ಸ್ನೇತನದ ಸ್ನೇಹ ಸ್ವರ್ಣ

ಸ್ನೇತನದ ಸ್ನೇಹ ಸ್ವರ್ಣ

...... ಸ್ನೇಹಿತನದ ಸ್ನೇಹ ಸ್ವರ್ಣ....‌‌

ಫ್ರೆಂಡ್ಸ್ ಮೇಲೆ ವಿಶ್ವಾಸವಿಟ್ಟು ... ಎಸ್.ಎಂ.ಎಸ್. ಗಳೊಂದಿಗೆ ಗ್ರೀಟಿಂಗ್ಸ್ ಕಳಿಸ್ತೀವಿ..... ಅನುಕೂಲವಾದರೇ ಒಂದು ಕಪ್ಪು ಕಾಫಿ, ಇಲ್ಲದಿದ್ದರೇ ಅಷ್ಟು ಮಾತು ಹರಟೆ ತಮಾಷೆಯಾಗಿ ಟೈಂಪಾಸ್ ಮಾಡ್ತೀನಿ 'ಫ್ರೆಂಡ್ಸ್ ಡೇ' ನ ಎಂಜಾಯ್ ಮಾಡಬೇಕಾದರೆ ಅನೇಕ ಮಾರ್ಗಗಳಿವೆ ಆದರೆ ನಮ್ಮ ಸುತ್ತಮುತ್ತಲೂ ಇರುವ ಸ್ನೇಹಿತರೊಂದಿಗೆ ನಾವು ಹೇಗೆ ಇರುತ್ತಿದ್ದೀವೋ ಒಂದು ಸಾರಿಯಾದರೂ ನಾವು ಮನನ ಮಾಡಿಕೊಳ್ಳುತ್ತಿದ್ದೀವಾ? ನಿಜವಾದ ಸ್ನೇಹ ಉಳಿಸಬೇಕಾದರೆ ನಾವು ಏನೇನು ಪಾಲಿಸಬೇಕೋ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ.......

ಹೇ! ....ಅವನು ಸೆಲ್ಫಷ್ ಕಣೋ! ಬಿಟ್ಟು ಬಿಡು ಅಂದ್ರೆ, ಹೋಗಲಿ ಬಿಡೋ ಫ್ರೆಂಡ್ ಅಲ್ಲಾ..... ಅಂತಾರೆ, ಕೆಲವರು ಫ್ರೆಂಡ್ಸ್ ಎಂದರೇ ಯಾರನ್ನೂ ಲೆಕ್ಕಿಸುವುದಿಲ್ಲ‌. ಸ್ನೇಹಿತನಲ್ಲಿ ಕೆಲವು ಲೋಪ ದೋಷಗಳಿದ್ದರೂ ಕೆಲವರು ನನಗೆ ಫ್ರೆಂಡ್ಸ್ ಇರಬೇಕು ಅಂತ ಏನೇ ಅಡ್ಡಿ ಬಂದರೂ ಗೆಳೆತನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ನಿಜವಾದ ಫ್ರೆಂಡ್ಸ್ ಶಿಪ್ ಎಂದರೆ ಇದೇನೆ.

ಸ್ನೇಹಿತರಿಲ್ಲದ ಜೀವನ ಓಯಾಸಿಸ್ ಇಲ್ಲದ ಮರಳು ಗಾಡಿ ನಂತೆ. ಒಬ್ಬ ವೇದಾಂತಿ ಬೆಟ್ಟ ಮತ್ತು ಗುಹೆಗಳೊಂದಿಗೆ ಸ್ನೇಹ ಬೆಳೆಸುತ್ತಾನೆ. ಬೆಟ್ಟದ ಮುಂದೆ ನಿಂತು ಕೂಗಿದರೆ ಅದು ಪ್ರತಿಧ್ವನಿಸುತ್ತದೆ. ಒಳ್ಳೆಯ ಸ್ನೇಹಿತನ ಸ್ಪಂದನೆಯೂ ಸಹ ಅಷ್ಟೇ ಸಹಜವಾಗಿರುತ್ತದೆ. ನಿನ್ನ ಹಿಂದೆ ನಾನಿದ್ದೇನೆ ಎಂಬ ಆಶ್ವಾಸನೆ ನೀಡುವವನೇ ಒಳ್ಳೆಯ ಗೆಳೆಯ.

ಪಾರ್ಲಿ ಎಂಬ ಮನೋ ವಿಶ್ಲೇಷತನ ನಿರ್ವಚನೆಯಲ್ಲಿ ಹೇಳಬೇಕಾದರೆ 'ನಿಜವಾದ ಸ್ನೇಹಿತನೆಂದರೆ ಕಷ್ಟದಲ್ಲಿ ಸಂತೈಸುವುದು. ನಮ್ಮ ಗೆಲುವನ್ನು ಅವನ ಗೆಲುವಿನ ಹಾಗೆ ಭಾವಿಸಿ ಸಂತೋಷವನ್ನು ಹಂಚಿಕೊಳ್ಳುವನು. ಸಮಸ್ಯೆಗಳು ಎದುರಾದಾಗ ಒಬ್ಬ ಕೌನ್ಸಲರ್ ನಂತಿರುವವನು. ಏನು ಮಾಡಲು ತೋಚದಂತ ಸಮಯದಲ್ಲಿ ಮಾರ್ಗದರ್ಶನ ನೀಡುವವನು. ಭಯ ಪಡಿಸಬೇಡ ನಾನಿದ್ದೀನೆ ಎಂದು ಧೈರ್ಯ ಹೇಳುವವನು.

ಮನುಷ್ಯನಿಗೆ ಅಗತ್ಯಗಳಿಗೆ ತಕ್ಕಂತೆ ಸ್ನೇಹಿತರು ಸ್ನೇಹವನ್ನು ಬಹಳ ಮುಖ್ಯ ಅಂತ ಹೇಳ್ತಾರೆ. ಮನೋಶಾಸ್ತ್ರಜ್ಞ ಹೆನ್ರಿ ಮೋರ್ರೆ ಎಂಬವವರು ಬಾಲ್ಯದಿಂದ ಬೆಳೆಯುವ ಕ್ರಮದಲ್ಲಿ ಯೌವನದಲ್ಲಿ ತಲೆ ಎತ್ತುವ ಮಾನಸಿಕ ಒತ್ತಡಕ್ಕೆ ಸ್ನೇಹತ್ವದ ಅಗತ್ಯ ಮತ್ತುಷ್ಟು ಮುಖ್ಯ ಎಂತಲೂ ಹೇಳುತ್ತಾರೆ. ಮಾನಸಿಕ ತಜ್ಞರು. ಸ್ನೇಹಿತರು ಒಬ್ಬರಿಂದ ಒಬ್ಬರು ಎಷ್ಟೋ ವಿಷಯಗಳನ್ನು ಕಲಿತುಕೊಳ್ಳಬಹುದು. ತಿಳಿದುಕೊಳ್ಳಬಹುದು. ಒಬ್ಬರಿಗೊಬ್ಬರು ಆದರ್ಶವಾಗಿ ನಿಂತು ಮನೋವಿಕಾಸಕ್ಕೆ ಕಾರಣನಾಗುತ್ತಾನೆ. ಸಹಾಯಕರಾಗುತ್ತಾನೆ.

'ಯೌವನ ಸ್ನೇಹದಲ್ಲಿ ಮೂರು ಹಂತಗಳಿವೆ'. ಎಂದು ಅಡರ್ಸನ್ ಎಂಬ ಮನೋವಿಜ್ಞಾನಿ ಹೇಳಿದ್ದಾರೆ. ಮೊದಲ ದಿಸೆಯಲ್ಲಿ ವ್ಯಕ್ತಿಗತ ಸಂಬಂಧ ಇರುವುದಿಲ್ಲ.ಬೆರತು ಮಾಡುವ ಕೆಲಸದ ಮೇಲೆ ಆಧಾರಪಟ್ಟಿರುತ್ತದೆ. ಹದಿನೇಳು ವರ್ಷ ವಯಸ್ಸಿನ ಆನಂತರ ಪ್ರಾರಂಭವಾಗುವ ಎರಡನೇ ಹಂತ ನಂಬಿಕೆ ಮೇಲೆ ಆಧಾರವಾಗಿರುತ್ತದೆ. ಮೂರನೇ ದಿಶೆ ಆನಂತರ ನಮ್ಮ ಸಾಮಾಜಿಕ ಭದ್ರತೆಯ ಮೇಲೆ ಆಧಾರವಾಗಿರುತ್ತದೆ.

* ಸ್ನೇಹ ನಿರಂತರವಾಗಿ ಬೆಳೆಯುವಂತೆ ವರ್ತಿಸಬೇಕು. ಸ್ನೇಹ ಮುರಿಯುವ ಮನಸತ್ವ ನಮ್ಮಲ್ಲಿದ್ದರೆ ಅದನ್ನು ನಾವು ಗುರುತಿಸಿಕೊಂಡು ನಮ್ಮಲ್ಲಿ ನಾವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

* ಸಣ್ಣ ಸಣ್ಣ ವಿಷಯಗಳನ್ನು ಕುರಿತು ತಲೆಕೆಡಿಸಿಕೊಳ್ಳಬೇಡಿ. ಸ್ನೇಹಿತ, ನಿಮಗೆ ತಿಳಿಸದೇ ಸಿನಿಮಾಗೆ ಹೋದರೇ ಇವನೆಷ್ಟು ಸ್ವಾರ್ಥಿ ಸೆಲ್ಪಿಷ್ ಅಂದುಕೊಳ್ಳಬೇಡಿ.

* ವಿಮರ್ಶಿಸಿ ತಪ್ಪುಗಳನ್ನು ತಿದ್ದುವುದು ಸ್ನೇಹದ ಒಂದು ಭಾಗವೇ ಆದರೂ ಅದೇ ಕೆಲಸದಂತೆ ಸದಾ ತರ್ಕ, ವಿಮರ್ಶೆ ಬೇಡ.

*ವಿಮರ್ಶೆ ವಯಸ್ಸಿನಲ್ಲಿ ಮುಳ್ಳಿನಂತೆ ಚುಚ್ಚದಂತೆ ಹೇಳುವ ಮಾತುಗಳು ಹಿತವಾಗಿ ಇರುವಂತೆ ಎಚ್ಚರವಹಿಸಬೇಕು.

* ಒಬ್ಬ ಸ್ನೇಹಿತನ ಲೋಪದೋಷಗಳನ್ನು ಮತ್ತೊಬ್ಬ ಸ್ನೇಹಿತನ ಮುಂದೆ ಪ್ರಸ್ತಾಪ ಮಾಡದಿರುವುದು ಒಳ್ಳೆಯದು.

* ಸ್ನೇಹಿತನಲ್ಲಿರುವ ಸದ್ಗುಣಗಳನ್ನು ಮೆಚ್ಚಿಕೊಂಡು ಇತರ ಸ್ನೇಹಿತರ ಮುಂದೆ ಹೇಳಿ ಹಂಚಿಕೊಳ್ಳುಬಹುದು. ಹಾಗಂತ ಯಾವಾಗಲೂ ಅದನ್ನೇ ಹೋಗಳುತ್ತಾ ಇರುವುದು ಬೇಡ.

* ಸ್ನೇಹಿತನ ಮಾತಿನಲ್ಲಿ ವರ್ತನೆಯಲ್ಲಿ ನಿಗೂಢ ಅಪಾರ್ಥಗಳಿಯೇನೋ ಎಂಬ ಸಂಶಯವನ್ನು ವ್ಯಕ್ತಗೊಳಿಸಬಾರದು. ಉದಾಹರಣೆಗೆ ನಿಮಗೆ ಬಹುಮಾನವಾಗಿ ನೀಡಿದ ಪುಸ್ತಕದ ಬೆಲೆಯನ್ನು ಕುರಿತು ನಾವೆಷ್ಟು ಮುಖ್ಯವೆಂದು ಈ ಪುಸ್ತಕವನ್ನು ನನಗೆ ಕಾಣಿಕೆಯಾಗಿ ಕೊಟ್ಟಿದ್ದಾನೆ ಎಂದು ಯೋಚಿಸಬೇಡಿ. ಕಾಣಿಕೆ ಅದೇನನ್ನೆ ನಿಡಿದ್ದರು ಅದರ ಬಗ್ಗೆ ಕಾಮೆಂಟ್ಸ್ ಬೇಡ. ಸ್ನೇಹದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಬಹಳ ಮುಖ್ಯ ಸ್ನೇಹಿತರೇ.......

Comments