ಹಾಗೇ ಸುಮ್ಮನೆ

ಹಾಗೇ ಸುಮ್ಮನೆ

ಇವರು ಡಾ.ವೆಂಕಟಲಕ್ಷ್ಮಮ್ಮ. ಕಡೂರು ತಾಲೂಕಿನ ತಂಗಲಿ ಗ್ರಾಮ.  ಮೈಸೂರು ಶೈಲಿಯ ಭರತನಾಟ್ಯವನ್ನು ವಿಶ್ವವ್ಯಾಪಿಯಾಗಿಸಿದ ಮಹಾನ್ ಕಲಾವಿದೆ. ಇವರ ಗುರು ಶ್ರೀಲಂಕಾ ಮೂಲದ ಜಟ್ಟಿತಾಯಮ್ಮನವರು.

ತಮ್ಮ ಅಪೂರ್ವ ನಾಟ್ಯ ಪ್ರತಿಭೆಯಿಂದ ವಿಶ್ವಖ್ಯಾತಿ ಪಡೆದು, ಮೈಸೂರು ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದಲೇ ನಾಟ್ಯ ವಿಶಾರದೆ ಎಂದು ಕರೆಸಿಕೊಂಡರು. ಭಾರತ ಸರ್ಕಾರ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದೆ. ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿದೆ. ಇಂತಹ ಅಭಿಜಾತ ಕಲಾವಿದೆತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅಂದು ಆಕೆಯ ಅಂತ್ಯ ಸಂಸ್ಕಾರಕ್ಕೆ ಯಾವ ಕಲಾವಿದರೂ ಬರಲೇ ಇಲ್ಲ!

Comments

Submitted by nageshamysore Fri, 08/30/2013 - 01:27

ಬಾಲು ಅವರೆ, ಮರೆತ / ನಿರ್ಲಕ್ಷಿಸಿದ ಮಹನೀಯರ ಕುರಿತು ಲೇಖನ ಸೇರಿಸುತ್ತಿದ್ದೀರ -ಅಭಿನಂದನೆಗಳು. ಸಾಧ್ಯವಿರುವ ಕಡೆ ಸ್ವಲ್ಪ ಹೆಚ್ಚು ವಿವರ ಸೇರಿಸಿದರೆ, ಹೆಚ್ಚೆಚ್ಚು ಜನರು ಈ ಮೂಲಕವಾದರೂ ಅವರ ಬಗ್ಗೆ  ತಿಳಿಯುವಂತಾಗುತ್ತದೆ (ಎಂ.ಎಸ್. ರಂಗಾಚಾರ್ಯರ ಲೇಖನದ ಹಾಗೆ). ಸಾಧ್ಯವಾದರೆ ಆ ನಿಟ್ಟಿನಲ್ಲಿ ತುಸು ಗಮನ ಹರಿಸಿ.