ಅಮ್ಮ ದಯೆ ತೋರು
ಕವನ
ಭಜಿಸಿ ನವರಾತ್ರಿ ನವದುರ್ಗೆಯರಾರಾಧನೆ
ಚರಣದಿ ಶರಣಾಗಿ ನಿವೇದನೆ||ಪ||
ಒಲಿದು ನೀನಿಂದು ಸಂಕಷ್ಟ ದೂರಾಗಿಸು
ಸಂತೋಷ ನೆಮ್ಮದಿಯ ವರವಾಗಿಸು||ಅ.ಪ||
ನಾ ಸೋತು ಬಂದಿರುವೆ ನಿನ್ನಯ ಬಳಿಗೆ
ನೀನೀಗ ದಯೆದೋರು ಈ ಬಾಳಿಗೆ
ಬ್ರಹ್ಮಾಂಡ ನೀನು ಬರಿ ಅಣುವೊಂದು ನಾನು
ನಿನ್ನಲಿ ನಾ ಶರಣಾದೆನು
ಅಮ್ಮ ದಯೆ ಬಾರದೇನು?||೧||
ನೀನೀಗ ಕೈ ಬಿಡಲು ಕಾಯುವರಾರು
ಕರ ಜೋಡಿ ಕಾದಿರುವೆ ನಿನ ಕಾಣಲು
ಮತಿಯಾಗು ನೀನು, ಗತಿ ನೀಡು ನೀನು
ನಿನ್ನಲಿ ನಾ ಶರಣಾದೆನು
ಅಮ್ಮ ದಯೆ ಬಾರದೇನು?
ತಾಯೆ ಶಂಕರಿಯೆ ಜಗದಂಬ ಪರಮೇಶ್ವರಿ
ದುರಿತವ ಕಳೆ ಬೇಗ ಮಹೇಶ್ವರಿ
ನಿನ್ನ ಭಕ್ತರನು ಕಾಪಾಡು ಕರುಣಾಕರಿ
ನಮ್ಮಲ್ಲಿ ಕೃಪೆ ಇರಲಿ ಶಿವ ಶಂಕರಿ||೨||
(ನಿನ್ನ ಸವಿ ನೆನಪೆ ಮನದಲ್ಲಿ... ಧಾಟಿಯಲ್ಲಿ)
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್