ಇಚ್ಚಿಸುವೆನೈ ...

Submitted by bhalle on Tue, 05/10/2016 - 21:23

ತಿವಿಸಿಕೊಳ್ಳಲಿಚ್ಚಿಸುವೆನೈ ನೀ ವರಾಹನಾದರೆ
ಬಗೆಸಿಕೊಳ್ಳಲಿಚ್ಚಿಸುವೆನೈ ನೀ ನಾರಸಿಂಹನಾದರೆ
 
ತುಳಿಸಿಕೊಳ್ಳಲಿಚ್ಚಿಸುವೆನೈ ನೀ ವಾಮನದೇವನಾದರೆ
ಕೊಚ್ಚಿಕೊಳ್ಳಿಸಲಿಚ್ಚಿಸುವೆನೈ ನೀ ಪರುಶುರಾಮನಾದರೆ
 
ಚುಚ್ಚಿಸಿಕೊಳ್ಳಲಿಚ್ಚಿಸುವೆನೈ ನೀ ಶ್ರೀರಾಮನಾದರೆ
ತರಿಸಿಕೊಳ್ಳಲಿಚ್ಚಿಸುವೆನೈ ನೀ ವಾಸುದೇವನಾದರೆ
 
ನೀ ಭುವಿಗೆ ಬಂದ ಕಾರಣವ ನಾ ಮರೆಯೆ
ನಾ ಭೂಮಿಗೆ ಬಂದ ಕಾರಣವೇನೋ ಅರಿಯೆ
 
ಕಾಲಕಾಲಕೆ ಭೂಮಿಗೆ ಬಂದ ಭಗವಂತನ ನೆನೆಯುತ
ನಾ ಭುವಿಗೆ ಬಂದ ಈ ದಿನದಂದು 
ತುಳಸೀದಳವನ್ನರ್ಪಿಸುವೆನೈ ಅಚ್ಯುತ