ಅನುಮಾನವೇ ಇಲ್ಲ...

ಅನುಮಾನವೇ ಇಲ್ಲ...

ಕವನ

ಅಡಿಯಿಟ್ಟು ನಾ ಹೊರಟೆ

ಗುಡಿಯನ್ನು ನೆಪ ಮಾಡಿ

ನಡೆಯುತಿರೆ ಮನವೆಲ್ಲ ನಿನ್ನ ಕಡೆಗೆ

ತಡೆಯಿರದ ಜಾಗದಲಿ

ಕಡೆಗಣ್ಣ ನೋಟದಲಿ

ಹುಡುಕುತಿರೆ ನೀ ಕಂಡೆ ಬಂದೆ ಬಳಿಗೆ

 

ಅನುಮಾನವೇ ಇಲ್ಲ

ಅನುಸರಿಸಿ ನೀ ಬರುವೆ

ಮನವಿಂದು ನುಡಿದಿತ್ತು ನನ್ನ ಕೂಗಿ

ಮನದೊಳಗೆ ನೀ ಸೇರಿ

ಕನಸಿಗದು ರಹದಾರಿ

ತನುವಲ್ಲಿ ಸಿಹಿ‌ ನಡುಕ ನೋಟ ತಾಗಿ

 

ಚೈತ್ರದಲಿ ಭೇಟಿಯಲಿ

ಮೈಮನವ ಸೆಳೆದಿರುವೆ

ಧೈರ್ಯದಲಿ ಹಡೆದವರ ಕೇಳಲಿರುವೆ

ಕೈ ಸನ್ನೆ ಏಕಾಗಿ

ಜೈ ಎಂದೆ ಒಲವಿಂಗೆ

ಬೈಯ್ಯದಿರು ನಾನೀಗ ಹೋಗಿ ಬರುವೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಅಂತರ್ಜಾಲ ತಾಣ

ಚಿತ್ರ್