ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು
ಜಪಾನಿನ ಪಾಯಿಖಾನೆಗಳು ಇಡಿ ಜಗತ್ತಿನಲ್ಲೆ ತಾಂತ್ರಿಕವಾಗಿ ಅತ್ಯಂತ ಉನ್ನತಮಟ್ಟದವು ಎಂಬುದು ನಿಮಗೆ ಗೊತ್ತೆ?
ಜಪಾನಿನವರು ತಂತ್ರಜ್ಞಾನದಲ್ಲಿ ಬಹಳ ಮುಂದಿರೋದ್ರಿಂದ ಇದೇನೂ ಸೋಜಿಗದ ವಿಚಾರವಲ್ಲ ಎಂದು ನೀವು ಹೇಳಬಹುದು. ಆದರೆ ಇವರ ಪಾಯಿಖಾನೆಯ ತಂತ್ರಜ್ಞಾನ ವಿಶೇಷತೆಯ ಬಗ್ಗೆ ಕೇಳಿದ್ದೀರೇನು? ಓದಿ:
ವಾಶ್ಲೆಟ್ ಎಂದು ಕರೆಯಲಾಗುವ ಇವುಗಳು ನೀಡುವ ಸವಲತ್ತುಗಳಲ್ಲಿ , ತಾಂತ್ರಿಕತೆಯಲ್ಲಿ ಅತ್ಯಂತ ಉನ್ನತಮಟ್ಟದವಂತೆ. ಈ ಕಮೋಡುಗಳು ಅತ್ಯಂತ sophisticated ಪಾಯಿಖಾನೆಗಳೆಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಕೂಡ ಸೇರಿವೆಯಂತೆ! ಇವನ್ನು ಜನಪ್ರಿಯವಾಗಿ "ಜಪಾನೀಸ್ ಹೈ ಟೆಕ್ ಟಾಯ್ಲೆಟ್ಟುಗಳೆಂದೇ ಕರೆಯಲಾಗುತ್ತವೆಯಂತೆ. ಏನು ಈ ಪಾಯಿಖಾನೆಗಳ ಇಷ್ಟೊಂದು ಅಂತಹ ವಿಶೇಷತೆ? - ಈ ವಾಶ್ಲೆಟ್ಟುಗಳಲ್ಲಿ ಕುಳಿತವರಿಗೆ ಬೆಚ್ಚಗೆ ಮಾಡುವ ಸವಲತ್ತು, ಮಸಾಜು, ಹಾಗೂ ತೊಳೆದುಕೊಳ್ಳೋದಕ್ಕೆ ಬೆಚ್ಚಗಿನ ನೀರಿನ ಪ್ರವಾಹ (jet ) ಮತ್ತು ಆಟೊಮ್ಯಾಟಿಕ್ಕಾಗಿ ತೆರೆದುಕೊಳ್ಳುವ ಕಮೋಡು ಬಾಗಿಲು, ಆಟೊಮ್ಯಾಟಿಕ್ಕಾಗಿ ಫ್ಲಶ್ ಆಗೋದು, ಇವಲ್ಲದೇ ಇದನ್ನು ಚಾಲನೆಗೊಳಿಸೋದಕ್ಕೆ ರಿಮೋಟು ಕಂಟ್ರೋಲು ಕೂಡ ಇವೆಯಂತೆ
ಅಷ್ಟೇ ಅಲ್ಲ, ಹಲವು ಇಂತಹ ವಾಶ್ಲೆಟ್ಟುಗಳ ಮಾಡೆಲ್ ಗಳು ಸಂಪೂರ್ಣ ರೂಮಿಗೆ ಏರ್ ಕಂಡೀಶನ್ ವ್ಯವಸ್ಥೆಯೊಂದಿಗೂ ಬರುತ್ತದಂತೆ!
ಎಲ್ಲದಕ್ಕಿಂತಲೂ ಮಜವಾದ ಈ ಕೆಳಗಿನ ಪೋಸ್ಟರ್ ನೋಡಿ. ಇದು ಇಂತಹ ಒಂದು ವಾಶ್ಲೆಟ್ (ಆಕಾ ಹೈ ಟೆಕ್ ಕಮೋಡು)ಗೆ ಜಪಾನಿನಲ್ಲಿ ಮೂಡಿ ಬಂದ ಜಾಹಿರಾತು
(ಇಂಗ್ಲಿಷ್ ವಿಕಿಪೀಡಿಯದಲ್ಲಿ ಇದು 'ನಿಮಗಿದು ಗೊತ್ತೆ?' ಕಾಲಂನಲ್ಲಿ ಮೂಡಿಬಂದಿತ್ತು. ಅದರ crude ತರ್ಜುಮೆ, ಈ ಲೇಖನ. ಚಿತ್ರಗಳ ಕೃಪೆ [:http://en.wikipedia.org|ವಿಕಿಪೀಡಿಯದ್ದು])
ಮತ್ತಷ್ಟು ಮಾಹಿತಿ:
[:http://en.wikipedia.org/wiki/Japanese_toilet#Japanese_bidets| ಜಪಾನೀಸ್ ಪಾಯಿಖಾನೆಯ ಬಗ್ಗೆ ವಿಕಿಪೀಡಿಯ ಲೇಖನ]