ಅಲ್ಲಇಲ್ಲ
ಕವನ
ಕವನ ಬರಿಯೋರೆಲ್ಲ ಕವಿಗಳಲ್ಲ
ಗುಂಡು ಹಾಕೋರೆಲ್ಲ ಕುಡುಕರಲ್ಲ
ವಯಸ್ಸಾದೊರೆಲ್ಲ ದೊಡ್ದೋರಲ್ಲ
ಹುಡುಗೀರ ಹಿಂದೆ ಬೀಳೋರೆಲ್ಲ ಪಟಿಂಗರಲ್ಲ
ನೀನ್ ಏನು ಚಿಂತೆ ಮಾಡಬೇಡ
ಯಾಕಂದ್ರೆ ನಾನಿನ್ನೂ ನಿನ್ನ ಪ್ರಿಯತಮನೂ ಅಲ್ಲ ಗಂಡಾನೂ ಅಲ್ಲ
ನೇರ ಮಾತು ಅಡೋರೆಲ್ಲ ಒಳ್ಳೆಯವರಂತೆ ಕಾಣೋದಿಲ್ಲ
ಒಳ್ಳೆಹೃದಯ ಒಳಗೆ ಇದ್ರೂ ತೋರಿಸೋಕ್ ಸಮಯ ಬರಬೇಕಲ್ಲ ?
ದೇಶದಾಚೆ ಇರೋರೆಲ್ಲ ನೀತಿ ನಿಯಮ ಬಿಟ್ಟೋರಲ್ಲ
ತಿರುಗೋ ಭೂಮಿ, ಕಳೆಯೋ ಘಳಿಗೆ ಏನು ಮಾಡಿದ್ರು ನಿಲ್ಲೋದಿಲ್ಲ
ನೀನ್ ಸಂದೇಹಾ ಪಡಬೇಡ
ಸಂದೇಹ ಆರೋಗ್ಯಕ್ಕೆ ಒಳ್ಳೇದಲ್ಲ
ಸೂಚನೆಃ ಇದು ನನ್ನ ಫೇಸ್ ಬುಕ್ ಸ್ನೇಹಿತ ಪಕ್ಕಾ ಲೋಕಲ್ ಸ್ವಲ್ಪ ಪಾಗಲ್ ಅವರ ಬರಹ