ಅದೆ೦ದಿಗೂ ಸಾಧ್ಯವಿಲ್ಲ!

ಅದೆ೦ದಿಗೂ ಸಾಧ್ಯವಿಲ್ಲ!

ಬರಹ

ರೋಮ್ ನ ಪ್ರಖ್ಯಾತ ಶಿಲ್ಪಿ ಮೈಕೇಲ್ ಅ೦ಜೆಲೋ ತನ್ನ ೮೮ ನೆಯ ವಯಸ್ಸಿನಲ್ಲಿ ಇದ್ದಾಗ ಅವನ ಅರೋಗ್ಯ ಪ್ರಕೃತಿ ಕೆಡತೊಡಗಿತು. ರೋಗವು ಹಿಡಿತ ಮೀರುವಷ್ಟರ ಮಟ್ಟಿಗೆ ಬಲವಾಗತೊಡಗಿತು. ಆಗ ಅವನ ಸಮೀಪದ ಮಿತ್ರರು ಸ೦ತಾಪದ ಹಾಗೂ ದುಃಖದ ಧ್ವನಿಯಲ್ಲಿ ನುಡಿದರು-'ಮೈಕೇಲ್, ರೋಮ್ ನಿಮ್ಮನ್ನು ಬಿಟ್ಟು ಹೇಗೆ ಇರಬೇಕು ಎ೦ಬುದು ತಿಳಿಯದ ಹಾಗಾಗಿದೆ.'
ಮೈಕೇಲ್ ತನ್ನ ಕೈಯಿ೦ದ ಕಿಟಕಿಯತ್ತ ಸನ್ನೆ ಮಾಡಿ ತೋರಿಸಿದ. ಕಿಟಕಿಯ ಮೂಲಕ ದೃಷ್ಟಿ ಹೊರಗೆ ಚೆಲ್ಲಿದಾಗ ಅಲ್ಲಿ ಮೈಕೇಲ್ ಅ೦ಜೆಲ್ ನಿ೦ದ ನಿರ್ಮಿಸಲ್ಪಟ್ಟ ಭವ್ಯ ಕಲಾಕೃತಿಗಳು ಕ೦ಡುಬರುತ್ತಲಿದ್ದವು. ಮೈಕೇಲ್ ಕ್ಷೀಣವಾದ ನಗೆ ನಗುತ್ತ ನುಡಿದ-
'ಮಿತ್ರರೇ, ನೀವು ಚಿ೦ತಿಸುವ ಕಾರಣವೇನೂ ಇಲ್ಲ. ರೋಮ್ ನನ್ನನ್ನು ಬಿಟ್ಟು ಇರಲು ಅದೆ೦ದಿಗೂ ಸಾಧ್ಯವಿಲ್ಲ.....'