ಮಾನವ ಜನ್ಮ ದೊಡ್ಡದು

ಮಾನವ ಜನ್ಮ ದೊಡ್ಡದು

ರಚನೆ: ಪುರಂದರದಾಸರು

ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲು ಬೇಡಿ
ಹುಚ್ಚಪ್ಪಗಳಿರಾ !

ಕಾಲನವರು ಬಂದು ಕರಪಿಡಿದೆಳೆವಾಗ
ತಾಳು ತಾಳೆಂದರೆ ಕೇಳುವರೇ?
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ

ಏನು ಕಾರಣ ಯದುಪತಿಯನ್ನು ಮರೆತಿರಿ
ಧನ ಧಾನ್ಯ ಸತಿ ಸುತರಿವು ನಿತ್ಯವೇ?
ಇನ್ನಾದರು ಶ್ರೀ ಪುರಂದರವಿಠಲನ
ಚೆನ್ನಾಗಿ ಭಜಿಸಿ ನೀವು ಸುಖಿಯಾಗಿರಯ್ಯ