ಬೇಕಾಗಿದೆ: ಕನ್ನಡ ಶಾಲೆ

ಬೇಕಾಗಿದೆ: ಕನ್ನಡ ಶಾಲೆ

http://epaper.udayavani.com/home.php?edition=Mahila%20Sampada&date=2017-...
ಈ ಲೇಖನದಲ್ಲಿ ನನ್ನ ಗೆಳೆಯ ಗಣೇಶ್ ಸರ್ಕಾರಿ ಕನ್ನಡ ಶಾಲೆಗಳ ದುರವಸ್ಥೆಯನ್ನು ಮನಂಬುಗುವಂತೆ ವಿವರಿಸಿದ್ದಾರೆ.

ನಾನು ವಾಸವಿರುವುದು ಮಂಗಳೂರಿನ ನಗರ ಪ್ರದೇಶದಲ್ಲಿ (ದೇರೆಬೈಲು). ಮಗಳನ್ನು ಶಾಲೆಗೆ ಸೇರಿಸುವ ಹೊಸ್ತಿಲಿನಲ್ಲಿ ಕನ್ನಡ ಶಾಲೆಯ ವಿದ್ಯಾರ್ಥಿಯಾಗಿ/ಅಭಿಮಾನಿಯಾಗಿ ಒಳ್ಳೆಯ ಕನ್ನಡ ಶಾಲೆಗಳನ್ನು ಹುಡುಕುತ್ತಿರುವ ನಾನು ಎದುರಿಸುತ್ತಿರುವ ಪ್ರಶ್ನೆಗಳು ಇವು:
೧.  ಹತ್ತಿರದಲ್ಲಿ ಇರುವ ಒಳ್ಳೆಯ ಕನ್ನಡ ಶಾಲೆಗಳು (೩-೪) ಯಾವುವು?
೨.  ಅಲ್ಲಿ ಪಾಠ ಕಲಿಸಲಿಕ್ಕೆ ಒಳ್ಳೆಯ ಅಧ್ಯಾಪಕರು ಇದ್ದಾರೆಯೆ?
೩.  ಆಟದ ಮೈದಾನ, ಕಲಿಕೆಯ ಉಪಕರಣಗಳು/ಪ್ರಯೋಗಾಲಯ ಮುಂತಾದ ಸೌಲಭ್ಯ ಇವೆಯೇ?
೪.  ಸ್ವಚ್ಛ ಶೌಚಾಲಯ ವ್ಯವಸ್ಥೆ ಇದೆಯೆ?
೫.  ಮುಖ್ಯವಾಗಿ, ಬರುವ ಮಕ್ಕಳ ಹಿನ್ನೆಲೆ ಏನು? ಅವರ ಜೊತೆಗೆ ಸೇರಿದ ಮಗು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳುತ್ತದೆಯೇ?
 
ಸಮಂಜಸ ಉತ್ತರ ಸಿಕ್ಕಿದಲ್ಲಿ ಚಿರಋಣಿ.
 
ತಮ್ಮ,
ನಂದಕಿಶೋರ

 

Comments