ದುಂಬಿ- ತುಂಬೆ

ದುಂಬಿ- ತುಂಬೆ

ಕವನ

 ಬಿಡದೆ ಹೂವು ಹುಡಿಕಿಕೊಂಡು

ಕಾಡು ಮೇಡು ಅಲೆದು ತಿರುಗಿ

ಬನದ ತುಂಬ ತುಂಬೆ ಹೂವು

ಅರಳಿ ನಿಂತ ಪರಿಯ ನೋಡಿ

ದುಂಬಿ ದಂಡು ಹಾರಿ ಬಂದು

ಮಧುರ ಮಧುವ ಹೀರಿ ತಂದು

ಗೂಡಿನಲ್ಲಿ ಜೇನು ತುಂಬಿ

ದುಂಬಿ ಬದುಕು ಎಷ್ಟು ಕಷ್ಟ

ತುಂಬೆ ಹೂವು ಎಂಥ ಚೆಂದ

ತುಂಬೆಗೊಂದು ದುಂಬಿ ಸಂಗ

ಹೂವಿಗೊಂದು ಮಧುರ ಬಂಧ

ಜೀವ ಕಳೆಯ ತುಂಬಿ ಕೊಂಡು

ಕುಲವ ಬೆಳೆಸೆ ಫಲಿತ ತುಂಬೆ

ದುಂಬಿಗೆಂದೆ ತುಂಬೆ ಮಧುವು

ತುಂಬೆ ಹೂವೆ ದುಂಬಿ ಬಂಧು

ಜೇನು ದುಂಬಿ ಮೈಯ ತುಂಬಿ

ಇಳೆಯ ತುಂಬ ಜೇನು ತುಂಬಿ

ದುಂಬಿ ತುಂಬೆ ಸಫಲ ಬದುಕು

ಮನುಜಗೊಂದು ಬಾಳ ಕಲಿಕೆ.