ಅತೀ ಸಣ್ಣ ಹನಿಗಳ ಸೊಗಡು !

ಅತೀ ಸಣ್ಣ ಹನಿಗಳ ಸೊಗಡು !

ಕವನ

ಕಾಮಾತುರನ

ಪ್ರಥಮ ಚುಂಬನಕೇ

ದಂತ ಭಗ್ನವು !

*

ಹಾಸ್ಯಗಾರನ

ಹೃದಯದೊಳಗಿದೆ

ವೇದನೆ ಕುಂಭ ! 

*

ಲಂಚಾಸುರನ

ಮನವು ಬೇಕಾದಷ್ಟು

ನುಂಗುವ ಹಾವು ! 

*

ಕನಸುಗಳು

ಇರಬೇಕು ನಿಜವು

ನನಸಿನಲಿ ! 

*

ರಾತ್ರಿಯಾಯಿತೋ 

ಪ್ರೀತಿ ಜೊತೆ ,ನಲ್ಲೆಗೆ

ವಾಂತಿಯ ಭಯ !

*

ಸ್ವಾರ್ಥಗಳೆಲ್ಲ,

ನಿಸ್ವಾರ್ಥ ಸಾಯುತ್ತಲೇ

ವಿಜ್ರಂಭಿಸಿವೆ!

*

ನೀರ ಗುಳ್ಳೆಯು

ಹುಟ್ಟುತ್ತಲೆ ಒಡೆಯೇ

ಕನಸು ಚೂರು ! 

*

ಆಲದ ಮರ

ಬಿಳಲಿನ ರೀತಿಯೇ 

ವಿರಹವಯ್ಯಾ! 

*

ಅಲ್ಲೆಲ್ಲೋ ಕೈಯ

ಬಳೆಯ ಸದ್ದು ಕೇಳೆ

ರಾತ್ರಿ ಎಚ್ಚರ ! 

*

ನನ್ನ ಬೋಳಾದ

ನೆತ್ತಿಯಂತೆ, ಮರವೂ

ಚಿಗುರಲಿಲ್ಲ ! 

*

ದೊಡ್ಡವರೆಲ್ಲ

ಏನು ಬರೆದಿಟ್ಟರೂ

ಕವಳವಂತೆ ! 

*

ಮಾತೆ ಚಿಪ್ಪಿನ

ಒಳಗೊಳಗೆ ಅವಿ

ತಿರುವ , ಮುತ್ತು ! 

*

ಬಹು ಸುಂದರ

ವಸ್ತುವೇ , ಕೆಲವೊಮ್ಮೆ

ವಿಷವಾಗುತ್ತೆ ! 

*

ಕಾವ್ಯವೆಂದರೆ

ಸಮುದ್ರದಾಳದಲ್ಲಿ

ಸಿಗುವ ಮುತ್ತು ! 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ:ಇಂಟರ್ನೆಟ್ ತಾಣ

ಚಿತ್ರ್