ಫುಟ್​ ಪಾತ್​ ಹುಡುಗನ ಆಸ್ಕರ್ ಕನಸು..!

ಫುಟ್​ ಪಾತ್​ ಹುಡುಗನ ಆಸ್ಕರ್ ಕನಸು..!

ಮಿಸ್ಟರ್ ಕಿಶನ್ ಹೊಸ ಪ್ರಯತ್ನ..! ಆಸ್ಕರ್ ಪ್ರಶಸ್ತಿಗೆ ಕೇರ್ ಆಫ್​ ಫುಟ್​ ಪಾತ್-2 ಗೆಟಿಂಗ್ ಎಂಟ್ರಿ..!ಕೇರ್ ಆಫ್​ ಪುಟ್ ಪಾತ್​-2 ಬಾಲಾಪರಾಧಿಗಳ ಕುರಿತ ಸಿನಿಮಾ.ಆಸ್ಕರ್ ಗೈಡ್​​ ಲೈನ್ಸ್ ಮೇಲೆನೇ ಸಿನಿಮಾ ನಿರ್ಮಾಣ.ಲಾಸ್ ಏಂಜಲಿಸ್​ ನಲ್ಲಿ ಅಕ್ಟೋಬರ್​ ನಲ್ಲಿ ಚಿತ್ರ ಪ್ರರ್ದಶನದ ಪ್ಲಾನ್​
----
ಕನ್ನಡದ ಮಾಸ್ಟರ್ ಕಿಶನ್ ಈಗ ಮಿಸ್ಟರ್ ಕಿಶನ್ ಆಗಿದ್ದಾರೆ. ಕನಸುಗಳೂ ದೊಡ್ಡ ಮಟ್ಟಿಗೆ ಬೆಳೀತಾನೇ ಇವೆ. 9 ವರ್ಷದನಿದ್ದಾಗ ಕಿಶನ್ ಕೇರ್ ಆಫ್ ಫುಟ್​ ಪಾತ್ ಚಿತ್ರ ನಿರ್ದೇಶಿಸಿ ವಿಶ್ವ ದಾಖಲೆ ಮಾಡಿದ್ದು ಈಗ ಇತಿಹಾಸ. ಅದೇ ಹುಡುಗ ಈಗ ಆಸ್ಕರ್ ಪ್ರಶಸ್ತಿ ಪಡೆಯೋ ಕನಸು ಕಾಣ್ತಿದ್ದಾರೆ. ಕೇರ್ ಆಫ್​ ಫುಟ್ ಪಾತ್ 2 ಚಿತ್ರವನ್ನ ನಿರ್ದೇಶಿಸಿ ಆಸ್ಕರ್​ ಗೂ ನೇರ ಎಂಟ್ರಿ ಪಡೆಯುತ್ತಿದ್ದಾರೆ. ಅದು ಹೇಗೆ....? ಬನ್ನಿ ನೋಡೋಣ....
ಕೇರ್ ಆಫ್ ಪುಟ್ ಪಾತ್. ಕನ್ನಡದ ಮಟ್ಟಿಗೆ ವಿಶೇಷ ಸಿನಿಮಾ. ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರವು ಹೌದು. 11 ಅಂತಾರಾಷ್ಟ್ರೀಯ ಪ್ರಶಸ್ತಿಯನ್ನೂ ಬಾಚಿಕೊಂಡ ಖ್ಯಾತಿನೂ ಈ ಚಿತ್ರಕ್ಕಿದೆ. ನಟಿಸಿ,ನಿರ್ದೇಶಿಸಿದ ಕಿಶನ್ 9 ವರ್ಷದವನಿದ್ದಾಗಲೇ, ಈ ಸಾಧನೆ ಮಾಡಿದ್ದಕ್ಕೆ ಗಿನ್ನಿಸ್ ದಾಖಲೆಯನ್ನೂ ಮೂಡಿಗೇರಿಸಿಕೊಂಡಾಗಿದೆ..
ಆಸ್ಕರ್ ಕನಸು ಕಂಡ ಕಿಶನ್​..!
ಮಾಸ್ಟರ್ ಕಿಶನ್ ಈಗ 19 ವರ್ಷದ ಮಿಸ್ಟರ್ ಆಗಿದ್ದು, ಕೇರ್ ಆಫ್ ಫುಟ್ ಪಾತ್ ಚಿತ್ರದ ಎರಡನೇ ಭಾಗ ಡೈರೆಕ್ಟ ಮಾಡಿದ್ದಾರೆ. ಈ ಸಲ ಆಯ್ದುಕೊಂಡ ಸಬ್​ಜೆಕ್ಟ್ ಬಾಲಾಪರಾಧ. ಬಾಲಾಪರಾಧಕ್ಕೆ ಸಿಕ್ಕಿಕೊಂಡವರ ಈ ಕಥೆಯ ಚಿತ್ರವೇ ಈಗ, ಆಸ್ಕರ್ ಪ್ರಶಸ್ತಿಗೆ ನೇರ ಎಂಟ್ರಿ ಪಡೆಯುತ್ತಿದೆ.
ಆಸ್ಕರ್ ಪ್ರಶಸ್ತಿಗೆ ನೇರ ಎಂಟ್ರಿ ಆಗುತ್ತಿದೆ..!
ಆಸ್ಕರ್ ಪ್ರಶಸ್ತಿಯ ಜನರಲ್ ಕೆಟಗರಿಗೆ ಇದು ಎಂಟ್ರಿ ಆಗುತ್ತಿದೆ. ಹೀಗೆ ನೇರ ಪ್ರವೇಶ ಪಡೆಯಲು ಕಾರಣ, ಆಸ್ಕರ್​ ಪ್ರಶಸ್ತಿಯ ಗೈಡ್ ಲೈನ್ಸ್. ಚಿತ್ರದ ನಿರ್ದೇಶಕ ಕಿಶನ್ ಆಸ್ಕರ್ ಪ್ರಶಸ್ತಿಯ ಗೈಡ್​​​ ಲೈನ್ಸ್​​ ಮೇಲೆನೆ ಇಡೀ ಕೇರ್ ಆಫ್ ಪುಟ್ ಪಾತ್ -2 ಚಿತ್ರ ಮಾಡಿದ್ದಾರೆ. ವಯುಕ್ತಿಕವಾಗಿಯೇ ಆಸ್ಕರ್ ಎಂಟ್ರಿಗೂ ಅಪ್ಲೈ ಮಾಡಿದ ಕಿಶನ್ ಈಗಾಗಲೇ ಆಕಡೆಯಿಂದ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೂಡ ಪಡೆದಿದ್ದಾರೆ.
ಕೇರ್ ಆಫ್ ಫುಟ್ ಪಾತ್​-2 ಆಸ್ಕರ್ ಎಂಟ್ರಿಗೆ ಗ್ರೀನ್​ ಸಿಗ್ನಲ್​..!
ಕೇರ್​ ಆಫ್ ಫುಟ್ ಪಾತ್ -2 ಚಿತ್ರದಲ್ಲಿ ಇಷಾ ಡಿಯೋಲ್ ಪ್ರಮುಖ ಪಾತ್ರ ಮಾಡಿದ್ದಾರೆ. ಮೀರಾ ಹೆಸರಿನ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿರೊಇಷಾ, ಆಸ್ಕರ್ ಪ್ರಶಸ್ತಿಯ ನೇರ ಎಂಟ್ರಿ ಸುದ್ದಿಯಿಂದ ಸಂತಸ ಪಟ್ಟಿದ್ದಾರೆ. ತಾಯಿ ಹೇಮಾ ಮಾಲಿನಿ ಅವರಂತೂ ಮಗಳ ಚಿತ್ರದ ಈ ಸುದ್ದಿ ಕೇಳೆ, ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಆ ಖುಷಿಯನ್ನೂ ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ.
ಮಗಳ ಚಿತ್ರಕ್ಕೆ ಟ್ವಿಟರ್ ನಲ್ಲಿ ಅಮ್ಮನ ಸಂತಸ..!
ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಕೇರ್ ಆಫ್ ಫುಟ್ ಪಾತ್- 2 ಬರುತ್ತಿದೆ. ಬರೋ ಅಕ್ಟೋಬರ್ ಕೊನೆ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ಇಂಗ್ಲೀಷ್ ಸಬ್ ಟೈಟಲ್ ಇರೋ, ಕನ್ನಡದ ಕೇರ್ ಆಫ್​ ಫುಟ್​ ಪಾತ್​ 2 ಚಿತ್ರದ ವಿಶೇಷ ಪ್ರದರ್ಶನವನ್ನ, ಲಾಸ್ ಏಂಜಲಿಸನಲ್ಲೂ ಏರ್ಪಡಿಸಲಾಗುತ್ತಿದೆ.
ಲಾಸ್ ಏಂಜಲಿಸ್​ ನಲ್ಲಿ ಚಿತ್ರ ಪ್ರದರ್ಶನ...!
ಕಿರುತೆರೆಯ ಸೂಪರ್ ಸ್ಟಾರ್ ಜೈ ಕಾರ್ತಿಕ್ ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಆ ವಿಶೇಷ ಪಾತ್ರದ ಹೆಸರು ಕಾರ್ತಿಕ್. ಇನ್ಸೆಪೆಕ್ಟರ್ ಕಾರ್ತಿಕ್ ಆಗಿಯೇ ಅಭಿನಯಿಸಿದ್ದಾರೆ ಜೆ.ಕೆ. ಈ ಚಿತ್ರದಲ್ಲಿ ಇನ್ನು ಹಲವು ಪಾತ್ರಗಳು.. ಹಲವು ವಿಶೇಷತೆಗಳು ಇವೆ.ಅವುಗಳನ್ನ ಚಿತ್ರ ತಂಡ ಒಂದೊಂದಾಗಿಯೇ ಈಗ ರಿವೀಲ್ ಮಾಡ್ತಿದೆ..

-ರೇವನ್

 

Comments