ಆರಲು ಹಾಕಿದ ಬಟ್ಟೆಗಳು...!

ಆರಲು ಹಾಕಿದ ಬಟ್ಟೆಗಳು...!

ಕವನ

ಆರಲು ಹಾಕಿದ ಬಟ್ಟೆಗಳಂತೆ

ನಮ್ಮ ಬದುಕು..

 

ಕೊಳೆಯಾಗದಂತೆ ನೋಡಿಕೊಳ್ಳಬೇಕು..

ಬಹು ಜತನದಿಂದ

ಕಾಪಾಡಿಕೊಳ್ಳಬೇಕು..

 

ಅವವರು ಹೇಳಿದರು ನೀನು ಚಂದವೊ ಚಂದ..

ನಿಜವಾದ ಚಂದ ಇರುವುದು ಒಳಗಿದ್ದಾಗ ಆನಂದ 

ಮತ್ತೆ ಮಸುಕಾಾಯಿತು 

ಮಧ್ಯ ವಯಸ್ಸಾಯಿತು 

 

ಇನ್ನೇನು ಹಾಗೂ ಹೀಗೂ 

ಬಟ್ಟೆಗೆ ವಯಸ್ಸಾಯಿತು..

ಮುಪ್ಪೆಂಬ ಕರ್ಮ

ಅಡರಿಯಾಯಿತು...

 

ಬದುಕು ನೋವು

ನಲಿವಿನ ಸಂಗಮ 

ನೀ ಇದ್ದು ಬಿಡು

ನಿನ್ನ ಪಾಡಿಗೆ  

ನಿನ್ನೊಳಗೆ ಇರುವ

ಓರ್ವ ಜಂಗಮ...

 

ಅವನ ನಂಬಿದರೆ ನಿನಗೆ ಭಯವಿಲ್ಲಾ

ಸಾಕ್ಷಿಯಾಗಿರು

ಈ ಲೋಕದ ಆಗುಹೋಗುಗಳಿಗೆಲ್ಲಾ..

-ಗಣೇಶ್ ವೈದ್ಯ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್