ಇಗ್ ಸುರು ಆತ್ ನೋಡ್ಪಾ 'ಸಿಎಂ'. ಅಂದ್ರೆ ಎಂಗಿರ್ಬೇಕು ಅನ್ನಾದು !?

ಇಗ್ ಸುರು ಆತ್ ನೋಡ್ಪಾ 'ಸಿಎಂ'. ಅಂದ್ರೆ ಎಂಗಿರ್ಬೇಕು ಅನ್ನಾದು !?

 

ಇನ್ಮ್ಯಾಗೆ  'ಸಿದ್ದು' ಅನ್ಬಾಡ್ರಿ. ಯಾವಾಗ್ಲೂ ಜಾಗಕ್ಕೆ ಬೆಲೆ ಅಲ್ಲವ್ರಾ ! ಈಗ್ ಅವ್ರು ಸಿದ್ದರಾಮಣ್ಣನೋರು, ನಮ್ಮ ಒಸ ಸಿಎಮ್ ಸಾಯೇಬೃ ಅನ್ನೋದ್ ಮರಿಬ್ಯಾರ್ದು !  ಏನಂತೀರ ? ಪಾಪ, ಯವಾಗ್ಲೂ ನಗ್ನಗ್ತಾ ಇರ್ತಾರೆ.  ಔದು. ಆ ಸದಾನಂದ್ ಗೌಡ್ರೂ ಇಂಗೇ ಇದ್ರಪ್ಪ. ಅದೇನಾತೋ ಏನೋ ಕೆಟ್ ಗಾಳಿ ತಗ್ಲಿ. ಒಳ್ಳೆ ಊವ್ನಂಗಿದ್ದೋರು ನಲಗಿ ಓದೃ ಇನ್ನು ಐದ್ ವರ್ಸ ಕಾದು ಒಳ್ಳೆ ಜಾಗ ಸಿಕ್ರೆ ಮತ್ ನಗ್ತಾರೊ ಎನೋ ಗೊತ್ತಿಲ್ಲ. ನಗೋದು, ಅಳೋದು ರಾಜ್ಕೀಯ್ದಾಗೆ   ಮಾಮೂಲು. ಅದೇ ಪಾಕಿಸ್ತಾನ್ ದಾಗೆ ನೋಡ್ರಿ. ಜೈಲಲ್ ಆಕಿ, ಬೈದು ಅಂದು ಆಡಿ ಜೈಲ್ನಾಗೆ ಆಕಿದ್ ಆಸಾಮಿ, ಪ್ರೆಸ್ನಾಗೆಲ್ಲಾ ರಂಪ ಮಾಡಿದ್ ಮನ್ಸನ್ನೇ ಮತ್ ತಲೆಮ್ಯಾಲೆ ಒತ್ಕಂಡ್ ತಿರಗಾಡ್ತವ್ರೆ    ಆಜನ. ಪಾಪ ಬ್ಯಾರೆ ಯಾರೂ ಇಲ್ವಲ್ಲಾ. ಆ ಇಮ್ರಾನ್ ಖಾನ್ ಏನೇನೋ ಆಸೆ ಮನ್ಸ್ ನಲ್ಲಿ ಮಡಗ್ ಕೊಂಡು ಬಂದ. ಏನೂ ಉಪ್ಯೋಗಿಲ್ದೆ ಓತು.
 
ಸಿದ್ರಾಮಣ್ಣಾರ್ ಇಸ್ಯಕ್ಕೆ ಬರ್ವ !   ದಿಲ್ಲಿ ಓಗಿದ್ದೂ ಆತು, ೨೯ ಜನನ ಬಗಲ್ನಲ್ಲಿ ಮಡಗ್ಕೊಂಡಿದ್ದೂ ಆತು. ಈಸ್ವರಪ್ಪ ಅಲ್ಲಿ ಅಮ್ಮಾರತ್ರ ಓಗಿ ಅತೃ ಏನಾಗ್ಲಿಲ್ಲ. ಎಲೆಕ್ಸನ್ ನಾಗೆ ಸೋತವ್ರೆ. ಬೆರ್ತ್ ಕೊಡೋದ್ ಎಲ್ಲಿಂದ ? ಕೊಟ್ರೆ ಕೊಟ್ರೇಸಿ ಮತ್ತೆ ಅವೃ, ಇವ್ರು ಸುಮ್ನೆ ಬಿಟ್ಟಾರ? ಈಗ್ ಸುಮ್ನಿರೋದೆ ವಾಸಿ.
 
ಸಂಕಟ ನಂಬರ್ ೧ :
 
ಬೆಂಳೂರಿಗೆ ನೀರಿನ್ ಸಂಕ್ಟ ಬಂದದೆ. ಯೋಚ್ನೆ ಮಾಡ್ಬ್ಯಾಡ್ರಿ ಅಂದಸ್ಟೆ ಅಂದ್ ಸುಮ್ನಾದ್ರೆ ಎಂಗೆ. ದ್ಯಾವ್ರ್ ಕಣ್ ತೆರೆದ್ನೋಡಿ ಮುಂದಿನ್ ತಿಂಗ್ಳು ಏನಾರು ಪವಾಡ ಮಾಡಾನು !
 
ಪ್ರೆಸ್ನೋರತ್ರ ಉಸಾರು : ಸಂಕಟ ನಂಬರ್  ೨ (ಇನ್ ಐದ್ ವರ್ಸ ಉಸಾರಾಗೆ ಇರಿ ಸಾಯೇಬ್ರೆ)
 
ಈಗ್ ಸುರು ಆತ್ ನೋಡಪ್ಪ ನಮ್ಮ್ ಸಿ.ಎಮ್. ಆಟ. ಎಲ್ರೂ ಕೆಕ್ಕರ್ಸ್ಕೊಣ್ಡ್ ನೋಡ್ತಾವ್ರೆ. ಸಿ.ಎಮ್. ಏನಂದ್ರು. ಅದೇನಾತು  ಇದೇನಾತು ಅಂತ ಮಾತಾಡ್ತಾರೆ. ಅವರ್ನ ಒಪ್ಪಕ್ಕೀಟ್ಕಂಡು ಒಂದ್ ಅಕ್ಸರ ಏಳೋವಾಗ್ಲೂ ಇಂದೇ ಮುಂದೆ ನೋಡ್ಕಂಡು ಇರ್ಬೇಕು. ಅದೇ... ನಂ ಮಾರಾಷ್ಟ್ರದ ಪಾಟೀಲ್ ಏನೋ ಮಾತಾಡಿ, ಎಡ್ವಟ್ ಮಾಡ್ಕಂಡ. ಗ್ಯಪ್ಐತಾ ? 'ಇತ್ನಾ ಬಡಾ ಶಹರ್ ಮೇ ಐಸಾ ಚೋಟಾ ಮೋಟಾ ಚೀಜ್ ಹೊತೆ ರಹ್ತೆ ಹೈ'. ಅಂದ್ ಕೆಲ್ಸ ಕಾಳ್ಕಂಡ ! ಅವಯ್ಯನ್ ಮನಸ್ನಾಗೆ ಏನೂ ಕೆಟ್ ವಿಸ್ಯ ಇರ್ಲಿಲ್ಲ. ಆದ್ರೆ ಪ್ರೆಸ್ನೋರ್ಗೆ ಏಳ್ಕೆ ಕೊಟ್‌ನಲ್ಲಾ ಅದು ಓಸೀ ಈಚಾರ ಮಾಡಿ ಮಾಡ್ಲಿಲ್ಲ. ಅದೇ ನೋಡಿ ಎಡ್ವಟ್ ಆಗಿದ್ದು.
 
ಯಾಕ್ ಎವೆಲ್ಲಾ ಏಳ್ದೆ ಅಂದ್ರೆ. ಯಾವಾಗ್ಲೂ ಉಸ್ರು ಡೋವಾಗ್ಲೂ ವಿಪಕ್ಸ್‌ಡೋರ್‌ಗೆ ಮಾತಾಡಕ್ಕೆ ಚಾನ್ಸ್ ಕೊಡ್ಬಾರ್ದು; ಅನ್ನೋ ಮಾತ್ಗೆ ಎಳಿದ್ದು ! 

Comments

Submitted by venkatesh Tue, 05/21/2013 - 07:39

ಈತರಹದ ಮಾತುಗಳನ್ನು ನಾನು ಚಿಕ್ಕವನಾಗಿದ್ದಾಗ ನಮ್ಮೂರಿನಲ್ಲಿ ಕೇಳಿ ರೂಢಿ. ಈಗ ಅಲ್ಲಿನ ಜನರೇ ಅವೆಲ್ಲಾ ಮಾರ್ತಿದಾರೆ. ಭಾಷೆಯ ಸೊಗಡನ್ನು ಉಳಿಸುವ ಕಾರ್ಯದಲ್ಲಿ ನಮ್ಮ ಧಾರವಾಡದವರು, ಮಂಗಳೂರಿನವರು ಮೆಚ್ಚುಗೆಗೆ ಪಾತ್ರರು. ಎಲ್ಲಕ್ಕಿಂತ ತಮಿಳರು, ಕೊಂಕಣಿಗಳು, ತುಳುಕನ್ನಡಿಗರು, ತೆಲುಗಿಣವರು, ತಮಿಳರು, ಮಲಯಾಳಿಗಳು, ಬೆಂಗಾಳಿಗಳು ಪ್ರಮುಖರು. ಕನ್ನಡದವರು ಒಬ್ಬ ಕನ್ನಡಿಗ ಮತ್ತೊಬ್ಬ ಕನ್ನಡಿಗನ್ಣ ಭೆಟ್ಟಿಯಾಗಲು ಇಚ್ಚಿಸುವುದಿಲ್ಲ. ಅದೇನೋ ದೇವರೇ ಬಲ್ಲ. ಈ 'ಕರ್ ನಾಟಕ್ ಜನಗಳ ವಿಚಾರ' !
Submitted by nageshamysore Tue, 05/21/2013 - 17:57

In reply to by venkatesh

ಅಡ್ಬಿದ್ದೆ ವೆಂಕ್ಟೇಶಣ್ಣೊರ್ಗೆ, ಅಯ್ಯೊ ಸುಮ್ಕಿರಿ ಸಾರ್, ಇಂಗೆಲ್ಲ ಅನ್ಬೋದಾ ನೀವು? ನಮ್ಮಳ್ಳಿ ಜನ ಸದಾ ಮಾತಾಡದು ಇಂಗೆಯಾ...ಬೇಕಾದ್ರೆ ನೀವೆ ಬಂದು ನೋಡಿ ನಮ್ಮುರ್ನಾಗೆ...ಹೂಂ..ಮತ್ತೆ! -ನಾಗೇಶ ಮೈಸೂರು, ಸಿಂಗಪುರದಿಂದ
Submitted by venkatesh Wed, 05/22/2013 - 11:41

In reply to by nageshamysore

ಬೊ ಪಸಂದಾಗಿ ಮಾತಾಡ್ತಿ ಕಣಣ್ಣೋ. ಅಲ್ಲ ಸಿಂಗ್ ಪೂರ್ಡಾಗಿದ್ದು ಅಳ್ಳಿ ಬಾಸೆ ಸೊಗ್ದು ನಿನ್ ಮಾತ್ನಾಗೆ ಕಾಂತಟಲ್ಳಪ್ಪೋ ಮಾರಾಯ. ನಮ್ಮ ಕನ್ನಡಾದ್ ಉದ್ಗೀನೇ ಮದ್ವೆ ಆಗಿಯ ಎಂಗೆ, . ಈ ಬಾಸೆ ಪಸಂದಾಗೈತೆ ಅನ್ನೋವೆ ಬ್ಯಾರೆ ವಿದೇಸಿ ನೀ ಕಟ್ಕಂಡಿಯ ಎಲ್ಲಾರು ? ನಿನ್ನ್ ಮನಸ್ ನಾ ಕಾಣೆನಾ ? ಇಂಗದೆ ಅಂತ ಬ್ಯಾಸಿರ್ಕೆ ಮಾಡ್ಕಾ ಬ್ಯಾಡ ಕಾಣಣ್ಣಾ !
Submitted by venkatesh Tue, 05/21/2013 - 16:27

In reply to by kavinagaraj

ಸದ್ಯಕ್ಕೆ ಅಗ್ಗದ ಮದ್ಯ ಬ್ಯಾಡ ಅಂತ ಏನೊ ಸ್ಟೇಟ್ ಮೆಂಟ್ ಕೊಟ್ಟವರ್‌ಲಪ್ಪ. ಭಾರೀ ಸ್ಮಾರ್ಟ್ ಆಗ್ ವ್ಯಾವಾರ್‌ಸ್ಟಾವ್ರೇ ಸಿ.ಎಂ. ಸಾಹೇಬ್ರು !
Submitted by partha1059 Wed, 05/22/2013 - 19:42

ಅಯ್ಯೊ ವೆಂಕ್ಟೇಸಪ್ನರೋ ನಿಮ್ಗೆ ಅರ್ಥ್ವಾಗ್ಲಿಲ್ವೆ ಸಿದ್ದು ಪಿಲಾನು , ಅತ್ಲಾಗೆ ಅಕ್ಕಿ ಒಂದ್ರುಪಾಯ್ಗೆ ಕೊಟ್ಟಂಗ್ ಮಾಡೋದು, ಇತ್ಲಾಗೆ ಹೆಂಡಾಕುಡ್ಸಿ ಅದ್ನಾ ಕಿತ್ಕಾಳೋದು, ಹೆಂಗೈತ್ ಅವಯ್ಯನ್ ತಲೆ. ಒಟ್ನಲ್ಲಿ ನಾವೆಲ್ಲ ಬ್ಯಾ.ಬ್ಯಾ......... ಹ್ಹ ಹ್ಹ......ಹಹಹಹ್ಹ
Submitted by venkatesh Wed, 05/22/2013 - 20:25

In reply to by partha1059

ಒಸ ಸಿಎಮ್ ಇಂದೆ ಫಿನನ್ಸ್ ನಗೆ ಇದ್ರು. ದ್ಯಾವೇಗೌಡ್ರ ಕಾಲ್ದಾಗೆ. ಇಸ್ಯ ತಿಳ್ಕಂಡವ್ರೆ. ಒಸಿ ಸುಮ್ಕಿರಿ ನೋಡ್ವ ಏನ್ಮಾಡ್ತಾರೆ ಅಂತವ... ರಾಜ್ಕಾರ್ಣ ಸುಲ್ಬಲ್ಲ ನಮ್ಗು ತಿಳಿತದೆ. ಕಾಲ್ ಇಡ್ದು ಎಳ್ಯೋಗೇನು ಕಮ್ಮಿನಾ ಸಿವ ?