ಆರ್ಕುಟ್ಟಿಗರೇ ಎಚ್ಚರಿಕೆ.

ಆರ್ಕುಟ್ಟಿಗರೇ ಎಚ್ಚರಿಕೆ.

Comments

ಬರಹ

ಯಾರದೇ ಫ್ರೊಫೈಲ್ ನಲ್ಲಿ ಕಾಣೋ

CHECK MY PROFILE FOR FREE MOBILE RECHARGE ಅಥವಾ SEE MY SEXY PHOTOS CLICK HERE

ಅನ್ನೋದನ್ನು ದಯವಿಟ್ಟು ಯಾರೂ ಪ್ರಯತ್ನಿಸಬೇಡಿ.

ಇದರಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗುತ್ತದೆ. ನಿಮ್ಮ ಅಕೌಂಟ್ ನಿಂದ ನಿಮ್ಮ ಸ್ನೇಹಿತರ ಖಾತೆಗೆ ಮಿಂಚಂಚೆಯನ್ನು ತಾನಾಗೇ ಕಳಿಸುತ್ತದೆ. ನಿಮ್ಮ ಸ್ನೇಹಿತರ ಫೋಟೋಗಳಿಗೆ ತಾನಾಗೇ ಕಳಿಸುತ್ತದೆ. ನಿಮ್ಮ ಸ್ನೇಹಿತರು ಸಹ ಪ್ರಯತ್ನಿಸಿದಲ್ಲಿ, ಅವರ ಖಾತೆಯು ಸಹ ಹ್ಯಾಕ್ ಆಗುತ್ತದೆ. ಒಬ್ಬರಿಂದ ಒಬ್ಬರಿಗೆ ಮೆಸೇಜುಗಳನ್ನು ಕಳಿಸುತ್ತಲೇ ಇರುತ್ತದೆ.

ನನ್ನ ಫ್ರೊಫೈಲ್ ನಲ್ಲಿ ಸಹ ಹ್ಯಾಕ್ ಆಗಿತ್ತು. ಈಗ ಅದನ್ನು ಸರಿ ಮಾಡಿದ್ದೇನೆ. ಈ ರೀತಿ ಆದಲ್ಲಿ ಏನು ಮಾಡಬೇಕು ಅನ್ನೋದರ ಬಗ್ಗೆ ಕೆಲವು ಸುರಕ್ಷತಾ ಸಲಹೆಗಳು.

1) ನಿಮ್ಮ ಸ್ನೇಹಿತರು ಯಾರೇ ಇರಲಿ, ಅವರ ಫ್ರೊಫೈಲ್ ನಲ್ಲಿ ಕಾಣೋ ಸಂಶಯಾಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ.

2) ಅದನ್ನು ಕ್ಲಿಕ್ ಮಾಡಿದರೆ, ಅಥವಾ ಜಾವಾ ಸ್ಕ್ರಿಪ್ಟ್ ನ್ನು ರನ್ ಮಾಡಿದರೆ, ಅದು ನಿಮ್ಮ ಈಮೇಲ್ ನ ಪಾಸ್ ವರ್ಡ್ ಕೇಳುತ್ತದೆ. ಅಥವಾ ನಿಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಕೇಳುತ್ತದೆ. (ಬ್ಲಾಗ್ ಗಳಲ್ಲಿ ಕಾಮೆಂಟ್ ಬರೆಯುವಾಗ ಪಾಸ್ ವರ್ಡ್ ಕೇಳುವುದು ಸಹಜ.) ಅವಾಗ ನಿಮ್ಮ ದೂರವಾಣಿ ಸಂಖ್ಯೆ ಅಥವಾ ಪಾಸ್ ವರ್ಡ್ ಕೊಡಬೇಡಿ.

3) ನೀವು ಕೊಟ್ಟ ನಂತರ, ನಿಮ್ಮ ಪ್ರೊಫೈಲ್ ನಲ್ಲಿ ಸಹ CHECK MY PROFILE FOR FREE MOBILE RECHARGE ಅಥವಾ SEE MY SEXY PHOTOS CLICK HERE ಅಂತಾ ತೋರಿಸುತ್ತಿದ್ದರೆ, ನಿಮ್ಮ ಪ್ರೊಫೈಲ್ ಹ್ಯಾಕ್ ಆಗಿದೆ ಅಂತಲೇ ಅರ್ಥ.

4) ಒಂದು ವೇಳೆ ನಿಮಗೆ ಗೊತ್ತಿಯೋ, ಗೊತ್ತಿಲ್ಲದೆಯೋ ನಿಮ್ಮ ಖಾತೆ ಹ್ಯಾಕ್ ಆದಲ್ಲಿ, ಮೊದಲು ನಿಮ್ಮ ಗೂಗಲ್ ಖಾತೆಯ ಪಾಸ್ ವರ್ಡ್ ಬದಲಾಯಿಸಿ.

5) ಕುಕೀಗಳನ್ನು ಹಾಗೂ ಟೆಂಪರರಿ ಇಂಟರ್ ನೆಟ್ ಫೈಲ್ ಗಳನ್ನು ಹಾಗೂ ಸಂಗ್ರಹಿಸಿಟ್ಟುಕೊಂಡ ಪಾಸ್ ವರ್ಡ್ ಗಳನ್ನು ಡಿಲೀಟ್ ಮಾಡಿ.

6) ನಿಮ್ಮ ಆರ್ಕುಟ್ ಖಾತೆಯ ಅಪ್ ಡೇಟ್ ಗಳು ಎಲ್ಲರಿಗೂ ಕಾಣುವುದನ್ನು ಮರೆ ಮಾಡಿ.

7) ಪ್ರೊಫೈಲ್ ಎಡಿಟ್ ಮಾಡಿ, about me ಕಾಲಮ್ ನ ಅಳಿಸಿ ಹಾಕಿ.

8) ಎಡಿಟ್ ಮಾಡಲು ಸಾಧ್ಯವಾಗದಿದ್ದಲ್ಲಿ, ಆತುರವಾಗಿ ಆರ್ಕುಟ್ ಖಾತೆಯನ್ನು ಡಿಲೀಟ್ ಮಾಡಬೇಡಿ, ಸುಮಾರು ಎಂಟು ಗಂಟೆಗಳ ತರುವಾಯ ಪ್ರಯತ್ನಿಸಿ, ಆಗ ಸಾಧ್ಯವಾಗುತ್ತದೆ. ಆಗಲಿಲ್ಲವಾದರೆ, ಒಂದೆರಡು ದಿನಗಳವರೆಗಾದರೂ ಕಾಯಬೇಕಾಗುತ್ತದೆ.

9) Phishing Attack ಅಥವಾ Report Abuse (ನಿಂದನೆ ವರದಿ) ವರದಿ ಮಾಡುವುದರಿಂದಲೂ ಸಹ ಇದನ್ನು ಸರಿ ಮಾಡಬಹುದು. ಇದರಿಂದ ನಿಮ್ಮ ಆರ್ಕುಟ್ ಖಾತೆ ಡಿಲೀಟ್ ಆಗುವ ಸಾಧ್ಯತೆಗಳಿವೆ.

10) ಈ ಲೇಖನವನ್ನು ಪ್ರಚಾರಪಡಿಸಿ. ನಿಮ್ಮೆಲ್ಲ ಸ್ನೇಹಿತರಿಗೂ ತಿಳಿಸಿ. ಹ್ಯಾಕಿಂಗ್ ವಿರುದ್ಧ ನಿಮ್ಮ ವೋಟು ಹಾಕಿ.


ಇಂತಿ,
ನಿಮ್ಮ ಪ್ರೀತಿಯ,
ಯಳವತ್ತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet