ಗುತ್ತಿಗೆ ನೌಕರರು

ಗುತ್ತಿಗೆ ನೌಕರರು

ದಿನ ಬೆಳಿಗ್ಗೆ  ಆದರೆ  ದಿನಪ್ರತಿಕೆಗಳಲ್ಲಿ ನೀವು ಓದಿದ್ದಿರಿ, ನ್ಯೂಸ ಚಾನಲಗಳಲ್ಲಿ ನೋಡಿದಿರಿ ಗುತ್ತಿಗೆ  ನೌಕರರ ಮುಷ್ಕರಗಳ ಬಗ್ಗೆ . ಅವರು ತಮ್ಮಗೆ ಆಗುತ್ತಿರುವ‌ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುತಾರೆ. ಯಾಕೆಂದರೆ ನಮ್ಮ  ಸರಕಾರವು ಗುತ್ತಿಗೆ  ನೌಕರರಿಗೆ  ತುಂಬ ಅನ್ಯಾಯ ಮಾಡುತ್ತಿದೆ.

ನಮ್ಮ ಸಂವಿಧಾನದ ಪ್ರಕಾರ ಎಲ್ಲಾ ನೌಕರರು  ಒಂದೇ  ಅಲ್ಲ ಆದರೂ  ನಮ್ಮ ಸರಕಾರಗಳು  ಯಾಕೆ  ಬೇಧ ಭಾವ ಮಾಡುತ್ತವೆ. ಖಾಯಂ  ನೌಕರರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಗುತ್ತಿಗೆ  ನೌಕರರಿಗೆ  ನೀಡೋದಿಲ್ಲ. ಖಾಯಂ  ನೌಕರರಿಗೆ  ಒಂದು ಸಂಬಳ  ನೀಡುತ್ತದೆ ಗುತ್ತಿಗೆ  ನೌಕರರಿಗೆ ಒಂದು ಆದರೆ  ಇಬ್ಬರೂ  ಒಂದೇ ಕೆಲಸ ಮಾಡುತಾರೆ,ಒಂದೇ ವಿದ್ಯಾಭ್ಯಾಸ ಮಾಡಿರುತ್ತಾರೆ. ಖಾಯಂ ನೌಕರರಿಗೆ  ಪ್ರತಿ  ಆರು  ತಿಂಗಳಿಗೆ   D. A ಕೊಡುತ್ತಾರೆ, ಪ್ರತಿ  ವಷ೯ಕ್ಕೆ ಒಂದು Increment  ಕೊಡುತ್ತಾರೆ, HRA  ಕೊಡುತ್ತಾರೆ ಪ್ರತಿ ತಿಂಗಳು, EL,Medical leave ಕೋಡುತ್ತಾರೆ , ಆದರೆ  ಗುತ್ತಿಗೆ  ನೌಕರರಿಗೆ  ಯಾವದು  ನಿಡೋದಿಲ್ಲ. ಯಾಕೆ ಅವರು ಈ ದೇಶದ ಪ್ರಜೆ ಅಲ್ಲ ಏನು  . ಖಾಯಂ  ನೌಕರರಿಗೆ  ಇರುವ ಉದೋಗ್ಯ ಭದ್ರತೆ ಗುತ್ತಿಗೆ  ನೌಕರರಿಗೆ  ಇಲ್ಲ.  ನನ್ನ ಸ್ನೇಹಿತ ಗುತ್ತಿಗೆ  ನೌಕರನಾಗಿ ಕನಾ೯ಟಕ ಸರಕಾರದ ಒಂದು  ಯೋಜನೆಯಲ್ಲಿ  ಸುಮಾರು  8 ವಷ೯ದಿಂದ  ಕೆಲಸ ಮಾಡುತ್ತಿದ‌ ಒಂದು ದಿನ  ಅವನು  ಕೆಲಸ ಮಾಡುತ್ತಿದ‌ ಯೋಜನೆ  ಮುಗಿತ್ತು. ನಮ್ಮ ಸರಕಾರ ಅವರನ್ನು  ಕೆಲಸದಿಂದ ತೆಗೆದಹಾಕಿತ್ತು . ಆಗ‌ ಅವನಿಗೆ  ಸುಮಾರು 40 ವಷ೯ ಆಗಿತ್ತು ಅಷ್ಟೊತ್ತಿಗೆ  ಅವನ ವಯಸ್ಸು  ಬೇರೆ  ಉದೋಗ್ಯಕ್ಕೆ ಸೆರೋ ಹಾಗೆ  ಇರಲಿಲ್ಲ.  ಅವನ ಸಂಬಳ ಮೇಲೆ  ಅವಲಂಬಿಸಿದ ಕುಟುಂಬ ಬೀದಿಗೆ ಬಂತು ಇದಕ್ಕೆ  ಯಾರು  ಕಾರಣ ನಮ್ಮ ಸರಕಾರವು  ಅಥವಾ  ಅವನು ಸರಕಾರಕ್ಕೆ  ನೀಡಿರುವ ಸೇವೆಯೋ. ಯಾಕೆ  ನಮ್ಮ ಸರಕಾರ ಗುತ್ತಿಗೆ  ನೌಕರರ ಜೊತೆ ಮಲತಾಯಿ ಧೋರಣೆ  ಅನುಸರಿಸುತ್ತಾಯಿದೆ.ಗುತ್ತಿಗೆ ನೌಕರರ ಬಗ್ಗೆ  ಯಾವ ಜನ ಪ್ರತಿನಿಧಿಯು ಒಂದು  ಮಾತನಾಡುತಿಲ್ಲ ವಿಧಾನಸಭೆಯಲ್ಲಿ, ರಾಜ್ಯಸಭೆಯಲ್ಲಿ,  ಲೋಕಸಭೆಯಲ್ಲಿ. ಇದು ನಮ್ಮ ದೇಶದ ದೌರಭಾಗ್ಯ ಅವರು  ತಮ್ಮ ತಮ್ಮ ಮೇಲೆ  ಕೇಸರಾಜಿಸವಲ್ಲಿ ಕಾಲ ಕಳಿಯುತ್ತಿದ್ದಾರೆ.ಗುತ್ತಿಗೆ  ನೌಕರರು  ತಮ್ಮ  ಸಂಬಳ ಹೆಚ್ಚು ಮಾಡಬೇಕಾದರೆ ಅವರು  ಹೋರಾಟ ಮಾಡಬೇಕು.  ನಮ್ಮಗೆ ನಾಯ್ಯ ಒದಗಿಸಬೆಕಾದ ದೇಶದ  ನ್ಯಾಯಾಲಯಗಳು ಇದರ‌  ಬಗ್ಗೆ  ತೆಲೆಕೆಡಿಸಿಕೋಳುತ್ತಿಲ‌.ನಮ್ಮ ಸರಕಾರಗಳು  ಯಾಕೆ  ಹೊಸ ಯೋಜನೆಗಳನ್ನು  ಘೋಷಿಸುತ್ತದೆ,ಆ ಯೋಜನೆಗಳನ್ನು ಅನುಷ್ಟಾನ ಘೋಳಿಸಲು ಗುತ್ತಿಗೆ  ನೌಕರರನ್ನು  ನೇಮಕಾತಿ  ಮಾಡಿಕೊಳುತ್ತದೆ.  ಸುಮಾರು  ವಷ೯ಗಳು ಆದ ಮೇಲೆ  ಆ ಯೋಜನೆಯನ್ನು ಯಾವುದೋ  ಒಂದು ಕಾರಣ ಹೇಳಿ  ರದ್ದು ಮಾಡುತ್ತದೆ. ಆ ಯೋಜನೆಯಲ್ಲಿ ಕೆಲಸ ಮಾಡುತ್ತಿದ‌ ಗುತ್ತಿಗೆ  ನೌಕರರ ಗತಿ ಏನು.ಅವರನ್ನು  ಕೆಲಸದಿಂದ ತೆಗೆದು  ಹಾಕುತ್ತದೆ.ನನ್ನ ಸ್ನೇಹಿತನ್ನು  ನಮ್ಮ‌  ಸರಕಾರದ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಲ್ಲಿ  ಗುತ್ತಿಗೆ  ನೌಕರನಾಗಿ ಕೆಲಸ ಮಾಡುತ್ತಿದ‌ .ಒಂದು ದಿನ ಅವನು ರಸ್ತೆ  ಅಪಘಾತದಲ್ಲಿ ಮೃತಪಟ್ಟ. ಆದರೆ ನಮ್ಮ ಸರಕಾರ ಅವನ ಕುಟಂಬಕ್ಕೆ ಯಾವ ರೀತಿಯ ಸಹಾಯ‌ ಮಾಡಲ್ಲಿಲ,ಧನಸಹಾಯ ಮಾಡಲ್ಲಿಲ. ಆದರೆ  ಅವನು ಖಾಯಂ  ನೌಕರನಾಗಿದರೆ ಅವರ ಕುಟಂಬದ ಒಬ್ಬರಿಗೆ ನಮ್ಮ ಸರಕಾರ ಅನುಕಂಪ ಆಧರಿತ ಉದೋಗ್ಯ ನಿಡುತ್ತಾ ಯಿತ್ತು.ನಮ್ಮ ಜನ ಪ್ರತಿನಿಧಿಗಳು ದಿನ  ಬೆಳ್ಳಿಗೆ  ಆದರೆ ಸಮಾನತೆ ಬಗ್ಗೆ ದೊಡ್ಡ ದೊಡ್ಡ ಭಾಷಣ    ಮಾತನಾಡುತ್ತಾರೆ. ಆದರೆ  ಅವರ ಕಣ್ಣಿಗೆ ಗುತ್ತಿಗೆ  ನೌಕರರು  ಕಾಣಿಸುತ್ತಾಯಿಲ್ಲ.ನಾನು  ಇಷ್ಟೊಂದು  ಹೇಳೋದು In Source ಗುತ್ತಿಗೆ  ನೌಕರರ ಬಗ್ಗೆ . ಇನೊಂದು  ರೀತಿಯ ಗುತ್ತಿಗೆ  ನೌಕರರು ನಮ್ಮ‌ ಸರಕಾರದಲ್ಲಿ ಕೆಲಸ  ಮಾಡುತ್ತಿದಾರೆ. ಅವರನ್ನು Out source ಗುತ್ತಿಗೆ  ನೌಕರರು  ಅಂತ ಕರೆಯುತ್ತಾರೆ.  ಅಂದರೆ  ಅವರು  ಖಾಸಿಗೆ  Agency ಮುಖಾಂತರ ನೇಮಕಾತಿ  ಆಗಿ  ಸರಕಾರದಲ್ಲಿ ಕೆಲಸ ಮಾಡುತ್ತಿರುತಾರೆ..ನಮ್ಮ ಸರಕಾರ ಒಂದೂವೆಲೆ ಒಬ್ಬ Out source  ಗುತ್ತಿಗೆ  ನೌಕರನಿಗೆ  10,000 ರೂಪಾಯಿ ಸಂಬಳವನ್ನು Agency ಗೆ ನಿಡಿದರೆ. ಆ Agency ಅವರು ಅದರಲ್ಲಿ  Service Tax, Agency Commission,  PF, ESI ಏಲ್ಲಾ ಕಟ್ ಮಾಡಿ  ಸುಮಾರು  6500 ರಿಂದ 7000 ರೂಪಾಯಿ ಸಂಬಳ ಕೊಡುತ್ತಾರೆ. ಗುತ್ತಿಗೆ   ನೌಕರರು  ದುಡಿದಿದ್ದ ಸಂಬಳದಲ್ಲಿ ಎಲ್ಲರೂ Commission ತೋಗೊತ್ತಾರೆ.ಇವರ ಪಾಡು Insource ಗುತ್ತಿಗೆ  ನೌಕರರಿಗಿಂತ ಕಿಳು. ನಮ್ಮ‌ ದೇಶದದಲ್ಲಿ ನೂರಾರು ಕಾಮಿ೯ಕ ಸಂಘಟನೆಗಳು ಇದ್ದಾವೆ ಆದರೆ ಯಾರು ಗುತ್ತಿಗೆ  ನೌಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿಲ್ಲ‌. ಅವರು  ಏನು  ಮಾಡುತ್ತಿದಾರೆ  ಆ ದೇವರಿಗೆ  ಗೊತ್ತು. ನಮ್ಮ ಜನ ಪ್ರತಿನಿಧಿಗಳ, ನ್ಯಾಯಾಲಯಗಳ,ಕಾಮಿ೯ಕ ಸಂಘಟನೆಗಳ , ಅಧಿಕಾರಿಗಳ ಕಣ್ಣಿಗೆ  ಕಾಣ್ಣಿಸದ ಲಕ್ಷಾಂತರ ಗುತ್ತಿಗೆ  ನೌಕರರು ಅವರ ಕುಟುಂಬಗಳನ್ನು ಆ ದೇವರೇ  ಕಾಪಾಡಬೇಕು.

Comments

Submitted by kavinagaraj Thu, 05/28/2015 - 12:43

ವ್ಯವಸ್ಥೆಯ ಲೋಪವಿದು. ಸರಿಪಡಿಸಲು ಆಸಕ್ತರು ಪ್ರಾಮಾಣಿಕರಾಗಿ ಪ್ರಯತ್ನಿಸಬೇಕಿದೆ.

Submitted by ypkonline Mon, 06/01/2015 - 16:10

ಗುತ್ತಿಗೆ ನೌಕರರು ನಮ್ಮ ಸರ್ಕಾರೀ ಕೆಲಸದ ಬೆನಎಲ್ಲಬು ನಮ್ಮ ಸರ್ಕಾರೀ ನೌಕರಿ ಗಲ್ಲಿ ನೇಮಕಾತಿ ನಡದು ಎಷ್ಟು ವರ್ಷಗಳು ಕಲಿದದೆ ಎಲ್ಲ ಸ್ಥರಗಳಲು ಗುತಿಗೆ ಆಧಾರದ ಮೇಲೆ ನೇಮಕಾತಿ . ಇದ್ದು ಪಾರದರ್ಶಕ ವ್ಯವಸೆಥೆ ಎಲ್ಲಿ ಬರವು commision ದುಡ್ಡು ಎಲ್ಲ ಸ್ಥರಕು ತಲುಪುತೆ ಅದ್ಹಕೆ ನಮ್ಮ ಸರ್ಕಾರ ಆಗು ಜನ ಪ್ರತಿನಿಧಿಗಳು ಗಾಡ ನೀದ್ಯೆಲ್ಲಿ ಇದರೆ
ನಮ್ಮ ಬನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ೧೦೦೦ ಜನ ಗುತ್ತಿಗೆ ನೌಕರರು ಸುಮಾರು ೨೦ ವರುಷಗಳಿಂದ ದುದ್ದಿಯುಥಿದರೆ ಆವರೆಗೆ ಯವುದೆ ಸೌಲಭ್ಯಗಳು ನೀಡದ ಸರ್ಕಾರ ಕೊಟ್ಟಿ ಗಟ್ಟಲೆ ಹಣ ಮಾಡುತ್ಹಿದೆ