ಸುರಕ್ಷಿತವೇ ???? ಆಕೆ "ಗೋರಿಯೊಳಗೆ"

ಸುರಕ್ಷಿತವೇ ???? ಆಕೆ "ಗೋರಿಯೊಳಗೆ"

ಖಾಲಿಯಾದ ಕನಸುಗಳು 
ಬಿದ್ದು ಹೊರಳಾಡುವಾಗ
ಪ್ರೀತಿಸಲಿ ಹೇಗೆ 
ಆಗಸದ ಚಂದ್ರನನ್ನು,,,,,

ಬೆಳಕಿನೊಳಗೆ ಬೆಸೆದುಕೊಂಡ 
ಆ ಪುಟ್ಟ ಹುಡುಗಿಯ 
ಕೈ ಬೆರಳುಗಳು 
ಇನ್ನಷ್ಟು ನೆನಪಾಗುತ್ತಿವೆ ಇಂದು, 

ಬೆಳೆಯುವ ಹೃದಯದ 
ತಡ ಬಡ ಶಬ್ದ, ಕಿಟಾರನೆ ಕಿರುಚಿ, 
ರೋಡಿನಲ್ಲಿ ಬೆತ್ತಲೆಯಾಗಿ
ಸ್ಥಬ್ಧವಾದಾಗ !!!!!
ಹುಚ್ಚೆದ್ದು ಕುಣಿದ, 
ರೊಚ್ಚಿಗೆದ್ದು ದಣಿದ,
ನಕ್ಷತ್ರಗಳೇ,,,,,, ಎಲ್ಲಿ ಹೋದಿರಿ 
ಅವಳ ಕನಸುಗಳನು ಒಂಟಿಯಾಗಿ ಬಿಟ್ಟು ?

ಆ ಹುಡುಗಿ, ಕನಸ ತುಂಬಿಟ್ಟ
ಕಣ್ಣುಗಳ ಗುಡ್ಡೆಯಲಿ,
ಮರದ ಬೇರೊಂದು, 
ನಿಧಾನವಾಗಿ ಚುಚ್ಚುತ್ತಿದೆ.

ಸಾಯುವಾಗ ಅವಳ 
ಮೈಗಂಟಿದ ಬೆವರಿನ ವಾಸನೆಗೆ
ಅವಳ ಹೆಣವೂ ವಾಕರಿಕೆ 
ಬರುವಂತೆ ಬಿಕ್ಕುತ್ತಿದೆ,,,,,

ದೆಹಲಿಯ ಬೀದಿ ಬೀದಿಗಳಲ್ಲಿ 
ಅವಳ ಕನಸುಗಳು 
ಆಸರಗೆ ಕೈ ಚಾಚಿ ಕುಳಿತು,
ದಿನ ದಿನ ಕ್ಷಯಿಸುತ್ತಿವೆ,

ದಿಗಂತಗಳ ತುದಿಯಲ್ಲಿ 
ನಿಂತ, ದಷ್ಟ-ಪುಷ್ಟ ಧರ್ಮಗಳೇ 
ಆಕೆಗೂ ಚಂದ್ರನನ್ನು ಪ್ರೀತಿಸಲು ಅವಕಾಶ ಕೊಡಿ,,,,,,,,

Comments

Submitted by naveengkn Sat, 06/06/2015 - 20:50

In reply to by kavinagaraj

ಯೆಸ್,,,,,, ಸತ್ಯ‌ ಕವಿಗಳೇ, ಅಧರ್ಮದ‌ ಅಟ್ಟಹಾಸ‌, ಧರ್ಮವನ್ನು ತಪ್ಪಾಗಿ ಅರ್ತಮಾಡಿಕೊಂಡವರ‌ ಅಟ್ಟಹಾಸ‌,,,,,,,,,