ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯಲು ಹೊರಟರೆ...
ಅಲ್ಲೊಂದು ನಾಯಿಗೆ ಕಿಡಿಗೇಡಿಗಳು ಹುಲಿಯ ಪೇಂಟ್ ಹಚ್ಚಿ ಬಿಟ್ಟಿದ್ದರು. ಆ ನಾಯಿ ಸೀದಾ ಕಾಡಿಗೆ ಹೋಗಿ ಹುಲಿಗಳ ಮದ್ಯೆ ನಾನು ನಿಮ್ಮ ರಾಜ ದೇವರು ನನ್ನನ್ನು ಕಳಿಸಿದ್ದಾರೆ ಎಂದು ಬಿಲ್ಡಪ್ ಕೊಟ್ಟಿತ್ತು. ಅದು ಅಲ್ಲಿ ರಾಜನಾಗಿ ಖುಷಿಯ ಜೀವನ ನಡೆಸುತಿತ್ತು. ಇದು ಅಲ್ಲೇ ಪಕ್ಕದೂರಿನ ನಾಯಿಗೆ ಇಷ್ಟ ವಾಗಿರಲಿಲ್ಲ ಹೇಗಾದರೂ ಮಾಡಿ ಅದರ ಮುಖಕ್ಕೆ ಮಸಿ ಬಳಿಯಬೇಕು ಎಂದು ನಿರ್ಧರಿಸಿ ಬಿಟ್ಟಿತ್ತು ಅದಕ್ಕಾಗಿ ಸಮಯ ಕಾಯುತಿತ್ತು.
ಆ ಸಮಯ ಬಂದೇ ಬಿಟ್ಟಿತು ಅಂದು ಎಲ್ಲಾ ಹುಲಿಗಳು ಕೂತಿದ್ದವು. ರಾಜ ಹುಲಿ (ನಾಯಿ) ಎದುರಿಗೆ ಬಂದು ಮಾತಾಡ ಬೇಕಿತ್ತು. ಮಾತು ಆರಂಭಿಸುವಾಗ ಮೇಲಿಂದ ಈ ನಾಯಿ ಒಂದು ಕಪ್ಪು ಪೈಂಟ್ ನ ಡಬ್ಬ ತಂದು ಕಾಯುತಿತ್ತು. ಮೇಲೆ ಬರುವ ಮೊದಲೇ ಪೈಂಟ್ ಡಬ್ಬ ಕೆಳಗೆ ಹಾಕಿತು. ಹುಲಿಯ ವೇಷದಲ್ಲಿದ್ದ ನಾಯಿ ಸ್ವಲ್ಪದರಲ್ಲೇ ಬಚಾವ್ ಆಗಿತ್ತು. ತಮ್ಮ ರಾಜನಿಗೆ ತೊಂದರೆ ಕೊಟ್ಟ ನಾಯಿಯನ್ನು ಉಳಿದ ಹುಲಿಗಳು ಓಡಿಸಿದವು. ಬದುಕಿದೆಯ ಬಡ ಜೀವವೇ ಎಂದು ಅಲ್ಲಿಂದ ಓಟಕ್ಕಿತ್ತು ಜೀವ ಉಳಿಸಿಕೊಂದಿತ್ತು ಆ ಕುತಂತ್ರಿ ನಾಯಿ. ಆದರೆ ಅದಾಗಲೇ ಅದರ ಕಾಲು ಮುಖ ಕಪ್ಪು ಪೈಂಟ್ ಅಂಟಿಕೊಂಡಿತ್ತು. ಯಾರದೋ ಮುಖ ಕಪ್ಪಾಗಿಸುತ್ತೇನೆ ಎಂದು ಕೊಂಡ ನಾಯಿ ತನ್ನದೇ ಮುಖ ಕಪ್ಪಾಗಿಸಿತ್ತು.
ಕಥೆ ಹಾಗಿರಲಿ ಬೇರೆಯವರ ಮುಖ ಕ್ಕೆ ಕಪ್ಪು ಮಸಿ ಬಳಿದುಸಮಾಜದಲ್ಲಿ ಅವನ ತೇಜೋ ವಧೆ ನಡೆಸುವ ಇದೇ ನಾಯಿಜಾತಿಗೆ ಸೇರಿದ ಅವಿವೇಕಿಗಳು ನಮ್ಮ ಸಮಾಜದಲ್ಲೂ ಬಹಳಷ್ಟಿದ್ದಾರೆ ನೋಡಿ, ಬಹುಶ ಇಂತಹವರು ಇನ್ನೊಬ್ಬರ ಕಾಲೆಳೆಯುವುದರಲ್ಲಿ ಎಷ್ಟೊಂದು busy ಇರುತ್ತಾರೆ ಎಂದರೆ ಅದೇ ಅವರ ಫುಲ್ ಟೈಮ್ ಉದ್ಯೋಗ ಆಗಿರುತ್ತದೆ. ತಾವು ಏನೂ ಮಾಡದೆ ಕೊಚ್ಛೆಯಲ್ಲಿ ಬಿದ್ದಿರುವ,ಆ ಮೂಲಕ ಮೈ ಎಲ್ಲಾ ಕಪ್ಪಾಗಿರುವ ಇಂತಹ ನಾಯಿ ಜಾತಿ ಯ ಮಂದಿ. ಎದುರಿಗಿದ್ದವನ ಮುಖಕ್ಕೆ ಒಂದಿಷ್ಟು ಮಸಿ ಬಳಿದು ವಿಜಯೋತ್ಸವ ಆಚರಿಸುತ್ತಾರೆ. ಅಲ್ಲಿ ನಿಜಕ್ಕಾದರೆ ಅವನ ಮುಖ ಮಾತ್ರ ಕಪ್ಪಾಗಿದೆ, ಇವನ ಮೈ ಕೈ ಪುರಾ ಕಪ್ಪಾಗಿರುತ್ತದೆ.
“ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯಬೇಕೆಂದು ನೀವು ಹೊರಟರೆ ಮೊದಲು ಕಪ್ಪಾಗುವುದು ನಿಮ್ಮದೇ ಕೈ ನೆನಪಿಡಿ."
-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ