ಕ್ಯಾರೆಟ್ ಕಸ್ಟರ್ಡ್ ಶೇಕ್

ಕ್ಯಾರೆಟ್ ಕಸ್ಟರ್ಡ್ ಶೇಕ್

ಬೇಕಿರುವ ಸಾಮಗ್ರಿ

ಬೇಯಿಸಿದ ಕ್ಯಾರೆಟ್ ಹೋಳುಗಳು- ೧ ಸಣ್ಣ ಕಪ್
ಹಾಲು- ೨ ದೊಡ್ಡ ಲೋಟ
ನೆನೆಸಿದ ಬಾದಾಮಿ- ೪
ಸಕ್ಕರ- ೬ ಚಮಚ
ಕಸ್ಟರ್ಡ್ ಪೌಡರ್- ೨ ಚಮಚ

ತಯಾರಿಸುವ ವಿಧಾನ

ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ.
ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರಿಸಿ ಕೈಯಾಡಿಸಿ ಮತ್ತೆ ಕುದಿಸಿ, ಆರಲು ಬಿಡಿ. ತಣ್ಣಗಾದ ಮೇಲೆ, ಇದರ ಜತೆಯಲ್ಲಿ ರುಬ್ಬಿದ ಕ್ಯಾರೆಟ್,ಉಳಿದ ಹಾಲು ಎಲ್ಲವನ್ನು ಮಿಕ್ಸಿಗೆ ಹಾಕಿ ತಿರುವಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.
ಕ್ಯಾರೆಟ್ ತಿನ್ನದ ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ.

Comments

Submitted by ಗಣೇಶ Tue, 04/23/2013 - 00:19

ಪ್ರೇಮಾಶ್ರೀ ಅವರೆ, ನಾನು ಶೋಭಾ ಅಥವಾ ಮಮತಾರವರ ಹೊಸರುಚಿ ಅಂದುಕೊಂಡೆ. ಚೆನ್ನಾಗಿರಲೇ ಬೇಕು. ನಾಳೆ ಮಾಡಿ ನೋಡುವೆ.