.ಮಾಡ್ರನ್ ಅಹಲ್ಯಾ ಪಾತ್ರದಲ್ಲಿ ರಾಧಿಕಾ ಆಪ್ಟೆ. ಅಹಲ್ಯಾ ಕೇವಲ 14 ನಿಮಿಷದ ಕಿರುಚಿತ್ರ .Youtube ನಲ್ಲಿ ಅಹಲ್ಯಾಳ ಹೊಸ ಸಂಚಲನ..! Youtube ನಲ್ಲಿ ಅಹಲ್ಯಾ ಅಂತ ಟೈಪಟ್ ಮಾಡಿದರೆ ಸಾಕು. ಇಡೀ ಅಹಲ್ಯಾ ಚಿತ್ರ ಸಿಕ್ಕು ಬಿಡುತ್ತದೆ..
----
ಪುಟ್ಟ ಕವಿತೆ. ಸಣ್ಣ ಕಥೆ. ಪುಟ್ಟ ಸಿನಿಮಾ. ಇವು ತುಂಬಾ ಪರಿಣಾಮ ಬೀರುತ್ತವೆ. ನೋಡುಗರಿಗೆ, ಕೇಳುಗರಿಗೆ ಚಿಂತನೆಗೆ ಹಚ್ಚುತ್ತವೆ. ಕಹಾನಿ ಚಿತ್ರದ ನಿರ್ದೇಶಕ ಸುಜೋಯ್ ಘೋಷ್ ಈಗ ಅಂತಹ ಒಂದು ಚಿಂತನೆಗೆ ಮತ್ತು ಚರ್ಚೆ ಹಚ್ಚ ಬಲ್ಲ ಸಿನಿಮಾವೊಂದನ್ನ ಮಾಡಿದ್ದಾರೆ. ಆದರೆ, ಇದು ಅತಿ ದೊಡ್ಡ ಸಿನಿಮಾ ಅಲ್ಲ. 14 ನಿಮಿಷದ ಒಂದು ಪುಟ್ಟ ಫಿಲ್ಮ. ಹೆಸರು ಅಹಲ್ಯಾ. ಮಾಡ್ರನ್ ಅಹಲ್ಯಾ ಅಂದರೂ ತಪ್ಪಿಲ್ಲ...
-----
ಅಹಲ್ಯಾ....! ಇದು ಸದ್ಯದ ಸಂಚಲನ. ಯುಟ್ಯೂಬ್​ ಲೋಕದಲ್ಲಿ ಈ ಮಾಡ್ರನ್ ಅಹಲ್ಯಾಳದ್ದೇ ಚರ್ಚೆ. ಮತ್ತು ಎಲ್ಲರ ಭಾಯಲ್ಲೂ ಈಕೆಯದ್ದೆ ಮಾತು-ಕಥೆ. ಆದರೆ, ಒಮ್ಮೆ ಈಕೆಯ ಆ ಹೊಸ ಸಿನಿಮಾ ನೋಡಿದರೆ, ತಕ್ಷಣಕ್ಕೆ ಕಂಡಿತ ಅರ್ಥವಾಗೋದಿಲ್ಲ. ಕಾರಣ, ಅಹಲ್ಯಾ ಸಿನಿಮಾ ಕಥೆಯಲ್ಲಿ ರಾಮಾಯಣದ ಅಹಲ್ಯಾಳ ಕಥೆ ಬ್ಲೆಂಡ್ ಆಗಿದೆ. ಅದಾ-ಇದಾ ಅನ್ನೋ ಹೊತ್ತಿಗೆ 14 ನಿಮಿಷ 10 ಸಕೆಂಡ್​ ನ ಈ ಸಿನಿಮಾನೇ ಪೂರ್ಣವಾಗುತ್ತದೆ. ಕೊನೆಗೆ ಆಗಿದ್ದೇನೂ...? ಆಗೋದೇನೂ..? ಎಂದು ಒಮ್ಮೆ ಯೋಚನೆಗೆ ಹಚ್ಚುತ್ತದೆ..

ಪುಟ್ಟ ಚಿತ್ರಗಳ ಪರಿಣಾಮವೇ ಹಾಗೆ. ಒಮ್ಮೆ ಸೆಳೆದು ಬಿಡುತ್ತವೆ. ಚಿಂತನೆಗೆ ಹಚ್ಚಿ ಕಾಡುತ್ತವೆ.ಹೆಚ್ಚು ಜನ ಆ ಚಿತ್ರ ವೀಕ್ಷಿಸದೇ ಇದ್ದರೂ, ಒಬ್ಬರಿಂದ ಮತ್ತೊಬ್ಬರಿಗೆ ಮಾತಿನಲ್ಲಿಯೇ ಸಾಗಿ ಬಂದು,ಎಲ್ಲರನ್ನ ಗಮನ ಸೆಳೆದು ಬಿಡುತ್ತದೆ. ಈ ಮಾಡ್ರನ್ ಅಹಲ್ಯಾ ಸಿನಿಮಾ ಕೂಡ ಚರ್ಚೆಗೆ ಬಂದ್ದು ಹಂಗೇನೆ. ಅಮಿತಾಭ್ ಬಚ್ಚನ್ ಕೂಡ ಈ ಸಿನಿಮಾ ನೋಡಿ, ‘ಬ್ರೀಲಿಯೆಂಟ್’ ಅಂತ ಟ್ವಿಟರ್​ ಅಕೌಂಟ್​ ನಲ್ಲಿ ಬರೆದುಕೊಂಡಿದ್ದಾರೆ..

ಅಹಲ್ಯಾ ಚಿತ್ರದ ಕಥೆ ಏನೂ..? ಹೇಳೋದೋ ಕಷ್ಟ. ನೋಡಿ ಅನುಭವಿಸಿದಾಗಲೇ, ಇದು ಹಿಂಗಿಂಗೆ ಅಂತ ನಮ್ಮ ಕಲ್ಪನೆಗೆ ನಿಲುಕಿದಂತೆ ಅರ್ಥೈಸಿಕೊಳ್ಳಬಹುದು. ಅದರಲ್ಲೂ ಇದು ಬೆಂಗಾಲಿ ಭಾಷೆಯಲ್ಲಿದೆ. ನಿರ್ದೇಶಕ ಸುಜೋಯ್ ಘೋಷ್ ಎಲ್ಲರಿಗೂ ಅರ್ಥವಾಗಲಿ ಎಂದೇ, ಇಂಗ್ಲೀಷ್ ಸಬ್​ ಟೈಟಲ್​ ಗಳನನ್ನೂ ಹಾಕಿದಿದ್ದಾರೆ..

ಅಹಲ್ಯಾ ರಾಮಾಯಣದಲ್ಲಿ ಬರೋ ಪಾತ್ರ. ಗೌತಮ ಮಹರ್ಷಿಯ ಪತ್ನಿ ಈ ಅಹಲ್ಯಾ. ದೇವೇಂದ್ರನಿಗೆ ಮಾರು ಹೋಗೋ ಅಹಲ್ಯಾ, ದಾಂಪತ್ಯ ದೋಹಕ್ಕಾಗಿ ಪತಿಯಿಂದಲೇ ಶಾಪಗ್ರಸ್ಥಳಾಗಿ ಕಲ್ಲಾಗುತ್ತಾಳೆ. ವಿಷ್ಣು ರೂಪ ರಾಮ ಬಂದು, ಕಲ್ಲಾದ ಈಕೆಯನ್ನ ಸ್ಪರ್ಶಿಸಿ, ಶಾಪದಿಂದ ಮುಕ್ತಗೊಳಿಸುತ್ತಾನೆ. ಆದರೆ, ಸುಜೋಯ್ ಘೋಷ್ (Sujoy Ghosh)ನಿರ್ದೇಶನದ ಅಹಲ್ಯಾ ಚಿತ್ರದಲ್ಲಿ ಅಹಲ್ಯಾ ಬೇರೆ ರೂಪ ಪಡೆದಿದ್ದಾಳೆ.

ಸುಜೋಯ್ ಘೋಷ್, ರಾಮಾಯಣದ ಅಹ್ಯಾಳ ಕಥೆಗೆ ಬೇರೆ ರೂಪ ಕೊಟ್ಟಿದ್ದಾರೆ. ತಮ್ಮದೇ ಆದ ಒಂದು ಕಾಲ್ಪನಿಕ ಆರಂಭ ಮತ್ತು ಅಂತ್ಯವನ್ನ ಕಟ್ಟಿಕೊಟ್ಟಿದ್ದಾರೆ. ಅದೇ ಈ ಚಿತ್ರದ ಚಿತ್ರ ಕಥೆಯ ಶಕ್ತಿ ಮತ್ತು ಸೆಳೆತ..

ಚಿತ್ರದಲ್ಲಿ ಬರೋದು ಮೂರೇ ಪಾತ್ರ. ಅಹಲ್ಯಾ ಮತ್ತು ಆಕೆಯ ವಯಸ್ಸಾದ ಗಂಡ ಹಾಗೂ ಪೊಲೀಸ್ ಆಫೀಸರ್. ಈ ಪಾತ್ರಗಳನ್ನ ಬಿಟ್ಟು ಕಥೆ ಅತ್ತಿತ್ತ ಸಾಗೋದಿಲ್ಲ. ಆದರೆ, ಮಾತು ರಾಮಾಯಣದವರೆಗೂ ಹೋಗಿ ಬರುತ್ತವೆ. ಮ್ಯಾಜಿಕ್ ಕಲ್ಲಿನ ವಿಚಾರಕ್ಕೂ ಬಂದು ನಿಲ್ಲುತ್ತವೆ. ಅದನ್ನ ಕೈಯಲ್ಲಿ ಹಿಡಿದು, ಮನದಲ್ಲಿ ಏನೂ ನೆನೆಯುತ್ತೇವೋ ಆ ವ್ಯಕ್ತಿ, ಅದೇ ಆಗುತ್ತಾನೆಂಬ ನಂಬಲಾಗದ ಸಂಗತಿನೂ ಪ್ರಸ್ತಾಪ ಆಗುತ್ತದೆ. ಅದನ್ನ ಪರಿಕ್ಷಿಸೋಕೆ ಮುಂದಾದ ಪೋಲಿಸ್​ ಆಫೀಸರ್, ಏನ್ ಆಗ್ತಾನೆ ಅನ್ನೋ ಕಥೆ ಮತ್ತು ಏನಾದಾ ಅನ್ನೋದೇ ಇಂಟ್ರಸ್ಟಿಂಗ್​​ ಚಿತ್ರಣ...

ನಿರ್ದೇಶಕ ಸುಜೋಯ್ ಘೋಷ್ ಈ ಹಿರಿಯ ನಟರಿಗಾಗಿಯೇ ಈ ಸಿನಿಮಾ ಮಾಡಿದ್ದಾರೆ. 80 ರ ವಯಸ್ಸಿನಲ್ಲೂ ಸೌಮಿತ್ರ ಚಟರ್ಜಿ, ಅಹಲ್ಯಾ ಚಿತ್ರದ ಹೀರೋ ಆಗಿ ಮರೆಯುತ್ತಾರೆ. ತಮ್ಮ ವಿಶಿಷ್ಠ ಪಾತ್ರದಿಂದಲೇ ಎಲ್ಲರ ಮನದಲ್ಲಿಯೂ ಉಳಿಯುತ್ತಾರೆ. ಅಹಲ್ಯಾ ಪಾತ್ರಧಾರಿ ರಾಧಿಕಾ ಆಪ್ಟೆ, ತನ್ನ ಮೋಹಕ ಸೆಳೆತದಿಂದಲೇ ಕಾಡುತ್ತಾಳೆ. ನೋಡುಗರ ಮನದಲ್ಲಿ, ‘ಯಾರಿವಳು..?’ ಅನ್ನೋ ಪ್ರಶ್ನೆ ಉಳಿಸಿ ಹೋಗುತ್ತಾಳೆ. ಇದು ಕಿರು ಚಿತ್ರಕ್ಕೆ ಇರೋ ಅತ್ಯದ್ಬುತ ತಾಕತ್ತು...

-ರೇವನ್

Comments