ರೈಲಿನ ಸಾಮಾನ್ಯ ಕೋಚ

ರೈಲಿನ ಸಾಮಾನ್ಯ ಕೋಚ

ಭಾರತ ದೇಶದ ಅವಿಭಾಜ್ಯ ಅಂಗವಾದ ಭಾರತೀಯ  ರೈಲ್ ನಲ್ಲಿ ದಿನಾಲು ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ.ನಾನು ಒಂದು  ದಿನ ಅನಿವಾರ್ಯ ಕಾರಣಗಳಿಂದ ರೈಲ್ವೆಯ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸ ಬೇಕಾಯಿತು.  ನಾನು ನನ್ನ ಬ್ಯಾಗನ್ನು  ತೆಗೆದುಕೊಂಡು  ಮನೆಯಿಂದ ರೈಲ್ವೆ  ನಿಲ್ದಾಣದಕ್ಕೆ ಹೊರಟೆ  . ರೈಲ್ವೆ  ನಿಲ್ದಾಣದಲ್ಲಿ ಸಾಮಾನ್ಯ ಟಿಕೆಟ್  ತೆಗೆದುಕೊಳಲು ಒಂದು ದೊಡ್ಡದಾದ ಲೈನ.ಯಾಕೆಂದರೆ .ನಿಲ್ದಾಣದಲ್ಲಿ ಬರಿ  ಮೂರು ಟಿಕೆಟ್  ಕೌಂಟರ್  ಇದ್ದವು. ನಾನು ಸುಮಾರು  ೧೬ ನಿಮಿಷ ಲೈನನಲ್ಲಿ ನಿತಿಕೊಂಡು ಟಿಕೆಟ್ ತೆಗೆದುಕೊಂಡೆ.ಇನೆನೊ ರೈಲ್ವೆ  ಬರಬೆಕಾಗಿತು ಕೆಲ  ಪ್ರಯಾಣಿಕರು  ಸಿಟ್ಟು  ಹಿಡಿಯಲು ಪ್ಲಾಟಪಾರಂ ತೆಳಗಡೆ ಇಳಿದರು.ಅವರು ರೈಲಿನ 
ಆ ಕಡೆ ಯಿಂದ   ಹತ್ತಿದರು.ಕೆಲವರು   ಅಲ್ಲಿರೂವ  ಕೂಲಿಗಳಿಗೆ ೪೦ ರೂಪಾಯಿ ಕೊಟ್ಟು ಸಿಟ್ಟು  ಹಿಡಿಯೊಕೆ ಹೇಳಿದರು. ಕೂಲಿಗಳು ಚಲಿಸುತ್ತಿರು ರೈಲಿನಲ್ಲಿ  ಹತ್ತಿ ಸಿಟ್ಟು  ಹಿಡಿದರು. ಸಾಮಾನ್ಯ ಕೋಚಗಳಲ್ಲಿ ಸಿಟ್ಟು  ಹಿಡಿಯೊಂದು ಅಂದರೆ  ಒಂದು ಯುದ್ಧ ಮಾಡಿದ ಹಾಗೆ. ಸಿಟ್ಟು  ಸಿಕಿದರೆ  ಮರುಭೂಮಿಯಲ್ಲಿ ನೀರು  ಸಿಕ್ಕಿದ ಹಾಗೆ. ನಾನು  ತುಂಬ ಕಷ್ಟ ಪಟ್ಟು  ಕಿಟಕಿಯ ಸಿಟ್ಟನ್ನು ಹಿಡಿದೆ.ಸುಮಾರು ೧೨೦ ಸಿಟ್ಟು ಗಳು ಇರುವ ಆ ಭೋಗಿಯಲ್ಲಿ ಆವಗಲೇ ೨೫೦ ಜನರು  ಹತ್ತಿಕೊಂಡಿದರು.ಸಿಟ್ಟು ಗಳು ತುಂಬಿದವು. ಉಳಿದರವಲ್ಲಿ ಕೆಲವರು   ಸಿಟ್ಟು ಗಳ ಮಧ್ಯೆ  ಖಾಲಿಯಿರುವ ಸಳ್ಥದಲ್ಲಿ ಮತ್ತೆ  ಕೆಲವರು  ನಡೆದಾಡೋ  ಕ್ಕೆ  ಅಂಥ ಇರುವ ಸಳ್ಥದಲ್ಲಿ ತೆಲಗಡೆ ಕುಳಿತುಕೊಂಡರು.ಕೆಲವರು ಮೇಲೆ ಲಗೇಜುಗಳನ್ನು ಇಡುವ ಸಳ್ಥದಲ್ಲಿ  ಕುಳಿತುಕೊಂಡರು.೪ ರಿಂದ ೫ ಜನ ರು  ರೈಲಿನ ಬಾಗಿಲನ ಹತ್ತಿರ ಕುಳಿತುಕೊಂಡಿದರು. ಎರಡೂ  ಶೌಚಾಯಲಗಳ ಮಧ್ಯದಲ್ಲಿ  ಖಾಲಿಯಿರುವ ಸಳ್ಥದಲ್ಲಿ ಕೆಟ್ಟ ವಾಸನೆಯನ್ನು  ಸೇವಿಸುತ್ತಾ ೩ ರಿಂದ ೪ ಪ್ರಯಾಣಿಕರು  ಕುಳಿತುಕೊಂಡಿದ್ದರು.   ರಾತ್ರಿ  ಸುಮಾರು  ೧೧ ಗಂಟೆ ಗೆ ನಿದ್ದೆ  ತಾಳದ ಪ್ರಯಾಣಿಕನು ಸಿಟ್ಟಿನ ತೆಳ ಭಾಗದಲ್ಲಿ  ಬಟ್ಟೆಯನ್ನು  ಹಾಸಿಕೊಂಡು  ಮಲಗಿಕೊಂಡ. ಇನೊಬ್ಬನ ಪ್ರಯಾಣಿಕ ನಾನು ಕುಳಿತುಕೊಂಡಿರುವ ಕಿಟಕಿಯ ಸಿಟ್ಟಿನ ಮೇಲಿರುವ ಒಂದು feet ಅಗಲವಿರುವ ಚಿಕ್ಕ ಲಗೇಜು ಗಳನ್ನು  ಇಡಲು ಮಾಡಿರುವ ಸಿಟ್ಟಿನ ಮೇಲೆ ಹತ್ತಿಕೊಂಡು ಮಲಗಿದ್ದ. ಅವನು ನಿದ್ರೆ ಯಲ್ಲಿ ಸ್ವಲ್ಪ ನ್ನು ತಿರುಗಿದರೆ  ಅಷ್ಟು  ಮೇಲಿಂದ ತೆಳಗಡೆ ಬೀಳುತ್ತಿದ್ದ. ಅವನನ್ನು  ಆ ದೇವರೇ  ಕಾಪಾಡಬೇಕು.   ಸುಮಾರು  ಮಧ್ಯ ರಾತ್ರಿ ಯಲ್ಲಿ ನಾನು ಶೌಚಾಯಲಕ್ಕೆ ಹೋಗಬೇಕಾಗಿತ್ತು ಒಂದು ನಿಮಿಷ ಕುಳಿತಲ್ಲೇ  ಯೋಚನೆ ಮಾಡಿದೆ ಅಲ್ಲಿವರೆಗು ಹೇಗೆ  ಹೋಗಬೇಕು  ಅಂಥ. ಯಾಕೆಂದರೆ  ಒಂದು  ಹೆಜ್ಜೆ  ಇಡಲು  ಜಾಗಯಿರಲ್ಲಿಲ ಆ ಕೋಚಿನಲ್ಲಿ. ಆಮೇಲೆ  ಒಂದು  ಯೋಚನೆ ಬಂತು ಸಿಟ್ಟಗಳ ತುದಿಯಲ್ಲಿ ಸ್ವಲ್ಪ ಜಾಗ ಖಾಲಿಯಿತು.ಆ ತುದಿಯ ಮೇಲೆ  ಹೆಜ್ಜೆ  ಇಡುತಾ ಹಾಗೋ ಹಿಗೋ  ಶೌಚಾಲಯದ ಹತ್ತಿರ ಹೋದೆ ಇನ್ನೇನು  ಒಳಗಡೆ  ಹೋಗಬೇಕು  ಶೌಜಾಯಲದ ಬಾಗಿಲಿನಲ್ಲಿ ಒಬ್ಬ ಪ್ರಯಾಣಿಕನು  ಕುಳಿತಿದ್ದ ಅವನನ್ನು  ಸ್ವಲ್ಪ ಪಕ್ಕದಲ್ಲಿ  ಸರಿಸಿ ಒಳಗಡೆ  ಹೋದೆ.  ಮಹಾಭಾರತದಲ್ಲಿ ಅಭಿಮನ್ಯು  ಚಕ್ರವ್ಯೂಹವನ್ನು ಬೇದಿಸದ ಹಾಗಿತ್ತು. ಸಾಮಾನ್ಯ ಕೋಚಗಳಲ್ಲಿ ಪ್ರಯಾಣಿಸು  ಪ್ರಯಾಣಿಕರು ಅನುಭವಿಸುತ್ತಿರುವ ನರಕಯಾತನೆ ಇದ್ದು.ನಮ್ಮ ಕೇಂದ್ರ ಸಕಾ೯ರ ರೈಲು  ನಿಲ್ದಾಣಗಳಲ್ಲಿ ಉಚಿತ ವೈ- ಪೈ,  ಬುಲೆಟ ರೈಲು  ಅಂಥ ಯೋಜನೆಗಳನ್ನು  ಘೋಷಿಸುತ್ತದೆ ಆದರೆ  ಬಡವರಿಗೋಸಕ್ಕರ ಪ್ರತಿ  ರೈಲಿನಲ್ಲಿ  ಎರಡೂ ಮೂರು ಸಾಮಾನ್ಯ ಕೋಚಗಳನ್ನು  ಹೆಚ್ಚು  ಮಾಡುವುದಿಲ್ಲ. ಬಡವರು ಸಕಾ೯ರದ ವಿರುದ್ಧ ಹೋರಾಟ ಮಾಡೋಕು ಆಗೋದಿಲ್ಲ. ಇವರೆಲ್ಲ ದಿನಗೂಲಿ ಕಾಮಿ೯ಕರು ಒಂದು ದಿನ ಕೆಲಸಕ್ಕೆ  ಹೋಗಲಲ್ಲಿ ಅಂದರೆ ಅವರ  ಕುಟುಂಬ ಅವತ್ತು  ಉಪವಾಸ ಮಲಗಬೇಕಾಗುತ್ತದೆ.ಈ ದೇಶದ ದಲ್ಲಿ  ಬಡವರಾಗುತ್ತಾರೆ ಹುಟ್ಟಿದೆ ತಪ್ಪು. ಈ ಕೇಂದ್ರ ಸಕಾ೯ರ ಆದರೂ  ಇದರ ಕಡೆ  ಗಮನ ಹರಿಸುತ್ತದೆ ಅಂತ ಆಶಿಸೋನ.

Comments

Submitted by anand33 Wed, 06/10/2015 - 17:13

ನನಗನಿಸುವಂತೆ ಭಾರತಕ್ಕೆ ಬುಲೆಟ್ ರೈಲುಗಳ ಅಗತ್ಯವಿಲ್ಲ ಏಕೆಂದರೆ ಬುಲೆಟ್ ರೈಲಿಗೆ ಪ್ರತ್ಯೇಕ ಮಾರ್ಗ ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನದಲ್ಲಿ ನಿರ್ಮಿಸಬೇಕಾಗುತ್ತದೆ. ಇದಕ್ಕೆ ಅಪಾರ ಹಣ ವೆಚ್ಚವಾಗುವುದರಿಂದ ಇದರಲ್ಲಿ ಜನಸಾಮಾನ್ಯರು ಪ್ರಯಾಣಿಸುವುದು ಸಾಧ್ಯವಿಲ್ಲ ಏಕೆಂದರೆ ಇದರ ಟಿಕೆಟ್ ದರ ಜನಸಾಮಾನ್ಯರಿಗೆ ಎಟಕುವಂತೆ ಇರಲಾರದು. ಅತ್ಯಂತ ತುರ್ತಾಗಿ ಒಂದು ಪ್ರದೇಶದಿಂದ ಇನ್ನೊಂದು ದೂರದ ಊರಿಗೆ ಹೋಗಬೇಕಾದ ಸ್ಥಿತಿವಂತರಿಗೆ ವಿಮಾನಗಳು ಹೇಗೂ ಇದ್ದೇ ಇವೆ. ಹೀಗಾಗಿ ದುಬಾರಿ ವೆಚ್ಚದಲ್ಲಿ ಬುಲೆಟ್ ರೈಲು ಮಾರ್ಗ ನಿರ್ಮಿಸುವ ಬದಲು ಸಾಮಾನ್ಯ ರೈಲುಗಳ ಮಾರ್ಗವನ್ನು ನಿರ್ಮಿಸುವುದು ಹಾಗೂ ಅಗತ್ಯವಾದ ಹೆಚ್ಚುವರಿ ಸಾಮಾನ್ಯ ರೈಲುಗಳ ಸೌಲಭ್ಯವನ್ನು ಉತ್ತಮಗೊಳಿಸುವುದು ಇಂದಿನ ಅಗತ್ಯ.

Submitted by Nagaraj Bhadra Wed, 06/10/2015 - 22:43

In reply to by anand33

ಆನಂದ ಸರ್ ನಿಮ್ಮ. ಪ್ರತಿಕ್ರಿಯೆಗೆ ಧನ್ಯವಾದಗಳು .ನಮ್ಮ ದೇಶದ ಸಾಮಾನ್ಯ ಜನರಿಗೆ ವೈಪೈ,ಬುಲೆಟ್ ರೈಲು ಯಾವದು ಬೇಕಾಗಿಲ್ಲ.ಅವರು ಕೊಡುವ ದುಡ್ಡುಗೆ ಒಂದು ಸೀಟ್ ಬೇಕು ಅಷ್ಟೇ. ನೀವು ಹೇಳಿದು ನಿಜ ಸರ್.