ಇಂದು ಮಾಡುವ ಕೆಲಸ ಈಗಲೇ ಮಾಡು

ಇಂದು ಮಾಡುವ ಕೆಲಸ ಈಗಲೇ ಮಾಡು

 


ಇಂದು ಮಾಡುವ ಕೆಲಸ ಈಗಲೇ ಮಾಡು
 
ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ  ಅತ್ಯಂತ ಆಶ್ಚರ್ಯದ  ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?" 
ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು  ಇರಲು ಸಾಧ್ಯ ಹೇಳಿ! "
ಪತ್ರಕರ್ತ ತಕ್ಷಣ " ಅದು ಹೇಗೆ? " ಎಂದ. 
" ಹೇಗೆಂದರೆ, ಮನುಷ್ಯ ಹಣ ಸಂಪಾದನೆಗೊಸ್ಕರ ತನ್ನ ಆರೋಗ್ಯವನ್ನು ತ್ಯಾಗ ಮಾಡುತ್ತಾನೆ.  ಅಪಾರ ಹಣವನ್ನು ತನ್ನ ಆರೋಗ್ಯವನ್ನು ಪುನಃ ಪಡೆಯಲು ಖರ್ಚುಮಾಡುತ್ತಾನೆ.  ಇಂದಿನ ಸುಖದ ಕ್ಷಣಗಳನ್ನೆಲ್ಲ  ಅನುಭವಿಸದೇ, ನಾಳಿನ ಮತ್ತಷ್ಟು ಸುಂದರ ಸುಖದ ಕನಸಿಗಾಗಿ ಕಾಯ್ತ್ತಾನೆ.  ಭವಿಷ್ಯದಲ್ಲಿ ಅರಸುವ  ಇವನ ಸುಖದ ಆ  ನಾಳೆಗಳು ,  ಇವನಿಗೆ ಜೀವನ ಪೂರ್ತಿ ಸಿಗುವುದೇ ಇಲ್ಲ.  ಸುಂದರವಾದ ಈ ಕ್ಷಣಗಳನ್ನು ಅನುಭವಿಸಲಿಲ್ಲ, ಕನಸಿನ ಆ ನಾಳೆಗಳು ಸಿಗಲಿಲ್ಲ.  ಬದುಕಿರುವಷ್ಟು ಸಮಯ ನಾಳಿನ ಪ್ರತೀಕ್ಷೆಯಲ್ಲಿ ಕಳೆದು, ಕೊನೆಗೊಂದು ದಿನ ಏನನ್ನು ಪಡೆಯದೇ, ಸಾಧಿಸದೆ ಸೊನ್ನೆಯಾಗಿ ಸತ್ತು ಬಿಡುತ್ತಾನೆ." ಎಂದು ಮಾರ್ಮಿಕವಾಗಿ ನುಡಿದರು.
 
ಹೌದು,  ಸುಂದರ ಕನಸಿನ ನಾಳೆಗಳು, ಪುನಃ ನಾಳೆಗಳಾಗದೆ ಇಂದಾದಾಗ ಬದುಕು ಸಂತಸಮಯವಾಗುತ್ತದೆ.     
" ನಿನ್ನೆ ಸತ್ತಿಹುದು, ನಾಳೆ ಬರದಿರಬಹುದು ಆದರೆ ಇಂದು ನಿನ್ನ ಕೈಯಲ್ಲೇ ಇಹುದು " ಎನ್ನುತಾರೆ ಡಿ ವಿ ಜಿ.  
"  one in hand, worth two in bush."  ಎನ್ನುವುದೂ ಇದನ್ನೇ. 
 
 ಈ ಕ್ಷಣಗಳನು ಹಾಳು ಮಾಡುವವನು ಭವಿಷ್ಯದಲ್ಲಿ ಏನೂ ಮಾಡಲಾರ.  ನಾಳಿನ ಕನಸು ಇಂದಿನ ಕ್ಷಣಗಳ ಸಮರ್ಥ ಬಳಕೆಯ ಮೇಲೆ ನಿಲ್ಲುತ್ತದೆ. ಸುಂದರ ಭವಿಷ್ಯಕ್ಕೆ ಈ ಕ್ಷಣದ  ತಯಾರಿಯೇ ಗಟ್ಟಿ ಅಡಿಪಾಯ. 
ಇದನ್ನೇ ಹಿರಿಯರು " ನಾಳೆ ಮಾಡುವ ಕೆಲಸ ಇಂದು ಮಾಡು,  ಇಂದು ಮಾಡುವ ಕೆಲಸ ಈಗಲೇ ಮಾಡು " ಎಂದಿರುವುದು. 
 
ನೀವೇನು ಹೇಳುತ್ತಿರಿ ?

Comments