ಸಾಮಾಜಿಕ ಜಾಲತಾಣ - 2

ಸಾಮಾಜಿಕ ಜಾಲತಾಣ - 2

 ಶಂಕರ  ಅಮ್ಮ ಹೇಳಿದಂತೆ ಬೆಳ್ಳಿಗೆ ಎದ್ದು ರೆಡಿ ಆಗಿ ಶಾಲಿನಿನ ಕರೆದುಕೊಂಡು ಬರಲು ಮೆಜೆಸ್ಟಿಕ್ ರೈಲು  ನಿಲ್ದಾಣಕೆ ಗೆ ಹೋದ. ಶಾಲಿನಿ ಮತ್ತು ಆಕೆಯ ಮೂರ ಜನ ಗೆಳತಿಯರೊಂದಿಗೆ ಶಂಕರನ ಬರುವಿಗೆ ಕಾಯುತ್ತ ಇದಳು. ಆ ನಾಲವರು ಲಗೇಜ್ ಜಾಸ್ತಿ ಇತ್ತು. ಶಂಕರ ಶಾಲಿನಿ ಇದ್ದ ಕಡ್ಡೆಗೆ ಮೊಬೈಲ್ ನಲ್ಲಿ ಚಾಟ್ ಮಾಡುತ್ತಾ ಬಂದ. ಇವರನ ನೋಡಿ ,
" ಹಲೋ ಶಾಲಿನಿ , ಹೇಗಿದಿಯ , ಹೇಗಿತು ಪಯಣ , ಏನು ತೊಂದರೆ ಆಗಿಲ್ಲವಲ್ಲ ".

"ಇಲ್ಲ ಶಂಕರ್ ಏನು ಪ್ರಾಬ್ಲಮ್ ಆಗಿಲ್ಲ , ನೀನು ಬರೋದನೆ ಕಾಯುತ್ತ ಇದಿವಿ , ಬೈ ದಿ ಬೈ ಮೀಟ್ ಮೈ ಫ್ರೆಂಡ್ಸ್ ಪವಿತ್ರ , ಪೂರ್ಣಿಮಾ , ಅಂಡ್ ಸುಪ್ರಿಯ "

"ಹಲೋ" ಅಂತ ಶಂಕರ ಮುಗುಳು ನಗೆಯೊಂದಿಗೆ ಹೇಳಿದ .

"ಬನ್ನಿ , ಎಲ್ಲ ಹೊರಡೋಣ , ಶಾಲು , ನೀನು ಮತ್ತೆ ನಿನ್ನ ಫ್ರೆಂಡ್ಸ್ ಒಂದು ಆಟೋ ದಲ್ಲಿ ಬನ್ನಿ , ನಾನು ಮತ್ತೆ ನಿಮ್ಮ ಲಗೇಜ್ ಇನ್ನೊದು ಆಟೋದಲ್ಲಿ ಬರುತೀವಿ , ಆಯ್ತಾ , ಕೂಲಿ ಲಗೇಜ್ ತಗೊಂಡು ಆಟೋ ಸ್ಟಾಂಡ್ ಗೆ ಬನ್ನಿ " ಅಂತ ಹೇಳುತ್ತಾ ಶಂಕರ್ ಮುಂದೆ ನಡೆದ.

"ಹೇಯ್ ಶಾಲು , ನಿನ್ನ ಹುಡುಗ ಸ್ಮಾರ್ಟ್ ಆಗಿ ಇದ್ದಾನೆ , ಹೊಡೆದೆ ಚಾನ್ಸ್ , ಬಿಡ ಬೇಡ , don't ಮಿಸ್ ಸಚ್ ಲವ್ಲೀ ಬಾಯ್ ".

"ಸಾಕು ಬಾರೆ ಪ್ರಿಯ " ಅಂತ ಶಾಲು ನಾಚುತ್ತ ಹೇಳಿ ಮುಂದೆ ನಡೆದಳು.

 ಶಂಕರ ಆಟೋ ಹಿಡಿಯಲು ಪ್ರಯಾಸ ಪಡುತ ಇದ್ದ . ಆಟೋದವರು ಮೆಜೆಸ್ಟಿಕ್ ಇಂದ HMT ಗೆ ಬರೋಕ್ಕೆ ೫೦೦ ರೂ ಕೇಳುತ್ತ ಇದ್ದರು. ಕೊನೆಗೂ ಶಂಕರ್ ಎರಡು ಆಟೋ ಮೀಟರ್ ಮೇಲೆ ೪೦ ರೂ ಅಂತ ಹೇಳಿ ಒಪ್ಪಿಸಿ ಹಿಡಿದನು. ಆಟೋಗಳು ಎರಡು ಬಂದವು. ಒಂದರಲ್ಲಿ ಶಾಲಿನಿ ಮತ್ತೆ ಆಕೆಯ ಫ್ರೆಂಡ್ಸ್ ಹೊರಟ್ಟರು. ಇನ್ನೊಂದು ಆಟೋದಲ್ಲಿ ಶಂಕರ ಹೊರಟ್ಟ.

ಸ್ವಲ್ಪ ದೂರ ಆಟೋಗಳು ಮುಂದೆ ಸಾಗಿದವು. ಶಂಕರ ಕೂತ್ತಿದ ಆಟೋ ಮೀಟರ್ ಆಫ್ ಆಗಿ ಹೋಯಿತು. ಇದ್ದಾನ ಗಮನಿಸಿದ ಶಂಕರ " ರೀ ಡ್ರೈವರ್ ಸಾಹೇಬರೇ , ಮೀಟರ್ ಆಫ್ ಆಗಿದೆ ನೋಡಿ "
"ಏನೋ ಪ್ರಾಬ್ಲಮ್ ಆಗಿದೆ ಅನಿಸುತ್ತೆ ಸಾರ್ , ಪರವಾಗಿಲ್ಲ ಬನ್ನಿ , ಇನ್ನೊಂದು ಆಟೋ ಮೀಟರ್ ನೋಡಿ ಕೊಡುವಿರಂತೆ"

"ಸರಿ ಸರಿ "

ಎರಡು ಆಟೋಗಳು ಶಂಕರನ ಮನೆ ಮುಂದೆ ಬಂದು ನಿಂತವು. ಶಂಕರ ಆಟೋ ಇಂದ ಇಳಿದು "ಶಾಲು ಆಟೋ ಚಾರ್ಜ್ ಎಷ್ಟು ಆಗಿದೆ ನೋಡಿ ಹೇಳು" ಅಂತ ಕೂಗಿ ಹೇಳಿದಿಯ.
"ಶಂಕರ್ ೪೦೦ ರೂ ಆಗಿದೆ "
"ವಾಟ್ ನಾನ್ಸೆನ್ಸ್ " ಅಂತ ಹೇಳುತ್ತಾ ಇನ್ನೊಂದು ಆಟೋ ಬಳಿಗೆ ಹೋದ , ಹೋಗಿ ನೋಡಿ "ಹುಫ್ಫ್ , ಶಾಲು ನೀನು ಮೀಟರ್ ಹಾಕಿದು ನೋಡ್ದ "

"ಇಲ್ಲ ಗಮನಿಸ ಲ್ಲಿಲ "

"ಒಹ್ ಎಂತ ಕೆಲಸ ಮಾಡಿದೆ , ಮೋಸ ಹೋದೆವು , ಇವಾಗ ನೋಡು ಅವರು ಹೇಳಿದೆ ರೇಟ್ " ಅಂತ joragi ಕೂಗುತ್ತ ಹೇಳಿದ .ಆಟೋದವರ ಕೆಳ ಮಟ್ಟದ ಭಾಷೆ ತಿಳಿದಿದ ಶಂಕರ್   ಜಗಳ ಆಡದೆ ಕೇಳಿದಷ್ಟು ಕೊಟ್ಟು , ಮೋಸ ಹೊಗಿದಕ್ಕೆ ಕೊರಗಿ ಸುಮ್ಮನೆ ಆದ . ಎಲ್ಲರು ಲಗೇಜ್ ಸಮೇತ ಮನೆ ಒಳ್ಳಗೆ ಹೋದರು.

ಬ್ಯಾಂಗಲೋರ್  ಅಂತ ಸಿಟಿ ಅಲ್ಲದೆ ಎಲ್ಲ ಕಡೆಯೂ ಈ ರೀತಿಯ ಮೋಸ ಇದೆ. ನಮ್ಮ   ಹುಷಾರಿನಲ್ಲಿ ನಾವು ಇರಬೇಕು ಅಷ್ಟೇ.