ಮುಂಬೈ ಆಕಾಶವಾಣಿಯಲ್ಲಿ ಶಿಕ್ಷಣ ಪದ್ಧತಿಯ ಸುಧಾರಣೆಯ ಬಗ್ಗೆ ಸಂವಾದ, ಚರ್ಚೆ !

ಮುಂಬೈ ಆಕಾಶವಾಣಿಯಲ್ಲಿ ಶಿಕ್ಷಣ ಪದ್ಧತಿಯ ಸುಧಾರಣೆಯ ಬಗ್ಗೆ ಸಂವಾದ, ಚರ್ಚೆ !

ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ,
'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವೂ ಹಾಗೂ ಅತ್ಯುತ್ತಮ ಮಾಹಿತಿ, ಶಿಕ್ಷಣದ ಬಗ್ಗೆ ಸಾಮಾಜಿಕ ಕಳಕಳಿ ಮತ್ತು ಏನಾದರೊಂದು ಸಾಧನೆಮಾಡಿ ಈ ಪಿಡುಗನ್ನು ನಿರ್ಮೂಲಮಾಡುವ ಆತಂತ ಮೊದಲಾದವುಗಳನ್ನು ಭಾಗವಹಿಸಿದ ಶಿಕ್ಷಣವಲಯದ ನಿಷ್ಣಾತರಲ್ಲಿ ಕಂಡೆವು. ಅದರಿಂದಾಗಿ ಕಾರ್ಯಕ್ರಮ  ಕಳೆಗಟ್ಟಿತ್ತು. ಇದು ಕೇವಲ ಚರ್ಚಾಕೂಟದ ಅಲ್ಲದೆ ಸಂವಾದದ ತರಹ ಇದ್ದದ್ದು ಒಂದು ವಿಶೇಷ.
ಈಗಿನ ಶಿಕ್ಷಣ ಪದ್ಧತಿಯ ಸುಧಾರಣೆ ಅತ್ಯಗತ್ಯ :

ಇನ್ನೇನು ನಮ್ಮ ಶಿಕ್ಷಣ ಪದ್ಧತಿಯ ತೃಟಿಗಳು ಏನೆಲ್ಲಾ ಆ ವಲಯದಲ್ಲಿ ಕಾಣಬಹುದು. ಅದಕ್ಕೆ ಉಪಶಮನಗಳು, ಮತ್ತು ಹೇಗಿರಬೇಕು ಎನ್ನುವ ಬಗ್ಗೆ ಕಲ್ಪನೆ ಆಶೆ, ಕನಸುಗಳು ಇತ್ಯಾದಿಗಳು ಸುಂದರವಾಗಿ ಮೂಡಿ ಬಂದವು ಶಿಕ್ಷಣ ಕ್ಷೇತ್ರದಲ್ಲಿ ಗಮನೀಯ ಸಾಧನೆಮಾಡಿ ನಿರಂತರವಾಗಿ ಅದರಲ್ಲೇ ತಮ್ಮನ್ನು ತೊಡಗಿಸಿಕೊಂಡಿರುವ ಜಿ.ಎನ್.ಉಪಾಧ್ಯ ಸರಿಯಾಗಿ ಹೇಳಿಮಾಡಿಸಿದ ವ್ಯಕ್ತಿಯಾಗಿ ತಮ್ಮ ಅನಿಸಿಕೆಗಳನ್ನು ಸ್ಪಸ್ಟವಾಗಿ ತಿಳಿಸಿದರು. ಅವರ ಆಶೋತ್ತರಗಳಿಗೆ ಸ್ಪಂದಿಸಲು ಶಿಲ್ಷಕರಾಗಿ ಡಾ. ಉಮಾರಾವ್ ಮತ್ತು ಪದ್ಮ ರೇಖಾ ಚೆನ್ನಾಗಿ ಸ್ಪಂದಿಸಿದರು. ಆದರೆ ಅವರ ವೈಯಕ್ತಿಕ ಅಪೇಕ್ಷೆಗಳನ್ನು ಹೇಳುವ ವೇಗ ಕಡಿಮೆಯಾಗಿದ್ದಿದ್ದರಿಂದ ಅವನ್ನು ತುಂಬಲು ಉಪಾಧ್ಯಾಯರು ಮಧ್ಯೆ ಮಧ್ಯೆ ಪ್ರವೇಶಿಸಬೇಕಾಯಿತು. ವೀಣಾ ರಾಯ್  ಸಿಂಘಾನಿ ಕಾರ್ಯಕ್ರಮ ಆಯೋಜನೆ  ಮತ್ತು ಸುಶೀಲಾ ಎಸ್. ದೇವಾಡಿಗರ ಪ್ರಸ್ತುತಿ ಚೆನ್ನಾಗಿತ್ತು. ಒಟ್ಟಿನಲ್ಲಿ ಈ ವಾರದ ಕಾರ್ಯಕ್ರಮ ನನ್ನ ರೇಡಿಯೊದಲ್ಲಿ ನನಗೆ ಕೇಳಿಸಿತು. ಸಮಯ ಉಳಿಸಿಕೊಳ್ಳಲು ಯಥಾಪ್ರಕಾರದ ಪ್ರತಿವಾರವು ಮುಂಬೈ ಆಕಾಶಾಶವಾಣಿ ಮಧ್ಯಾನ್ಹ ೧೨-೩೦ ಕ್ಕೆ ಕನ್ನಡ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಇತ್ಯಾದಿ ಇರಲಿಲ್ಲ. ಅವು ಅಗತ್ಯವು ಇಲ್ಲ. ಎಷ್ಟು ಸಮಯ ಉಳಿದರೆ ಅಷ್ಟೇ ಒಳ್ಳೆಯದು. ಇವನ್ನು ನನ್ನ ಬಾಲ್ಯದಿಂದಲೂ, ಯುವಕನಾದಮೇಲೆ, ಪ್ರೌಢಾವಸ್ಥೆಯಲ್ಲಿ ಮತ್ತು ಈಗ ಇಬ್ಬರು ಮಕ್ಕಳ ಪಾಲಕನಾಗಿ  ಕೇಳುತ್ತಾ ಬಂದಿದ್ದೇನೆ. ಅವುಗಳು ಇಂದಿಗೂ ಸಮಸ್ಯೆಗಳೇ. ಅಂದಿನ-ಇಂದಿನ ಆಧುನಿಕ ಸಮಾಜದ ಆಧುನಿಕ ತಂತ್ರಜ್ಞಾನದ ಅಮಲಿನಲ್ಲಿರುವ ಹೆಚು ಹೆಚ್ಚು ಸಂಪಾದಿಸುತ್ತಿರುವ ಮತ್ತು ಖರ್ಚುಮಾಡಲು ಹಿಂಜರಿಯದ ಸ್ವಾಭಾವದ  ಜನ ಸಮುದಾಯದ ಸಮಸ್ಯೆಗಳು ಇನ್ನೂ ಉಸಿರುಗಟ್ಟಿಸುವಂತಹವುಗಳು. 

ನನ್ನ ಬಗ್ಗೆ : (ಇದನ್ನು ಬರೆಯಲು ನನಗೆ ಎಷ್ಟು ಸಾಮರ್ಥ್ಯವಿದೆ, ಅದು ಎಷ್ಟು ಪ್ರಸ್ತುತ ಎನ್ನುವುದರ ಬಗ್ಗೆ ತಿಳಿಸಲು)

ಸಾವಿರಾರು ಕನ್ನಡ, ಇಂಗ್ಲೀಷ್ ಹಿಂದಿ ಗಳನ್ನು ತಪ್ಪದೆ ಕೇಳುತ್ತಾ ಬಂದಿರುವ ನನಗೆ (ಬಿಬಿಸಿ, ಸಿಎನ್.ಎನ್, ಎನ್.ಡಿ.ಟಿವಿ, ದೂರದರ್ಶನ್ ಇತ್ಯಾದಿಗಳಲ್ಲಿ) ಸಿಮಿಗೆರೆವಾಲ್, ಶೈಲಜಾ ಸಂತೋಷ್, ಟಿಮ್ ಸೆಬೆಸ್ಚಿಯನ್, ವೀರ್ ಸಾಘವಿ, ಕರಣ್ ಥಾಪರ್, ರಾಧಿಕಾ, ರವಿಕುಮಾರ್, ಮೆರ್ಹೋತ್ರ, ರಾಜ್ ದೀಪ್ ಸರ್ ದೇಸಾಯ್, ಬರ್ಖಾ ದತ್, ಇತ್ಯಾದಿ) ಅವುಗಳ ಬಗ್ಗೆ ಸಾಕಷ್ಟು ಮಾಹಿತಿ ಅರಿವು ಇದೆ. (ಮೈಸೂರರಸರ ಆಧಿಪತ್ಯದಬಗ್ಗೆ ಬೆಳಕು ಚೆಲ್ಲುವ ಪುಸ್ತಕವನ್ನು ರಚಿಸಿದ, ವಿಕ್ರಮ್ ಸಂಪತ್ ಎಂಬ ಲೇಖಕರನ್ನು ಸಂದರ್ಶಿಸಿದ ಸಂದರ್ಶನಕಾರ ತುಂಬಾ ಚೆನ್ನಾಗಿ ತಮ್ಮ ಕಾರ್ಯವನ್ನು ನಿಭಾಯಿಸಿದರು)
ಆದ್ದರಿಂದ ನಾನು ಹೇಳುವುದು ಇಷ್ಟೆ. ಬಿತ್ತರವಾದ ಕಾರ್ಯಕ್ರಮದಂತೆ ಎಲ್ಲಿ ಸಾಧ್ಯವೋ ಅಲ್ಲಿ ಸಮಯ ಉಳಿಸಿ. ಅದು ಕೇವ ನಿಮಿಷಗಳಾಗಿರಬಹುದು. ಇಲ್ಲ ಸೆಕೆಂಡಾಗಿರಬಹುದು. ಹಾಗಾಇ ಒಲ್ಲೆಯ ಹೋಮ್ ವರ್ಕ್ ಮಾಡಿ ಬಂದು ಭಾಗವಹಿಸಿದ ನಮ್ಮ ಗೆಳೆಯ ಡಾ. ಉಪಾಧ್ಯರವರ ಮಾತುಗಳನ್ನು ಕೇಳುವಾಗ ನಮಗೆ ಅನ್ನಿಸಿದ್ದು ಹೇಳುವುದು ಬೇಕಾದಷ್ಟಿದೆ ಆದರೆ ಅವರಿಗೆ ಅವನ್ನು ಸಮರ್ಪಕವಾಗಿ ಶ್ರೋತೃಗಳಿಗೆ ಮುಟ್ಟಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಭಾವನೆ ಬಂತು. ಭಾಗವಹಿಸುವ ವಿಶೇಶಜ್ಞರೂ ತಮ್ಮ ವಿಶಯ ಪ್ರತಿಪಾದನೆಗೆ ಸರಿಯಾಗಿ ತಯಾರಾಗಿ ಬರಬೇಕು. ತಮ್ಮ ಮಾತುಗಳನ್ನು ಸ್ಪಷ್ಟವಾಗಿ ಮರೆಯದೆ ಕಾಗದಲ್ಲಿ ಗುರುತುಹಾಕಿಕೊಂಡು ಬರುವುದು ಅತಿಮುಖ್ಯ. ಬಾಯಿಮಾತು ಇಲ್ಲಿ ಕೆಲಸಕ್ಕೆ ಬರುವುದಿಲ್ಲ. 

ಇಲ್ಲಿ ಸರ್. ಎಮ್. ವಿಶ್ವೇಶ್ವರಯ್ಯನವರ ಒಂದು ಉದಾಹರಣೆ ನೆನಪಿಗೆ ಬರುತ್ತದೆ. ಒಮ್ಮೆ ಸರ್ ಎಮ್.ವಿ ರವರನ್ನು ಇನ್ನೂ ದಿನಾನರಾಗಿದ್ದ ಸಮಯದ ಮಾತು. ಒಂದು ಶಾಲೆಗೆ ಭೇಟಿಮಾಡಲು ಕರೆದೊಯ್ಯಲಾಯಿತು. ಶಾಕೆಯ ಅಧಿಕಾರಿಗಳು ತಾವು ಮಕ್ಕಳಿಗೆ ಹಿತವಚನಗಳನ್ನು ಹೇಳಿ ಎಂದು ವಿನಂತಿಸಿಕೊಂಡರು ಒಪ್ಪಿ ಮಾತಾಡಿದರು. ಆದರೆ ವಿಶ್ವೇಶ್ವರಯ್ಯನವರು ಭಾಷಣಮ್ಡಿದ ಬಳಿಕ ಅಸಂತುಷ್ಟರಾಗಿದ್ದದು ಕಂಡುಬಂತು. ಆಗ ಅಲ್ಲಿನ ಕಾರ್ಯಕರ್ತರು ಕಾರಣ ವಿಚಾರಿಸಿದಾಅ ಅಯ್ಯವರು ಕೊಟ್ಟ ಉತ್ತರ ನಿನಕ್ಕೂ ಮರೆಯಲಾದದಂತಹದು. ಕ್ಷಮಿಸಿ. ನಾನು ವಿದ್ಯಾರ್ಥಿಗಳಿಗೆ ಹೇಳಬೇಕಾದದ್ದನ್ನು ಸರಿಯಾಗಿ ಹೇಳಲು ಅಸಮರ್ಥನಾದನೇನೊ ಅನ್ನಿಸಿದೆ. ನನಗೆ ಮತ್ತೊಂದು ಅವಕಾಶಕೊಡಿ ಸರಿಯಾಗಿ ಸಿದ್ಧಮಾಡಿಕೊಂಡು ಬಂದು ಹೇಳುತ್ತೇನೆ ಎಂದಾಗ ಅಲ್ಲಿನ ಮೂಗಿನ ಮೇಲೆ ಕೈ ಇಟ್ಟುಕೊಂಡರು. ಮತ್ತೆ ಒಂದುವಾರದಮೇಲೆ ಅಯ್ಯನವರು ಅಚ್ಚುಕಟ್ಟಾಗಿ ಹಾಳೆಯಲ್ಲಿ ಬರೆದ 
ಭಾಷಣವನ್ನು ಹುಡುಗರಮುಂದೆ ಪ್ರಸ್ತುತಪಡಿಸಿದರಂತೆ. ಅದೆಷ್ಟು ಮಕ್ಕಳಿಗೆ ಅದರ ಅರ್ಥವಾಯಿತೋ ದೇವರೇ ಬಲ್ಲ. ಆದರೆ ಇದು ಸರ್. ಎಮ್.ವಿ ಯವರ ವ್ಯಕ್ತಿತ್ವಕ್ಕೆ ಒಂದು ನಿದರ್ಶನ. ಯಾರನ್ನೂ ಉಪೇಕ್ಷಿಸುವಂತಿಲ್ಲ.

(ಒಟ್ಟಿನಲ್ಲಿ ಮುಂಬೈ ಕನ್ನಡಿಗರೇ ದಯಮಾಡಿ ಕನ್ನಡ ಕಾರ್ಯಕ್ರಮ ಆಲಿಸಿ. ಇದು ಪ್ರತಿ ಶನಿವಾರ ಮದ್ಯಾನ್ಹ ೧೨-೩೦ ಕ್ಕೆ ಮುಂಬೈ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತದೆ)