ಇಂದಿನ ಶಿಕ್ಷಣ ಮಟ್ಟ

ಇಂದಿನ ಶಿಕ್ಷಣ ಮಟ್ಟ

ಬರಹ

ಇಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಎಸ್.ಎಸ್.ಎಲ್ ಸಿ ಫಲಿತಾಂಶ ಹಾಗು ಪ್ರತಿಯೊಂದು ಶಾಲೆಯೂ ತನ್ನ ವಿದ್ಯಾರ್ಥಿಗಳಿಸಿರುವ ಅಂಕಗಳನ್ನು ಪ್ರಮುಖವಾಗಿ ಪ್ರಕಟಿಸಿ, ಪ್ರಸಕ್ತ ಸಾಲಿನ ದಾಖಲಾತಿಗೆ ಸಜ್ಜಾಗುತ್ತಿವೆ. ಕೆಲವೊಂದು ಶಾಲೆಯಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳ ಸಂಖ್ಯೆ ೧೦೦% ಮತ್ತು ಅದರಲ್ಲಿ ಶೇ ೯೯ ವಿದ್ಯಾರ್ಥಿಗಳು ೯೫% ಮೇಲೆ ಅಂಕಗಳನ್ನು ಗಳಿಸಿದ್ದಾರೆ. ಇದನ್ನೆಲ್ಲಾ ಓದಲು ಬಹಳ ಸಂತೋಷವಾಗುತ್ತದೆ. ಇಂತಹ ಪ್ರತಿಭಾವಂತ ಮಕ್ಕಳನ್ನು ಪಡೆದ ಮಾತಾಪಿತೃಗಳೇ ಪುಣ್ಯವಂತರು ಎನಿಸುತ್ತದೆ.
ಆದರೆ,
ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಹೀಗೆ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವೇ? ಈಗ್ಗೆ ೫೦ ವರ್ಷಗಳ ಹಿಂದೆ ೬೦% ಅಂಕ ಗಳಿಸಿದರೇ ಬಹು ದೊಡ್ಡ ಸಾಧನೆ ಮಾಡಿದಂತೆನಿಸುತ್ತಿತ್ತು. ಪ್ರಥಮ ಸ್ಥಾನ ಪಡೆದವರು ಹೆಚ್ಚೆಂದರೆ ೮೦ರಿಂದ ೯೦ರ ಒಳಗೆ ಶೇಖಡಾವಾರು ಅಂಕಗಳನ್ನು ಪಡೆದಿರುತ್ತಿದ್ದ. ಆದರೆ ಈಗ ಏನಾಗುತ್ತಿದೆ? ಮಕ್ಕಳ ಬುದ್ಧಿಮತ್ತೆ ಏರಿದೆಯೋ? ಶಿಕ್ಷಣದ ಮಟ್ಟ ಕುಸಿದಿದೆಯೋ ಅಥವಾ ಈ ಫಲಿತಾಂಶಗಳ ಹಿಂದೆ ಕಾಣದ ಕೈಗಳ ಆಟ ನಡೆದಿದೆಯೋ ಒಂದೂ ಅರ್ಥವಾಗುತ್ತಿಲ್ಲ.
ಉತ್ತಮ ಫಲಿತಾಂಶವನ್ನು ಪಡೆದು ಹೊರ ಬಂದ ವಿದ್ಯಾರ್ಥಿಗಳಲ್ಲಿ ಅಂತಹ ಅಸಾಧಾರಣ ಪ್ರೌಢಿಮೆಯನ್ನೇನೂ ಕಾಣಲು ಸಾಧ್ಯವಾಗುತ್ತಿಲ್ಲ.
ಇದು ಯೋಚಿಸಬೇಕಾದ ವಿಚಾರವಲ್ಲವೇ?
ಎ.ವಿ. ನಾಗರಾಜು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet