ಇಂದು ಮಾಡುವ ಕೆಲಸ ಈಗಲೇ ಮಾಡು
ಇಂದು ಮಾಡುವ ಕೆಲಸ ಈಗಲೇ ಮಾಡು
ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?"
ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು ಇರಲು ಸಾಧ್ಯ ಹೇಳಿ! "
ಪತ್ರಕರ್ತ ತಕ್ಷಣ " ಅದು ಹೇಗೆ? " ಎಂದ.
" ಹೇಗೆಂದರೆ, ಮನುಷ್ಯ ಹಣ ಸಂಪಾದನೆಗೊಸ್ಕರ ತನ್ನ ಆರೋಗ್ಯವನ್ನು ತ್ಯಾಗ ಮಾಡುತ್ತಾನೆ. ಅಪಾರ ಹಣವನ್ನು ತನ್ನ ಆರೋಗ್ಯವನ್ನು ಪುನಃ ಪಡೆಯಲು ಖರ್ಚುಮಾಡುತ್ತಾನೆ. ಇಂದಿನ ಸುಖದ ಕ್ಷಣಗಳನ್ನೆಲ್ಲ ಅನುಭವಿಸದೇ, ನಾಳಿನ ಮತ್ತಷ್ಟು ಸುಂದರ ಸುಖದ ಕನಸಿಗಾಗಿ ಕಾಯ್ತ್ತಾನೆ. ಭವಿಷ್ಯದಲ್ಲಿ ಅರಸುವ ಇವನ ಸುಖದ ಆ ನಾಳೆಗಳು , ಇವನಿಗೆ ಜೀವನ ಪೂರ್ತಿ ಸಿಗುವುದೇ ಇಲ್ಲ. ಸುಂದರವಾದ ಈ ಕ್ಷಣಗಳನ್ನು ಅನುಭವಿಸಲಿಲ್ಲ, ಕನಸಿನ ಆ ನಾಳೆಗಳು ಸಿಗಲಿಲ್ಲ. ಬದುಕಿರುವಷ್ಟು ಸಮಯ ನಾಳಿನ ಪ್ರತೀಕ್ಷೆಯಲ್ಲಿ ಕಳೆದು, ಕೊನೆಗೊಂದು ದಿನ ಏನನ್ನು ಪಡೆಯದೇ, ಸಾಧಿಸದೆ ಸೊನ್ನೆಯಾಗಿ ಸತ್ತು ಬಿಡುತ್ತಾನೆ." ಎಂದು ಮಾರ್ಮಿಕವಾಗಿ ನುಡಿದರು.
ಹೌದು, ಸುಂದರ ಕನಸಿನ ನಾಳೆಗಳು, ಪುನಃ ನಾಳೆಗಳಾಗದೆ ಇಂದಾದಾಗ ಬದುಕು ಸಂತಸಮಯವಾಗುತ್ತದೆ.
" ನಿನ್ನೆ ಸತ್ತಿಹುದು, ನಾಳೆ ಬರದಿರಬಹುದು ಆದರೆ ಇಂದು ನಿನ್ನ ಕೈಯಲ್ಲೇ ಇಹುದು " ಎನ್ನುತಾರೆ ಡಿ ವಿ ಜಿ.
" one in hand, worth two in bush." ಎನ್ನುವುದೂ ಇದನ್ನೇ.
ಈ ಕ್ಷಣಗಳನು ಹಾಳು ಮಾಡುವವನು ಭವಿಷ್ಯದಲ್ಲಿ ಏನೂ ಮಾಡಲಾರ. ನಾಳಿನ ಕನಸು ಇಂದಿನ ಕ್ಷಣಗಳ ಸಮರ್ಥ ಬಳಕೆಯ ಮೇಲೆ ನಿಲ್ಲುತ್ತದೆ. ಸುಂದರ ಭವಿಷ್ಯಕ್ಕೆ ಈ ಕ್ಷಣದ ತಯಾರಿಯೇ ಗಟ್ಟಿ ಅಡಿಪಾಯ.
ಇದನ್ನೇ ಹಿರಿಯರು " ನಾಳೆ ಮಾಡುವ ಕೆಲಸ ಇಂದು ಮಾಡು, ಇಂದು ಮಾಡುವ ಕೆಲಸ ಈಗಲೇ ಮಾಡು " ಎಂದಿರುವುದು.
ನೀವೇನು ಹೇಳುತ್ತಿರಿ ?
Comments
ಉ: ಇಂದು ಮಾಡುವ ಕೆಲಸ ಈಗಲೇ ಮಾಡು
In reply to ಉ: ಇಂದು ಮಾಡುವ ಕೆಲಸ ಈಗಲೇ ಮಾಡು by sathishnasa
ಉ: ಇಂದು ಮಾಡುವ ಕೆಲಸ ಈಗಲೇ ಮಾಡು
ಉ: ಇಂದು ಮಾಡುವ ಕೆಲಸ ಈಗಲೇ ಮಾಡು
In reply to ಉ: ಇಂದು ಮಾಡುವ ಕೆಲಸ ಈಗಲೇ ಮಾಡು by kavinagaraj
ಉ: ಇಂದು ಮಾಡುವ ಕೆಲಸ ಈಗಲೇ ಮಾಡು
ಉ: ಇಂದು ಮಾಡುವ ಕೆಲಸ ಈಗಲೇ ಮಾಡು
In reply to ಉ: ಇಂದು ಮಾಡುವ ಕೆಲಸ ಈಗಲೇ ಮಾಡು by makara
ಉ: ಇಂದು ಮಾಡುವ ಕೆಲಸ ಈಗಲೇ ಮಾಡು