ಬೆಳಗಿನ ಜಾವ

ಬೆಳಗಿನ ಜಾವ

ಕವನ

 ========================

ಬೆಳಗಿನ ಜಾವ| ಅರಳಿದ ಹೂವ |

ಸೆಳೆಯಿತು ಜೀವ| ಒಲವಿನ ಭಾವ |

ಕರುಣೆಯೂ ಯಾವ| ಕ೦ಡೆನು ದೇವ ||

=========================

ಚಲಿಸುವ ಮೋಡ | ಹುಡುಕುತ ಕಾಡ |

ಗಾಳಿಯು ಜೋಡ | ಬಿಟ್ಟಿತು ಬೀಡ |

ಕರುಣೆಯೂ ಯಾವ| ಕ೦ಡೆನು ದೇವ ||

=========================

ಕುಣಿಯುತ ಬತ್ತ | ನೀಡಿತು ಮುತ್ತ |

ನೋಡಿದೆ ಸುತ್ತ | ಹಾರಿತು ಏತ್ತ |

ಕರುಣೆಯೂ ಯಾವ| ಕ೦ಡೆನು ದೇವ ||

=========================

ಗಗನದ ಚುಕ್ಕಿ | ಮನಸ್ಸಿಗೆ ತಾಕಿ |

ಭಾವವು ಉಕ್ಕಿ | ಹಾಡಿತು ಹಕ್ಕಿ ||

ಕರುಣೆಯೂ ಯಾವ| ಕ೦ಡೆನು ದೇವ ||

========================