ಇಚ್ಚಿಸುವೆನೈ ...
ತಿವಿಸಿಕೊಳ್ಳಲಿಚ್ಚಿಸುವೆನೈ ನೀ ವರಾಹನಾದರೆ
ಬಗೆಸಿಕೊಳ್ಳಲಿಚ್ಚಿಸುವೆನೈ ನೀ ನಾರಸಿಂಹನಾದರೆ
ತುಳಿಸಿಕೊಳ್ಳಲಿಚ್ಚಿಸುವೆನೈ ನೀ ವಾಮನದೇವನಾದರೆ
ಕೊಚ್ಚಿಕೊಳ್ಳಿಸಲಿಚ್ಚಿಸುವೆನೈ ನೀ ಪರುಶುರಾಮನಾದರೆ
ಚುಚ್ಚಿಸಿಕೊಳ್ಳಲಿಚ್ಚಿಸುವೆನೈ ನೀ ಶ್ರೀರಾಮನಾದರೆ
ತರಿಸಿಕೊಳ್ಳಲಿಚ್ಚಿಸುವೆನೈ ನೀ ವಾಸುದೇವನಾದರೆ
ನೀ ಭುವಿಗೆ ಬಂದ ಕಾರಣವ ನಾ ಮರೆಯೆ
ನಾ ಭೂಮಿಗೆ ಬಂದ ಕಾರಣವೇನೋ ಅರಿಯೆ
ಕಾಲಕಾಲಕೆ ಭೂಮಿಗೆ ಬಂದ ಭಗವಂತನ ನೆನೆಯುತ
ನಾ ಭುವಿಗೆ ಬಂದ ಈ ದಿನದಂದು
ತುಳಸೀದಳವನ್ನರ್ಪಿಸುವೆನೈ ಅಚ್ಯುತ
Comments
ಉ: ಇಚ್ಚಿಸುವೆನೈ ...
:) ಈಗ ಅನುಭವಿಸುತ್ತಿರುವುದೂ ಇವೇ ಅಲ್ಲವೇ? ತಿವಿಸಿಕೊಳ್ಳುವುದು, ತುಳಿಸಿಕೊಳ್ಳುವುದು, ಚುಚ್ಚಿಸಿಕೊಳ್ಳುವುದು,. . . . .!!!
In reply to ಉ: ಇಚ್ಚಿಸುವೆನೈ ... by kavinagaraj
ಉ: ಇಚ್ಚಿಸುವೆನೈ ...
ಅನಂತ ಧನ್ಯವಾದಗಳು ಕವಿಗಳೇ ... ಸತ್ಯವಾದ ಮಾತು :-)