ಅತಿಥಿ ದೇವೋ ಭವ

ಅತಿಥಿ ದೇವೋ ಭವ

ಬರಹ

ನನ್ನದೇ ಜಾಗದಲ್ಲಿ
ನಿನಗೊಂದು ಮನೆ
ಬಾ ಬಾರೋ ಅತಿಥಿ
(ಅತಿಥಿ ದೇವೋ ಭವ)
ಚೆನ್ನಾಯಿತೆ ಜಾಗ?
ಹೇಳು , ಇನ್ನೇನು ಬೇಕೀಗ?
ಓಹೋ!
ನೀನಿರುವ ಜಾಗ ಮಾತ್ರ
ನಿನ್ನದಾಗಬೇಕೆ, ಸರಿ
ನಾವು ನೂರು ನೀನೊಬ್ಬ
ಭಾರವಲ್ಲ, ಹೋದರೆ ಹೋಯ್ತು
ನಿನಗೆ ಇರಲಿ ಜಾಗ.
(ಅತಿಥಿ ದೇವೋ ಭವ)
ಏನೆಂದೆ!
ನಿನ್ನವರನು
ಕರೆತರುವೆನೆಂದೆಯಾ
ನಿನ್ನ ಸ್ಥಳ ನಿನ್ನಿಷ್ಟ
ಅದಕೇಕೆ ನನ್ನಪ್ಪಣೆ?-----
ಬಾ ಅತಿಥಿ ಈ ದಿನ
ಹಬ್ಬ ಮನೆಯಲ್ಲಿ
ಕರೆ ತಾ ನಿನ್ನವರನು-------
ಸಂತೋಷ ಬಂದುದಕ್ಕೆ
ಇದೇನು ನಿಮ್ಮವ
ನಮ್ಮಲೇ ಬೆರೆತಿರುವ
ಇರಲಿ ಬಿಡು
ನಾವು ನೂರು ಅವನೊಬ್ಬ
ನಮಗೆ ಭಾರವಲ್ಲ
(ಅತಿಥಿ ದೇವೋ ಭವ)
----------------------------
ಮುಂದಿನದು ಪ್ರಶ್ನೆ
ಅದಕುತ್ತರ
ಕಣ್ಣೆದುರಿಗೆ
ಕಣ್ ಪಾಪೆ ಮುಚ್ಚಲಾರೆ
ಇಂದು ಭಾರತ
ಭಾರತದ ಭಾರತಿ ಬೇಡುತಿಹಳೆ
ರಕ್ತ ತರ್ಪಣ?