ಜಾಣೆ..

ಜಾಣೆ..

ಈ ಜೀವನವೆ ಹಾಗೆ ಒಂದು ತರ ಪ್ರವಾಸಿ ತಾಣದಂತೆ ಹಲವಾರು ಮಂದಿ ಬಂದು ನೋಡಿ ಸಂತೋಷ ಪಟ್ಟು ಹೋದಂತೆ ಈ ಜೀವನದಲ್ಲಿಯೂ ಹಲವಾರು ಮಂದಿ ಬಂದು ಹೋಗ್ತಾರೆ. ಅದರಲ್ಲಿ ಯಾರು ನಮ್ಮವರು ಎಂದು ತಿಳಿಯುವುದರಲ್ಲಿ ಒಂದಷ್ಟು ಎಡವಟ್ಟು ಮಾಡಿಕೊಂಡು ಜೀವನ ಸರಿ ಇಲ್ಲ ಎಂಬ ಮಾತನ್ನು ಪದೆ ಪದೆ ಹೇಳ್ತಿವಿ. ಇನ್ನು ಕೆಲವರು ಪ್ರವಾಸಕ್ಕೆ ಬಂದವರು ಅಲ್ಲಿಯೇ ಉಳಿದು ಅದರ ಅನ್ವೇಷಣೆಯಲ್ಲಿ ತೊಡಗುವರು ಹಾಗೆ ಜೀವನದಲ್ಲೂ ಕೆಲವರು ಕೊನೆಯವರೆಗೂ ಜೊತೆಯಾಗಿ ಬಿಡ್ತಾರೆ..

ಈ ಜೀವನ ಎಷ್ಟು ವಿಚಿತ್ರ ಅಲ್ವಾ
ಅಂತೆಯೇ ಇವತ್ತು ಅಪರಿಚಿತವಾಗಿ ಪರಿಚಿತವಾಗಿ ಇವತ್ತು ನನ್ನೆದೆಯಲ್ಲಿ ಜಾಣೆಯೆಂಬ ನಾಮಫಲಕ ನೇತುಹಾಕಿಕೊಂಡು ಕುಣಿಯುತ್ತಿರುವ ಆ ಮುದ್ದು ಚಲುವೆ ಬಗ್ಗೆ ಒಂದಿಷ್ಟು ಹೇಳಬೇಕು...

ಅದು ಸುಮಾರು ಏನಲ್ಲ ಮೂರುವರೆ ವರ್ಷದ ದಿನ ನೆನಪುಗಳಷ್ಟೇ ಆಗಷ್ಟೆ ಹತ್ತನೆಯ ತರಗತಿ ಮುಗಿಸಿ ಪಿ.ಯು.ಸಿ ಎಂಬ ಮಾಯಾ ಜಗತ್ತಿಗೆ ಕಾಲಿಟ್ಟ ಸಮಯ ಅದೊಂದು ತಪ್ಪು ನನ್ನ ಜೀವನದಲ್ಲಿ ಇವತ್ತು ಅಷ್ಟು ಬದಲಾವಣೆ ತರುತ್ತೆ ಅಂತ ನನಗೂ ತಿಳಿದಿರಲಿಲ್ಲ..
ಅವತ್ತು ಈ ಸಮಾಜಿಕ ಅಂತಜಾಲದ ಮೂಲಕ ಒಂದು ಪ್ರೀತಿಯೆಂಬ ಪೊಳ್ಳು ಸಂಬಂಧ ನನ್ನನ್ನು ಸೆಳೆದಿತ್ತು. ಆರ್ಕಷಣೆ ಅಂತಾರಲ್ವಾ ಅದು
ಅವತ್ತು ಜೀವನದಲ್ಲಿ ಏನಾಗಬೇಕು ಎಂದು ಯೋಚಿನೆ ಮಾಡಿಯೇ ಇರಲಿಲ್ಲ ಕಾರಣ ಹಲವು.

ಪ್ರೀತಿಯಲ್ಲಿ ಬೀಳಲು ಕಾರಣ ಅದು
ನನಗೆ ಪ್ರೀತಿ ಮಮತೆ ಇವೆರಡರ ಬಗ್ಗೆ ಮಾಹಿತಿ ಇರಲಿಲ್ಲ ಯಾಕೆಂದರೆ ನಾನು ಸಣ್ಣವನಿಂದಲು ಈ ಎರಡು ಪದಗಳನ್ನು ಕಂಡೆ ಇರಲಿಲ್ಲ
ತಾಯಿ ಪ್ರೀತಿ, ತಂದೆಯ ಪ್ರೀತಿ ಬಂಧುಗಳದವರ ಪ್ರೀತಿ, ಅದೆಲ್ಲ ಹಾಳಾಗಿ ಹೋಗಲಿ ಯಾರು ಕೂಡ ಪ್ರೀತಿಯಿಂದ ಮಾತನಾಡಿಸಿದ ನೆನಪಿಲ್ಲ.
ಹುಟ್ಟಿದ್ದ ಹಬ್ಬಕ್ಕೆ ಶುಭಾಶಯ ತಿಳಿಸಿದವರಿಲ್ಲ
ಸಣ್ಣವನು ಎಂದು ಸಿಹಿ ತಿಂಡಿ ಕೊಡಿಸಿದವರಿಲ್ಲ.

ಆದರೆ ನಾನಗೆ ಈಗಲು ಬಾಲ್ಯ ಎಂದ ಕೂಡಲೆ ನೆನಪಾಗುವುದು, ಆಳು, ನೋವು ಬೇಸರ, ಬಾಸುಂಡೆ , ಹಸಿವು, ಮನೆಬಿಟ್ಟು ಹೋಗಿದ್ದ ದಿನಗಳು, ಸಂಬಂಧಿಕರ ಧೋರಣೆ, ಮನೆಯಲ್ಲಿಯ ಧೋರಣೆ, ಈಗೆ ಹತ್ತು ಹಲವು..

ಇದೆಲ್ಲದರ ನಡುವೆ ನನ್ನ ಭಾವನೆಗಳಿಗೆ ಸ್ಪಂದಿಸುವವರು ಅಗತ್ಯ ನನಗಿತ್ತು.
ಆಗಲೆ ಪರಿಚಿತವಾಗಿದ್ದು ಪೂಜಾ ದೇವಾಂಗ ಹಾಗೂ ರೇಖಾ ದೇವಾಂಗ ಇಬ್ಬರೂ ನನ್ನ ಮುದ್ದು ಅಕ್ಕಂದಿರು..
ನನ್ನ ಸಣ್ಣ ವಯಸ್ಸನಿಂದಲೂ ಅಕ್ಕಂದಿರು ಅಂದ್ರೆ ತುಂಬ ಇಷ್ಟ ನಾನು ಸಾಮಾನ್ಯ ವಾಗಿ ಪರಿಚಯವಾದವರನ್ನು ಅಕ್ಕ ಎಂದೆ ಕರೆಯುವೆ.

ಇವರಿಬ್ಬರ ಆಗಮನ ನನ್ನ ಜೀವನದಲ್ಲಿ ಒಂದಿಷ್ಟು ಸಂತೋಷ ಊಂಟು ಮಾಡಿತ್ತು ಎಂದುಕೊಳ್ಳುವಷ್ಟರಲ್ಲಿ ಅವರಿಗೂ ಮದುವೆಯಾಗಿ ಮೊದಲಿನಷ್ಟು ನನ್ನೊಂದಿಗೆ ಸಮಯ ಕಳೆಯಲು ಆಗುತ್ತಿರಲಿಲ್ಲ.. ಈ ನಡುವೆಯೇ ಜಾಣೆ ಪರಿಚಿತವಾದಳು..
ಅದು ಪೂಜಾ ಅಕ್ಕನ ಮದುವೆಯಲ್ಲಿ ಅಸಲಿಗೆ
ಅಲ್ಲಿಂದ ಪೋನ್ ಮೂಲಕ ಪರಿಚಯವಾದ ನಾವಿಬ್ಬರೂ ಸ್ನೇಹಿತರಾದೆವು. ಆದಾಗಲೇ ನನ್ನೆಲ್ಲಾ ನೋವು ಬಯಕೆ, ಆಸೆಗಳನ್ನು ಅವಳ ಹತ್ತಿರ ಹೇಳಿ ಕೊಂಡಿದ್ದೆ.
ಅವಳ ಕೂಡ ಅವಳ ಕನಸು ಆಸೆ ಎಲ್ಲವನ್ನೂ ವಿವರಿಸಿದ್ದಳು. ನಾವಿಬ್ಬರೂ ಹುಟ್ಟಿರುವುದು ಈ ಬಡತನವೆಂಬ ಕರಗದ ಬಲೆಯಲ್ಲಿ ಮಧ್ಯಮ ವರ್ಗದ ಜನರಿಗೆ ಆಸೆ ಕನಸುಗಳು ಜಾಸ್ತಿ.
ನನ್ನ ಜಾಣೆಗೆ ಯಾವುದೆ ಆಸೆಗಳಾಲ್ಲವೆಂದರೂ ಅವಳು ಅವರನ್ನು ಅವಮಾನಿಸಿದವರ ಮುಂದೆ ಗೆದ್ದು ನಿಲ್ಲಬೇಕು ಎಂಬ ಆಸೆ ನನ್ದು. ಇನ್ನು ಆಸೆಗಳು ನನ್ನ ಬೆನ್ನು ಹತ್ತಿದ್ದವು ಆದಾಗಲೇ ನಾನು ಕೆಲವು ಮಿಂದಣಗಳಲ್ಲಿ ಸಣ್ಣ ಕಥೆ ಕವನಗಳನ್ನು ಬರೆಯಲು ಆರಂಭಿಸಿದ್ದೆ.
ಒಬ್ಬರಿಗೊಬ್ಬರು ಪ್ರೀತಿಯ ವಿಷಯ ತಿಳಿಸದೆ ನಾವಿಬ್ಬರೂ ಪ್ರೀತಿ ಮಾಡಲು ಶುರುಮಾಡಿದೆವು.
ನಂತರದ ದಿನಗಳಲ್ಲಿ ನಾನು ಅಂತ ಕಾಣದ ತಾಯಿಯ ಪ್ರೀತಿ ಜಾಣೆಯಲ್ಲಿ ಕಾಣಲು ಶುರು ಮಾಡಿದೆ. ನಾನು ಕೋಪಗೊಂಡಾಗ ತಾಯಿಯಂತೆ ಮುದ್ದಿಸಿ ಸಮಾಧಾನ ಮಾಡ್ತಿದಳು.
ಸಲಹೆ ನೀಡ್ತಿದ್ದಳು.
ಬರವಣಿಗೆ ನಿನ್ನ ಬೆನ್ನು ಹತ್ತಿದೆ ಏನಾದರೂ ಸಾಧನೆ ಮಾಡು ಅಂತ ತಲೆಗೆ ತುಂಬುತ್ತಿದ್ದಳು..

ಈಗೆ ಶುರುವಾದ ಪ್ರೀತಿ ಇವತ್ತು ಏನಾದರೂ ಮಾಡಲೇ ಬೇಕು ಜೀವನದಲ್ಲಿ ಸಾಯುವ ಮುನ್ನ ಎಂದು ಕರೆದುಕೊಂಡು ಹೋಗುತ್ತಿದೆ..
ಅವಳಿಗೂ ಕೂಡ ನನ್ನ ಬಗ್ಗೆ ಬಹಳಷ್ಟು ಹೆಮ್ಮೆ ಇದೆ.
ಅವಳ ಕನಸುಗಳನ್ನು ನನ್ನಲ್ಲಿ ಕಾಣ್ತಿದ್ದಾಳೆ ನನ್ನ ಜಾಣೆ..

ಈ ಮೋಸದ ಸಂಬಂಧಗಳ ನಡುವೆ ಹೊಸ ಸಂಬಂಧಕ್ಕೆ ನಾಂದಿಹಾಡಿದ್ದಾಳೆ..
ಆ ಮುದ್ದು ಹುಡುಗಿ ನನ್ನ ಪೆದ್ದು ಕೋತಿಮರಿಗೆ ಈ ಮೂಲಕ ಧನ್ಯವಾದಗಳನ್ನು ಹೇಳಲು ಇಷ್ಟ ಪಡುವೆ..
ಹಲವು ವಿಚಾರಗಳಿವೆ ಎಲ್ಲವನ್ನು ವಿವರವಾಗಿ ಹೇಳಿದರೆ ಓದಲು ಬೇಸರವಾಗುತ್ತೆ.
ಅದಕ್ಕೆ ಒಂದಿಷ್ಟು ವಿಷಯಗಳಲ್ಲಿ ಅರ್ಧ ಹೇಳಿ ಮುಗಿಸುತ್ತಿರುವೆ. ತಪ್ಪಾಗಿದ್ದರೆ ಕ್ಷಮಿಸಿ...

ನಿಮ್ಮ ಅಭಿಪ್ರಾಯ
7795005636
ಸಂಜಯ್ ದೇವಾಂಗ