ಮಠ - ಆರ್ಭಟ

ಮಠ - ಆರ್ಭಟ

ಕವನ

ಮಠ ಮಠ ಮಠ ಎಲ್ಲೆಡೆ ಇದರದೆ ಆರ್ಭಟ
ನಾಡಿನ ಶಿವನು  ಮಠಗಳ ಮೋಡಿಗೊಳಗಾಗಿಹನೇನೊ
ಬೂದಿಯು ಮೂಢನ ಹಣೆಯನೇರಿ ಕಲ್ಮಷ ವಿಭೂತಿಯಾಗಿಹುದು
ಬೇಗನೆ ಬಾರೊ ಕಾಡಿನ ಭೈರವ ನೀನೆ ಬಾರೊ
ವೈಚಾರಿಕತೆ ಲೇಪಿತ ಬೂದಿಯನೆರಚುತ ಬಾರೋ
ಥರಥರ ಥರಥರ ತಾಂಡವ ಕುಣಿಯೋ, ಮೂರನೆ ಕಣ್ಣನು ತೆರೆಯೋ
ಆಹುತಿಯಾಗಲಿ ಮೂರು ಮಠಗಳು[ಮೇಲ್,ಮಧ್ಯಮ,ಹಿಂದುಳಿದ]
ಎಲ್ಲೆಡೆ ಹರಡಿರುವ ಜಾತಿಯ ನಂಜನು ಕುಡಿದು
ದೂರದೂರಕು ಮನಸಿನಾಳಕು ದಟ್ಟವಾಗಿ ಕವಿದಿರುವೀ ಮಂಜನು ಸರಿಸೋ
ಬೇಗನೆ ಬಾರೊ ಕಾಡಿನ ಭೈರವ ನೀನೆ ಬಾರೊ